• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

WPL 2026 : ಮುಂಬೈಗೆ ಆಸ್ಟ್ರೇಲಿಯಾದ ಬಲಿಷ್ಠ ಆಲ್‌ ರೌಂಡರ್‌ ಬಲ ; ಯಾರು ಈ ನಿಕೋಲಾ ಕ್ಯಾರಿ..?

ಪ್ರತಿಧ್ವನಿ by ಪ್ರತಿಧ್ವನಿ
January 19, 2026
in ಇದೀಗ, ಕ್ರೀಡೆ, ದೇಶ, ವಿದೇಶ
0
WPL 2026 : ಮುಂಬೈಗೆ ಆಸ್ಟ್ರೇಲಿಯಾದ ಬಲಿಷ್ಠ ಆಲ್‌ ರೌಂಡರ್‌ ಬಲ ; ಯಾರು ಈ ನಿಕೋಲಾ ಕ್ಯಾರಿ..?
Share on WhatsAppShare on FacebookShare on Telegram

ಬೆಂಗಳೂರು : ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಲ್‌ರೌಂಡರ್ ನಿಕೋಲಾ ಕ್ಯಾರಿ ಕ್ರಿಕೆಟ್‌ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. 2026ರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ನಿಕೋಲಾ ಕ್ಯಾರಿ ಮುಂಬೈ ತಂಡಕ್ಕೆ ಬಲ ತುಂಬುತ್ತಿದ್ದಾರೆ.

ADVERTISEMENT

ಈ ಲೀಗ್‌ನಲ್ಲಿ, ಅವರ ಪ್ರದರ್ಶನವು ಬ್ಯಾಟಿಂಗ್‌ನಿಂದ ಹಿಡಿದು ಇನ್ನಿಂಗ್ಸ್ ಪೂರ್ತಿಯಾಗಿ ಸಮಬಲದ ಆಟವನ್ನು ತೋರಿಸುತ್ತದೆ. ಈ ಮೂಲಕ ತಮ್ಮ ಮಧ್ಯಮ-ವೇಗದ ಬೌಲಿಂಗ್‌ನಿಂದ ವಿಕೆಟ್‌ಗಳನ್ನು ಸಹ ಪಡೆಯಬಲ್ಲರು ಎಂಬುದನ್ನು ಕ್ಯಾರಿ ಸಾಬೀತುಪಡಿಸುವಲ್ಲಿ ಹಿಂದೆ ಬೀಳಲಿಲ್ಲ. ಕ್ಯಾರಿ ತಮ್ಮ ಅಥ್ಲೆಟಿಕ್ ಫೀಲ್ಡಿಂಗ್ ಜೊತೆಗೆ ಪಂದ್ಯದ ಗೆಲುವಿನ ಒತ್ತಡದಲ್ಲಿಯೂ ಆ ಸಮಯವನ್ನು ಅತ್ಯಂತ ಶಾಂತತೆಯಿಂದ ನಿಭಾಯಿಸುವ ಕಲೆ ಕರಗತಮಾಡಿಕೊಂಡಿದ್ದಾರೆ, ಇದರಿಂದಾಗಿ ಅವರು ಟಿ20 (T20) ಪಂದ್ಯದಲ್ಲಿಯೂ ನಿರ್ಣಾಯಕ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ.

ಇನ್ನೂ ಭಾರತದ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL 2026) ರಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಈ ಆವೃತ್ತಿಗಾಗಿ ತಮ್ಮ ತಂಡಕ್ಕೆ ಸ್ಥಿರತೆ ಕಾಪಾಡಿಕೊಳ್ಳಲು ಮುಂದಾಗಿತ್ತು. ಹೀಗಾಗಿ ಆಲ್‌ರೌಂಡರ್‌ ಕ್ಯಾರಿಯನ್ನು ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಬೌಲರ್‌ ಹಾಗೂ ಅಗತ್ಯವಿದ್ದಾಗ ತಂಡದ ಒತ್ತಡವನ್ನು ನಿಭಾಯಿಸಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಕಾರ್ಯನಿರ್ವಹಿಸುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.

ಇದನ್ನೂ ಓದಿ : ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

ಬೌಲಿಂಗ್ ವಿಷಯದಲ್ಲಿಯೂ, ಇನ್ನಿಂಗ್ಸ್‌ನ ಆರಂಭಿಕ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಅವರನ್ನು ಸ್ಥಿರ ಮಧ್ಯಮ ವೇಗಿಯಾಗಿ ಕ್ಯಾರಿ ಅವರನ್ನು ತಂಡ ನಿಯೋಜಿಸುತ್ತದೆ. ಬ್ಯಾಟಿಂಗ್‌ ಜೊತೆಗೆಯೇ ಕ್ಯಾರಿ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗುವ ಕೆಲಸ ಮಾಡಬೇಕಿದೆ. ನಿಕೋಲಾ ಕ್ಯಾರಿ ಮಹಿಳಾ ಕ್ರಿಕೆಟ್‌ನಲ್ಲಿ ಇಡೀ ತಂಡದ ವಿಶ್ವಾಸ ಗಳಿಸುವ ಜೊತೆಗೆ ಅನುಭವಿ ಆಲ್‌ರೌಂಡರ್ ಎಂಬ ಹೆಸರನ್ನು ಪಡದಿದ್ದಾರೆ.

ಕ್ಯಾರಿ ಆಸ್ಟ್ರೇಲಿಯಾದ ಬಲಿಷ್ಠ ಪ್ರತಿಭೆ..

ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿನ ಅನುಭವದೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸೆಪ್ಟೆಂಬರ್ 10, 1993 ರಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಸಿಡ್ನಿ ನಗರದಲ್ಲಿ ಈ ತಾರೆ ಜನ್ಮತಾಳಿದ್ದಾರೆ. ಕ್ಯಾರಿ ಆಸ್ಟ್ರೇಲಿಯಾದ ಕ್ರೀಡಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ತಮ್ಮ ಪ್ರತಿಭೆಯನ್ನುಗುರುತಿಸಿಕೊಂಡಿದ್ದಾರೆ. ತವರಿನ ಅನುಭವಗಳನ್ನು ಧಾರೆ ಎರೆದು, ತಮ್ಮ ಕ್ರಿಕೆಟ್ ಸಾಮರ್ಥ್ಯದಿಂದ ನ್ಯೂ ಸೌತ್ ವೇಲ್ಸ್ ಮಹಿಳೆಯರನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆರಂಭದಲ್ಲಿಯೇ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿಯಾಗಿದ್ದ ನಿಕೋಲಾ ಕ್ಯಾರಿ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

Krishna Byre Gowda on Suggi Huggi : ಸುಗ್ಗಿ - ಹುಗ್ಗಿ ಸಂಭ್ರಮದಲ್ಲಿ ಕೃಷ್ಣದ ಭೈರೇಗೌಡ..! #pratidhvani

ಕ್ಯಾರಿ 2018 ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಓಡಿಐ ಮತ್ತು ಟಿ20ಐ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯಲು ಭಾರಿ ಪೈಪೋಟಿ ಇದ್ದರೂ, ಕ್ಯಾರಿ ಆ ಸವಾಲುಗಳನ್ನು ಎದುರಿಸಿ ತಂಡದಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾದ ಸ್ಥಳೀಯ ಕ್ರಿಕೆಟ್‌ನಲ್ಲಿ ಕ್ಯಾರಿ ಎಲ್ಲಾ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದಾರೆ. ಹಲವು ವರ್ಷಗಳಿಂದ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ನಲ್ಲಿ ಪ್ರಭಾವಿ ಆಟಗಾರ್ತಿಯಾಗಿಯೂ, ಪ್ರಮುಖವಾಗಿ ಹೋಬಾರ್ಟ್ ಹರಿಕೇನ್ಸ್ ಪರ ಪಂದ್ಯ ಆಡಿದ್ದರು.

Tags: Australia TeamAustralia's star all-rounderCricket Teaminternational and domestic cricketkannada newskarnataka newslatest cricket newsmumbai indiansNew South walesNicola CareyPratidhvanisports newsT20WBBLWomen’s Premier LeagueWPL 2026
Previous Post

BBK 12: ಬಿಗ್ ಬಾಸ್ ಗೆದ್ದ ಗಿಲ್ಲಿ ನಟ & ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಕುಮಾರಸ್ವಾಮಿ ಅಭಿನಂದನೆ

Next Post

BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಎಐ ಬ್ಯಾಟ್ ಚಿಪ್ ಆರೋಪಕ್ಕೆ ವೈಭವ್ ಸೂರ್ಯವಂಶಿಯ ಖಡಕ್ ಉತ್ತರ ಇಲ್ಲಿದೆ

ಎಐ ಬ್ಯಾಟ್ ಚಿಪ್ ಆರೋಪಕ್ಕೆ ವೈಭವ್ ಸೂರ್ಯವಂಶಿಯ ಖಡಕ್ ಉತ್ತರ ಇಲ್ಲಿದೆ

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada