~ಡಾ. ಜೆ ಎಸ್ ಪಾಟೀಲ.
ಜನರೆಲ್ಲರೂ ನಿರೀಕ್ಷಿಸಿದಂತೆ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋತಿದೆ ಹಾಗು ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಹಾಗೆ ನೋಡಿದರೆ ಬಿಜೆಪಿ ಕರ್ನಾಟಕದಲ್ಲಿ ನ್ಯಾಯ ಮಾರ್ಗದಲ್ಲಿ ಯಾವತ್ತೂ ಅಧಿಕಾರ ಹಿಡಿಯುವಲ್ಲಿ ಸಫಲವಾಗಿಲ್ಲ. ಎರಡೂ ಸಲ ಅದು ಕೇವಲ ಯಡಿಯೂರಪ್ಪನವರ ಕಾರಣದಿಂದ ಅಧಿಕಾರಕ್ಕೆ ಹತ್ತಿರವಾಗುವಷ್ಟು ಸ್ಥಾನಗಳು ಪಡೆದು ವಾಮ ಮಾರ್ಗದಲ್ಲಿ ಸರಕಾರ ಮಾಡಿತ್ತು. ಎರಡೂ ಸಲ ಯಡಿಯೂರಪ್ಪ ಆಡಳಿತವನ್ನು ತೆರೆಮರೆಯಲ್ಲಿ ಪ್ರಕ್ಷುಬ್ಧಗೊಳಿಸಿದ್ದು ಮಾತ್ರ ಬಿಜೆಪಿಯ ಸಂಘಿ ಬ್ರಾಹ್ಮಣರು ಎನ್ನುವ ಸಂಗತಿ ನಿಮಗೆಲ್ಲ ತಿಳಿದಿರಲಿ. ಮೊದಲ ಅವಧಿಯಲ್ಲಿ ಚರ್ಚ್ ಮತ್ತು ಪಬ್ ಗಳ ಮೇಲೆ ದಾಳಿˌ ಬಳ್ಳಾರಿ ರೆಡ್ಡಿಗಳ ಆಟಾಟೋಪದ ಹಿಂದೆ ಅನಂತಕುಮಾರ ಮತ್ತು ಕೇಶವ ಕೃಪಾದ ಜನರಿದ್ದರು ಎನ್ನುವುದು ಗುಟ್ಟಿನ ವಿಷಯವಲ್ಲ. ಎರಡನೇ ಅವಧಿಯಲ್ಲಿ ಎನೇನಾಯ್ತು ನೀವೆಲ್ಲರೂ ಬಲ್ಲಿರಿ.
ಯಡಿಯೂರಪ್ಪ ಕೆಜೆಪಿ ಬಿಟ್ಟು ಬಿಜೆಪಿಗೆ ಬಂದ ದಿನದಿಂದ ರಾಜ್ಯ ಬಿಜೆಪಿಯ ಹಿಡಿತವನ್ನು ಬಿ.ಎಲ್.ಸಂತೋಷ್ ಎಂಬ ಉಡುಪಿ ಮೂಲದ ಸಂಘಿ ಬ್ರಾಹ್ಮಣನ ಕೈವಶವಾಯಿತು. ಆತ ಅಂದಿನಿಂದ ಬಿಜೆಪಿ ಮೇಲಿನ ಯಡಿಯೂರಪ್ಪ ಮತ್ತು ಲಿಂಗಾಯತರ ಹಿಡಿತವನ್ನು ಕಿತ್ತೆಸೆಯಲು ಮಾಡಿದ ಪ್ರತಿಯೊಂದು ಪ್ರಯತ್ನಗಳು ಬಿಜೆಪಿ ಪಾಲಿಗೆ ಮುಳುವಾಗುತ್ತ ಬಂದವು. ಮೊದಲು ಯಡಿಯೂರಪ್ಪ ವಿರುದ್ಧ ಈಶ್ವರಪ್ಪನನ್ನು ಎತ್ತಿಕಟ್ಟಿ ಕಿತಾಪತಿ ಮಾಡಿದ್ದ. 2018ರ ಚುನಾವಣೆಯಲ್ಲಿಯೆ ಯಡಿಯೂರಪ್ಪನವರನ್ನು ಬಳಸಿಕೊಂಡು ಬೇರೆಯವರನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಈ ಸಂತೋಷ್ ಸಿದ್ಧಪಡಿಸಿದ್ದ. ಆದರೆ 2017ರಲ್ಲಿ ಭುಗಿಲೆದ್ದ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಹೋರಾಟ ಸಂಘಿ ಬ್ರಾಹ್ಮಣರ ಬುಡ ಅಲುಗಾಡಿಸಿತ್ತು.
ಅದು ಯಡಿಯೂರಪ್ಪನವರಿಗೆ ವರವಾಗಿ ಪರಿಣಮಿಸಿತು. ಮುಖ್ಯಮಂತ್ರಿಯಾಗಿ 2018ರ ಚುನಾವಣೆಯಲ್ಲಿ ಯಡಿಯೂರಪ್ಪನವರ ಹೆಸರನ್ನು ಘೋಷಿಸುವುದು ಸಂಘಿ ಬ್ರಾಹ್ಮಣರಿಗೆ ಅನಿವಾರ್ಯವಾಯಿತು. ಆದರೆ ಲಿಂಗಾಯತ ಧರ್ಮ ಹೋರಾಟದಿಂದ ಬಹುತೇಕ ಲಿಂಗಾಯತ ಮತಗಳು ಕಾಂಗ್ರೆಸ್ಸಿಗೆ ವಲಸೆ ಹೋದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಕಾರಣದಿಂದ ಲಿಂಗಾಯತರ ಮತಗಳು ಭಾಗಶಃ ಬಿಜೆಪಿ ಕೈಹಿಡಿದವು. ಆದರೂ ಬಿಜೆಪಿ 2018ರಲ್ಲಿ ಬಹುಮತ ಪಡೆಯಲಿಲ್ಲ. ಸನಾತನ ಧರ್ಮದ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿನ ಸ್ಥಾಪಿತ ನೀತಿಗಳಂತೆ ಅನೈತಿಕ ಮಾರ್ಗದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಅಧಿಕಾರ ಬಂದ ಮೇಲೆ ಬಿಜೆಪಿಯನ್ನು ಸಂಪೂರ್ಣ ನಾಶಗೊಳಿಸಲು ಈ ಸಂತೋಷ್ ಹೆಚ್ಚು ಕ್ರೀಯಾಶೀಲನಾದ. ಆತ ಆಡಳಿತದಲ್ಲಿ ಮಾಡಿದ ಪ್ರತಿಯೊಂದು ಹಸ್ತಕ್ಷೇಪ ಬಿಜೆಪಿಯನ್ನು ಪರಮ ಭ್ರಷ್ಟಚಾರದ ದವಡೆಗೆ ನೂಕಿತು.
ಬಿಜೆಪಿ ಸೋಲಿಗೆ ಸಂತೋಷನ ಯಾವಯಾವ ನಿರ್ಧಾರಗಳು ಕಾರಣವಾದವು ಎನ್ನುವುದರ ಒಂದು ಪಕ್ಷಿನೋಟ ನಾನು ನಿಮ್ಮೆದುರಿಗಿಡುತ್ತಿದ್ದೇನೆ.
1. 2017ರ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟವನ್ನು ಸಂಘ ಮತ್ತು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು.
2. ಯಡಿಯೂರಪ್ಪನವರ ವಿರುದ್ಧ ಲಿಂಗಾಯತ ಶಾಸಕರನ್ನು ಎತ್ತಿಕಟ್ಟಿ ಅರಾಜಕತೆ ಸೃಷ್ಟಿಸಿದ್ದು.
3. ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವನ್ನು ಹತ್ತಿಕ್ಕಲು ಮತ್ತು ಯಡಿಯೂರಪ್ಪ ನಾಯಕತ್ವವನ್ನು ದುರ್ಬಲಗೊಳಿಸಲು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡಿದ್ದು.
4. ಸಂಘ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳಿಗೆ ಸರಕಾರಿ ಜಮೀನುಗಳನ್ನು ಕವಡೆ ಕಾಸಿಗೆ ನೀಡಿದ್ದು.
5. ಯಡಿಯೂರಪ್ಪನವರನ್ನು ಅಧಿಕಾರದಿಂದಿಳಿಸಿ ಅವರ ಮಗನನ್ನು ಹತ್ತಿಕ್ಕಲು ಹವಣಿಸಿದ್ದು.
6. ಬೊಮ್ಮಾಯಿಯವರ ಆಡಳಿತದಲ್ಲಿ ಸಂಪೂರ್ಣ ಹಸ್ತಕ್ಷೇಪ ನಡೆಸಿ ಮುಖ್ಯಮಂತ್ರಿಯನ್ನು ನಿಸ್ಕ್ರೀಯಗೊಳಿಸಿದ್ದು.
7. ಪಠ್ಯಪುಸ್ತಕ ತಿರುಚುವಿಕೆಯಲ್ಲಿ ವಿಕೃತ ವಾಚಾರದ ಬ್ರಾಹ್ಮಣರ ಪಾಲ್ಗೊಳ್ಳುವಿಕೆ ಮತ್ತು ನಾಡಿನ ದಾರ್ಶನಿಕರಿಗೆ ದ್ರೋಹ ಬಗೆದಿದ್ದು.
8. ಕರ್ನಾಟಕದಲ್ಲಿ ಲಿಂಗಾಯತˌ ವಕ್ಕಲಿಗ ಹಾಗು ದಲಿತರನ್ನು ಕಡೆಗಣಿಸಿ ಪ್ರಲ್ಹಾದ ಜೋಶಿಯಂತ ದುರ್ಬಲ ವ್ಯಕ್ತಿಯನ್ನು ಕೇಂದ್ರ ಸಂಪುಟದಲ್ಲಿ ಮೆರೆಸಿದ್ದು.
9. ರಾಜ್ಯ ಸಂಪುಟದಲ್ಲಿ ಬಿ ಸಿ ನಾಗೇಶ್ ಮುಂತಾದ ಬ್ರಾಹ್ಮಣ ಮಂತ್ರಿಗಳ ಆಟಾಟೋಪ ಮಿತಿ ಮೀರಿದ್ದು.
10. ಲಿಂಗಾಯತರ ಬಗ್ಗೆ ದ್ವೇಷˌ ಅಸಹನೆˌ ಕಡೆಗಣನೆಗಳು.
11. ಸಿ ಟಿ ರವಿ ಮುಂತಾದ ಬೆನ್ನೆಲುಬಿಲ್ಲದ ಶೂದ್ರ ಶಾಸಕರನ್ನು ಛೂ ಬಿಟ್ಟು ಉರಿಗೌಡˌ ನಂಜೇಗೌಡದಂತ ಕಾಲ್ಪನಿಕ ಕಥಾನಕಗಳನ್ನು ಮುನ್ನೆಲೆಗೆ ತಂದು ಸ್ವಾತಂತ್ರ ಹೋರಾಟಗಾರ ಟಿಪ್ಪು ಚಾರಿತ್ರ್ಯವಧೆಯ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸಿದ್ದು.
12. ಹಲಾಲ್ˌ ಜಟ್ಕಾ ˌ ಹಿಜಾಬ್ ಮುಂತಾದ ಅನ್ಯಧರ್ಮ ದ್ವೇಷದ ಘಟನೆಗಳು ಹಾಗು ಮುಸ್ಲಿಮ್ ಮೀಸಲಾತಿ ತೆಗೆದು ಹಾಕಿರುವ ಅಪಕ್ವ ನಿರ್ಧಾರಗಳು ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯ ಭಾವ ಮೂಡಿಸಿದ್ದು.
13. ಉತ್ತರ ಭಾರತದಂತೆ ಇಲ್ಲಿಯೂ ಕೂಡ ಹಿಂದುತ್ವದ ವಿಕೃತಿಯನ್ನು ಮುನ್ನೆಲೆಗೆ ತಂದು ಬ್ರಾಹ್ಮಣರಾಜ ನಿರ್ಮಿಸಲು ಹವಣಿಸಿದ್ದು.
14. ಈ ಚುನಾವಣೆಯ ಟಿಕೇಟ್ ಹಂಚಿಕೆಯಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿ ಗೆಲ್ಲಬೇಕೆಂಬ ದುರಾಸೆ.
15. ಸಂತೋಷನ ಈ ಎಲ್ಲ ಬಗೆಯ ವಿದ್ವಂಸಕ ಕಾರ್ಯಗಳನ್ನು ಬೆಂಬಲಿಸಿದ ಕೇಂದ್ರ ನಾಯಕತ್ವ ಆತ ಆಡಿಸಿದಂತೆ ಆಡಿದ್ದು. ಮೋದಿ-ಶಾ ಜೋಡಿ ಸಂತೋಷ್ ಮತ್ತು ಪ್ರಲ್ಹಾದನ ಲಿಂಗಾಯತ ದ್ವೇಷಿ ನಿರ್ಧಾರಗಳನ್ನು ಬೆಂಬಲಿಸಿ ಲಿಂಗಾಯತ ನಾಯಕತ್ವವನ್ನು ದೂರವಿಟ್ಟು ಚುನಾವಣೆಯಲ್ಲಿ ತಮ್ಮ ಅಹಸ್ಯ ಮುಖ ಪ್ರದರ್ಶನ ಮಾಡಿದ್ದು.
15. ಆಡಳಿತದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ. ೪೦ % ಕಮಿಷನ್ˌ ಪಿಎಸ್ ಐ ನೇಮಕಾತಿ ಹಗರಣˌ ಬಿಟ್ಸಕಾಯ್ನ್ ಹಗರಣ ಮತ್ತಿತರ ಆರ್ಥಿಕ ಹಗರಣಗಳ ಹಿಂದೆ ಅಧಿಕಾರಿ ವರ್ಗ ಅಥವಾ ಶಾಸಕಾಂಗಕ್ಕಿಂತ ಬಿಜೆಪಿಯನ್ನು ನಿಯಂತ್ರಿಸುವ ಬ್ರಾಹ್ಮಣ ನಿಯಂತ್ರಿತ ಅಸಂವಿಧಾನಿಕ ಸಂಘಟನೆಯ ಪ್ರಮುಖ ಪಾತ್ರ.
ಈ ಮೇಲಿನ ಕಾರಣಗಳಲ್ಲದೆ ಇನ್ನೂ ಅನೇಕ ಬಗೆಯಲ್ಲಿ ಬಿಜೆಪಿ ಮತ್ತು ಸಂಘಿ ಬ್ರಾಹ್ಮಣರು ಕರ್ನಾಟಕದಲ್ಲಿ ಸೃಷ್ಠಿಸಿದ ಅರಾಜಕತೆಯನ್ನು ಕನ್ನಡಿಗರು ಗಂಭೀರವಾಗಿ ಪರಿಗಣಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಇದು ವರವಾಗಿ ಪರಿಣಮಿಸಿತು. ಕಾಂಗ್ರೆಸ್ ಈಗಿನಿಂದಲೆ ೨೦೨೪ ರ ಸಂಸತ್ ಚುನಾವಣೆಯ ತಯ್ಯಾರಿ ಮಾಡಿಕೊವ್ಳಬೇಕಿದೆ. ಭಾರತದಲ್ಲಿ ಈ ಫ್ಯಾಸಿಷ್ಟರನ್ನು ಸೋಲಿಸುವ ಮೂಲಕ ಬಸವಣ್ಣನವರ ಪರಿಕಲ್ಪನೆಯ ಸಂವಿಧಾನˌ ಜನತಂತ್ರ ಮತ್ತು ಸಂಸದೀಯ ವ್ಯವಸ್ಥೆಯನ್ನು ಹಾಗು ಭಾರತದ ಬಹುತ್ವ ಪರಂಪರೆಯನ್ನು ರಕ್ಷಿಸುವ ಗುರುತರ ಹೊಣೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ಹೆಗಲೇರಿದೆ ಎನ್ನುವುದನ್ನು ಮರೆಯಬಾರದು.
~ಡಾ. ಜೆ ಎಸ್ ಪಾಟೀಲ.