
ನಿವೃತ್ತ ಡಿಜಿಪಿ ಓಂಪ್ರಕಾಶ್ ಭೀಕರ ಹತ್ಯೆ ಪ್ರಕರಣದಲ್ಲಿ ಮಗನಿಂದ ಪೊಲೀಸರು ದೂರು ಪಡೆದುಕೊಂಡಿದ್ದಾರೆ. ಕೊಲೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಹೊರಗಿನಿಂದ ಬಂದಾಗ ನನ್ನ ತಂದೆ ರಕ್ತದ ಮಡುವಲ್ಲಿ ಬಿದ್ದಿದ್ದರು ಎಂದು ದೂರಿನಲ್ಲಿ ಕಾರ್ತಿಕೇಶ್ ತಿಳಿಸಿದ್ದಾರೆ. ನನ್ನ ತಂದೆ ಸಾವಿಗೆ ಕಾರಣ ಯಾರೆಂದು ಪತ್ತೆ ಹಚ್ಚುವುದಕ್ಕೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಸ್ವತಃ ತಾಯಿ ಹಾಗು ಸಹೋದರಿ ಕೊಲೆ ಮಾಡಿರುವ ಬಗ್ಗೆ ಹೇಳಿಕೆ ಕೊಟ್ಟಿದ್ದರೂ ತಾಯಿ ಹಾಗು ಸಹೋದರಿ ವಿರುದ್ಧ ಆರೋಪ ಮಾಡಿಲ್ಲ. ಈಗಾಗಲೇ ಕೊಲೆ ಮಾಡಿದ್ದು ನಾನೇ ಎಂದಿರೋ ಓಂಪ್ರಕಾಶ್ ಪತ್ನಿ ಪಲ್ಲವಿ. ಆದರೂ ತಾಯಿ ಮತ್ತು ತಂಗಿ ವಿರುದ್ಧ ನೇರವಾಗಿ ಆರೋಪ ಮಾಡದೆ ಕೊಲೆ ಆರೋಪಿಗಳ ಪತ್ತೆಗೆ ಕಾರ್ತಿಕೇಶ್ ಮನವಿ. ನಾನು ಮನೆಗೆ ಬಂದಾಗ ಗ್ರೌಂಡ್ ಫ್ಲೋರ್ನಲ್ಲಿ ರಕ್ತ ಸಿಕ್ತವಾಗಿ ಬಿದ್ದಿದ್ದರು ಎಂದು ಹೆಚ್ಎಸ್ಆರ್ ಲೇಔಟ್ ಠಾಣೆಗೆ ದೂರು ಸಲ್ಲಿಕೆ.
ಇನ್ನು ನಿನ್ನೆ ಕೊಲೆಗೂ ಕೆಲವೇ ನಿಮಿಷಗಳ ಮೊದಲು ಮಧ್ಯಾಹ್ನ 3:05 ನಿಮಿಷಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಕಾಲ್ ಮಾಡಿದ್ದ ಓಂಪ್ರಕಾಶ್ ಕೆಲವು ನಿಮಿಷಗಳ ಕಾಲ ಮಾತನಾಡಿದ್ದಾರೆ ಅನ್ನೋದು ತಿಳಿದು ಬಂದಿದೆ. ಇನ್ಸ್ಪೆಕ್ಟರ್ ಶ್ರೀನಿವಾಸ್ ಎಂಬುವರು ಮಾತನಾಡಿ, ಸಾಹೇಬರು ಫೋನ್ ಮಾಡಿದ್ರು. ತುಂಬಾ ಚೆನ್ನಾಗಿ ಮಾತನಾಡಿದ್ರು. ಮನೆಗೆ ಬರ್ತೀನಿ ಸಾರ್ ಅಂದೆ, ಆದ್ರೆ ಬೇಡ, ಬರಬೇಡ ಮನೆಯಲ್ಲಿ ಮೇಡಮ್ ಇರ್ತಾರೆ ಅಂದ್ರು. ತುಂಬಾ ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಸಾಹೇಬರ ಕೊಲೆ ಹಿಂದಿನ ಉದ್ದೇಶ ಏನು ಅನ್ನೋದು ಗೊತ್ತಾಗಿಲ್ಲ. ರೂಢಿಗತವಾಗಿ ಕೊಲೆ ಮಾಡಿದ್ದಾರೆ. ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ. ಎರಡು ಬಾರಿ ಇರಿದಿದ್ದಾರೆ. ತಲೆಗೂ ಕೂಡ ಚಾಕು ಹಾಕಿದ್ದಾರೆ. ಉಸಿರು ಹೋಗುವ ತನಕ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಒಳ್ಳೆಯ ಅಧಿಕಾರಿ ಅವರು, ಇವರೇನ ಕೊಲೆ ಆಗಿರೋದು ಅಂತ ಅನಿಸ್ತಾ ಇದೆ. ಮೇಡಮ್ ಅವರು ಮನೆಯ ಬಳಿ ಬರೋಕೆ ಬಿಡ್ತಾ ಇರಲಿಲ್ಲ. ಫ್ಯಾಮಿಲಿ ವಿಚಾರದ ಬಗ್ಗೆ ಗೊತ್ತಿಲ್ಲ. ಆದರೆ ಮಾನಸಿಕವಾಗಿ ನೊಂದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್ ಮೆಂಟ್ ಮಾಡಿಸ್ತಾ ಇದೀನಿ ಅಂದ್ರು. ಸಾಹೇಬ್ರು ಯಾರನ್ನಾದ್ರೂ ಭೇಟಿ ಆದ್ರೆ ಅವರಿಗೆ ಆಗ್ತಾ ಇರಲಿಲ್ಲ. ಹೆಂಡತಿಯ ಕಾಟಕ್ಕೆ ಬೇಸತ್ತು ಹೋಗಿದ್ದರು ಎಂದು ಇನ್ಸ್ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ.