ಬೆಂಗಳೂರು ನೋಡೋದಕ್ಕೆ ಹೇಗೆ ಬೃಹತ್ ನಗರವಾಗಿ ಇವತ್ತು ಜಗತ್ತಿನ ಮುಂದೆ ಗುರುತಿಸಿಕೊಂಡಿದೆಯೋ ಅಷ್ಟರಮಟ್ಟಿಗೆ ಬೆಂಗಳೂರಿನ ಒಡಲೊಳಗೆ ಸಾಕಷ್ಟು ಸಮಸ್ಯೆಗಳು ಕೂಡ ತಾಂಡವ ಮಾಡುತ್ತಿದೆ, ಇವತ್ತು ಬೆಂಗಳೂರಿಗೆ ಬಂದವರು ಯಾರು ಬೇಕಾದರೂ ಬೆಂಗಳೂರಿನ ಎರಡು ಮುಖಗಳನ್ನು ನೋಡೋದಕ್ಕೆ ಸಾಧ್ಯ ಆಗುತ್ತೆ ಒಂದು ಸಿಲಿಕಾನ್ ಸಿಟಿಯಾಗಿ, ಗಾರ್ಡನ್ ಸಿಟಿಯಾಗಿ, ಸ್ಟಾರ್ಟ್ ಅಪ್‌ಗಳ ಹಬ್ ಆಗಿ ನೋಡುತ್ತಾರೆ, ಮತ್ತೊಂದು ಬೆಂಗಳೂರಿನಲ್ಲಿರುವ ಅವ್ಯವಸ್ಥೆಗಳು ಅದರಲ್ಲೂ ಸ್ಲಂ ನಿವಾಸಿಗಳು ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವಂತಹ ಶೋಚನೀಯ ಸ್ಥಿತಿಗಳನ್ನು ಕೂಡ ಬೆಂಗಳೂರಿನಂತ ಮಹಾನಗರದಲ್ಲಿ ಕಾಣಬಹುದು, ಹೀಗಾಗಿ ಬೆಂಗಳೂರಿನ ಹಿರಿಯ ನಾಗರಿಕರು ಬೆಂಗಳೂರಿನ ಮಿನಿ ಜಗತ್ತು ಅಂತಲೇ ಕರೆಯುತ್ತಾರೆ.
ಇವತ್ತು ಬೆಂಗಳೂರಿನಲ್ಲಿ ದೊಡ್ಡವರ, ದುಡ್ಡಿರುವವರ, ಸದಾ ಎಸಿ ರೂಮಿನಲ್ಲಿ ಕುಬೇರನ ಮಕ್ಕಳಂತೆ ವಾಸಿಸುವವರ ಸಣ್ಣ ಸಮಸ್ಯೆಗಳನ್ನಾದರೂ ನಮ್ಮ ಸರ್ಕಾರ ದೊಡ್ಡ ಕಿವಿ ಕೊಟ್ಟು ಕೇಳುತ್ತದೆ ಇದು ಕೇವಲ ಇಂದಿನ ಸರ್ಕಾರದ ಕಥೆಯಲ್ಲ ಈ ಹಿಂದಿನ ಸರ್ಕಾರದ ಕಥೆಯು ಕೂಡ ಇದೇ ಆಗಿತ್ತು. ಹೀಗಾಗಿ ಬೆಂಗಳೂರಿನ ಬಡ ಜನರು ಸ್ಲಂ ನಿವಾಸಿಗಳು ನಿರಂತರವಾಗಿ ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಇವತ್ತು ಬೆಂಗಳೂರಿನ ಸ್ಲಂಗಳಲ್ಲಿ ವಾಸಿಸುವ ನಾಗರಿಕರ ಪರಿಸ್ಥಿತಿ ಹೇಗಿದೆ ಅಂದ್ರೆ ಮುಂದಿನ ದಿನಗಳಲ್ಲಿ ನಾವು ಬದುಕಿರುತ್ತೇವೋ ಇಲ್ಲವೋ ಎಂಬ ಭಯದಿಂದಲೇ ಬದುಕುವಂತಾಗಿದೆ ಅಷ್ಟರ ಮಟ್ಟಿಗೆ ಬೆಂಗಳೂರಿನ ಸ್ಲಂ ನಿವಾಸಿಗಳು ಅಭದ್ರತೆಯಿಂದ ಬದುಕುತ್ತಿದ್ದಾರೆ
ಇವತ್ತು ಬೆಂಗಳೂರಿನ ಬಹುತೇಕ ಸ್ಲಂಗಳಲ್ಲಿ ವಾಸಿಸುವವರಿಗೆ ತಮ್ಮ ತಾತ್ಕಾಲಿಕ ಮನೆಗಳ ಹಕ್ಕು ಪತ್ರಕ್ಕಾಗಿ ಹಲವು ದಶಕಗಳಿಂದ ಹೋರಾಟವನ್ನು ಮಾಡುತ್ತಿದ್ದಾರೆ, ಇವತ್ತು ಬೆಂಗಳೂರಿನ ಯಾವುದೇ ಸ್ಲಂಗಳಿಗೆ ಭೇಟಿ ನೀಡಿದರು, ಅಲ್ಲಿ ದುರ್ವಾಸನೆ, ಚರಂಡಿಗಳ ಅವ್ಯವಸ್ಥೆ, ಕುಡಿಯೋದಕ್ಕೆ ಶುದ್ಧ ನೀರಿಲ್ಲ, ಶೌಚಾಲಯದ ಕೊರತೆಯಿಂದ ಜನರ ಪರದಾಟ, ಮಳೆ ಬಂದಾಗ ಮನೆ ಯಾವಾಗ ಕುಸಿಯುತ್ತದೆ ಇಂತಹ ನಾನಾ ರೀತಿಯ ಸಮಸ್ಯೆಗಳನ್ನ ಎದುರಿಸಿ ಸ್ಲಂನ ಜನರು ಬದುಕನ್ನ ಸಾಗಿಸಿತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯಿಂದಾಗಿ ಸಾಕಷ್ಟು ಸ್ಲಮ್ ನಿವಾಸಿಗಳು ಪರದಾಡ್ತಿದ್ರು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಮಳೆಗಾಲದಿಂದಾಗಿ ಸಾಕಷ್ಟು ಜನ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈಗಾದಲ್ಲಿ ಸ್ಲಂ ನಿವಾಸಿಗಳ ಜೀವನವಂತು ಅತಂತ್ರ ಆಗೋದ್ರಲ್ಲಿ ಅನುಮಾನವಿಲ್ಲ, ಪ್ರತಿ ಬಾರಿಯೂ ಕೂಡ ಬಿಬಿಎಂಪಿ ಮಳೆಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಅಥವಾ ಸ್ಲಂ ನಿವಾಸಿಗಳನ್ನ ಬೇರೆಡೆಗೋ ಸ್ಥಳಾಂತರ ಮಾಡುವ ಕೆಲಸವನ್ನು ಮಾಡುತ್ತದೆ ಆದರೆ ಈ ಸ್ಲಂ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುವುದರಲ್ಲಿ ಬಿಬಿಎಂಪಿ ವಿಫಲವಾಗಿದೆ.
ಇನ್ನು ಈ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇಲ್ಲ ಇಂದು ಹೇಳಲು ಸಾಧ್ಯವಿಲ್ಲ ಯಾಕಂದ್ರೆ ಈ ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಸರ್ಕಾರದ ಬಳಿ ದಶಕಗಳಿಂದಲೂ ಇದೆ ಆದರೆ ಈ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಮ್ಮ ಇಂದಿನ ಹಾಗೂ ಹಿಂದಿನ ಸರ್ಕಾರಗಳಿಗೆ ಮನಸ್ಸು ಇರಲಿಲ್ಲ ಎಂಬುದಷ್ಟೇ ಇಲ್ಲಿನ ವಾಸ್ತವ.
ಈಗ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ ಕನಿಷ್ಠಪಕ್ಷ ಇವರ ಸರ್ಕಾರವಾದರೂ ಈ ಸ್ಲಮ್ ನಿವಾಸಿಗಳ ಸಮಸ್ಯೆಯನ್ನ ಬಗೆಹರಿಸುತ್ತಾರೆ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ ಹಾಗಾಗಿ ಮುಂದೆಗಳಲ್ಲಿ ಇವರು ಯಾವ ರೀತಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕು