ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 11 ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರು ಪ್ರಬಲವಾಗಿ ಪ್ರತಿವಾದ ಮಂಡಿಸಿ, ರೇಣುಕಾಸ್ವಾಮಿಯಯ ಕೊಲೆ ಪೂರ್ವ ನಿಯೋಜಿತವಲ್ಲವೇ ಎಂಬ ಗಂಭೀರ ಪ್ರಶ್ನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
ವಾದ ಮುಂದುವರಿಸಿ.. ರೇಣುಕಾಸ್ವಾಮಿಯು ಪವಿತ್ರಾಗೌಡಗೆ ಗೌತಮ್ ಎಂಬ ಹೆಸರಿನಲ್ಲಿ 2024 ಫೆ.27ರಿಂದ ಇನ್ಸ್ಸ್ಟಾಗ್ರಾಂ ಮೂಲಕ ಮೆಸೇಜ್ ಮಾಡುತ್ತಾನೆ. ಆದರೆ ಫೆಬ್ರುವರಿಯಲ್ಲಿ ಬಂದಂತಹ ಮೆಸೇಜ್ಗೆ ಜೂನ್ನಿಂದ ರೇಣುಕಾಸ್ವಾಮಿಗೆ ಕಾಂಟ್ಯಾಕ್ಟ್ ಬಂದ ಪವಿತ್ರಾಗೌಡ, ಟ್ರ್ಯಾಪ್ ಮಾಡುವಂತಹ ಅವಶ್ಯಕತೆ ಏನಿತ್ತು? ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಅಥವಾ ರೇಣುಕಾಸ್ವಾಮಿಯ ಇನ್ಸ್ಸ್ಟಾಗ್ರಾಂ ಅಕೌಂಟ್ ಅನ್ನು ಬ್ಲಾಕ್ ಮಾಡಬಹುದಿತ್ತು.
ಪವನ್ ನಂಬರ್ ನೀಡಿ ಪವಿತ್ರಾಗೌಡ ಹೆಸರಲ್ಲಿ ಚಾಟಿಂಗ್ ನಡೆದಿದೆ. ಆರೋಪಿಗಳಾದ ರಾಘವೇಂದ್ರ, ಅನುಕುಮಾರ್ ಮತ್ತು ಜಗ್ಗ ನನ್ನು ಬಳಸಿ ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿರುವುದು ಪೂರ್ವ ನಿಯೋಜಿತ. ರೇಣುಕಾಸ್ವಾಮಿಯನ್ನು ಜೂ.8ರಂದು ಅಪಹರಣ ಮಾಡಲಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್ಗೆ ಕರೆತಂದಾಗ ಆಗಲೇ ಶೆಡ್ ಒಳಗೆ ಹಲವರಿದ್ದರು. ಆರೋಪಿಗಳಾದ 3,4,5,6,7,8 7,9 ಶೆಡ್ನಲ್ಲಿರುವುದು ಪತ್ತೆ ಆಗಿದೆ. ಈ ಕೃತ್ಯ ಪ್ರೀ ಪ್ಲ್ಯಾನ್ ಎಂಬ ಶಂಕೆಯನ್ನು ಎಸ್ಪಿಪಿ ಪ್ರಬಲವಾಗಿ ಪ್ರತಿವಾದಿಸಿದರು.