ಫೆಬ್ರವರಿ 19 ಅಥವಾ 20 ರಂದು ದೆಹಲಿಯ ನೂತನ ಸಿಎಂ ಪದಗ್ರಹಣಕ್ಕೆ ವೇದಿಕೆ ಸಜ್ಜಾಗಿದೆ. ಆದ್ರೆ ಇದಕ್ಕೂ ಮುನ್ನ ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಬೇಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾದ ನಾಯಕರಿಗೆ ದೆಹಲಿಯ ಸಿಎಂ ಪಟ್ಟ ಒಲಿಯಲಿದೆ.

ಹೀಗಾಗಿ ಫೆಬ್ರವರಿ 18 ರಂದು ದೆಹಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದೆ. ದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್ ರನ್ನ ಸೋಲಿಸಿರುವ ಪರ್ವೇಶ್ ವರ್ಮಾ ದೆಹಲಿಯ ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಾಷ್ಟ್ರ ರಾಜಧಾನಿಯ ಸಿಎಂ ಪದಗ್ರಹಣದ ಜೊತೆ ಜೊತೆಗೆ, ದೆಹಲಿಗೆ ಈ ಬಾರಿ ಇಬ್ಬರು ಡಿಸಿಎಂ ನೇಮಕಕ್ಕೆ ಬಿಜೆಪಿ ಒಲವು ತೋರಿದೆ ಎನ್ನಲಾಗಿದೆ. ಪಂಜಾಬಿ ಸಿಖ್ಖ್ ಹಾಗೂ ಬಿಹಾರದ ಪೂರ್ವಾಂಚಲ ನಾಯಕರಿಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ.