ವಯಸ್ಸಾದವರಿಗೆ ಬಿಳಿ ಕೂದಲಾಗುವುದು ಸಾಮಾನ್ಯ ..ಆದರೆ ಇಂದಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿ ಅಥವಾ ಹದಿಹರೆಯದವರಲ್ಲೂ ಕೂಡ ಬಿಳಿ ಕೂದಲಿನ ಸಮಸ್ಯೆ ಕಾಣಿಸ್ಕೊಳ್ತಾಯಿದೆ.. ಇದು ಯಾಕೆ ಆಗ್ತಾ ಇದೆ ಅಂತ ಹೇಳಿದ್ರೆ ಒಂದು ಹೆರಿಡಿಟಿ ಅಂತನೇ ಹೇಳಬಹುದು ಅದರ ಜೊತೆಗೆ ನಮ್ಮ ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆ ಆದರೆ ಕೂಡ ಬಿಳಿಕೂದಲಿನ ಸಮಸ್ಯೆ ಶುರುವಾಗುತ್ತೆ ಇಷ್ಟು ಮಾತ್ರವಲ್ಲದೆ ಜೆನೆಟಿಕ್ಸ್ ಆಗಿರಬಹುದು, ಸ್ಟ್ರೆಸ್, ಥೈರಾಯಿಡ್ ಅದರ ಜೊತೆಗೆ ವಿಟಮಿನ್ ವಿಟಮಿನ್ ಕೊರತೆಯಿಂದಲೂ ಕೂಡ ಬಿಳಿ ಕೂದಲಿನ ಸಮಸ್ಯೆ ಕಾಡಬಹುದು..
ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಾದ್ರೆ ಒಂದು ರೀತಿಯ ಮುಜುಗರ , ನಾವು ಈ ಬಿಳಿ ಕೂದಲನ್ನ ಕವರ್ ಮಾಡಿಕೊಳ್ಳದಿಕ್ಕೋಸ್ಕರ ಸಾಕಷ್ಟು ಕೆಮಿಕಲ್ಸ್ ಅನ್ನ ಬಳಸ್ತೀವಿ ಹೇರ್ ಕಲರ್ಸ್ ಆಗಿರಬಹುದು ಹೇರ್ ಡೈ ಮಾಡ್ಕೊಳ್ತಿವಿ ಆದ್ರೆ ಒಂದೆರಡು ವಾಶ್ ಆದ್ಮೇಲೆ ಮತ್ತೆ ಆ ಕಲರ್ ಹೋಗುತ್ತೆ.ನಾವು ಮತ್ತೆ ಕೆಮಿಕಲ್ಸ್ ಅನ್ನ ಬಳಸ್ತೀವಿ. ಮಾಡ್ಕೊಳ್ತಿವಿ ಆದ್ರೆ ಒಂದೆರಡು ವಾಶ್ ಆದ್ಮೇಲೆ ಮತ್ತೆ ಆ ಕಲರ್ ಹೋಗುತ್ತೆ ನಾವು ಮತ್ತೆ ಕೆಮಿಕಲ್ಸ್ ಅನ್ನ ಬಳಸ್ತೀವಿ ಇದು ನಮ್ಮ ಹೇರ್ ಲಾಸ್ ಗೆ ಕಾರಣವಾಗುತ್ತೆ..
ಯಾವುದೇ ಒಂದು ಕೆಮಿಕಲ್ಸ್ ಇಲ್ಲದೆ ನ್ಯಾಚುರಲ್ ಆಗಿ ನಮ್ಮ ಕೂದಲನ್ನು ಹೇಗೆ ಕಪ್ಪು ಮಾಡಿಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಇಲ್ಲಿದೆ
ನೆಲ್ಲಿಕಾಯಿ
ನೆಲ್ಲಿಕಾಯಿ ಎಣ್ಣೆ ನೆಲ್ಲಿಕಾಯಿ ನನ್ನ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ಬೇಗನೆ ನಿವಾರಣೆ ಆಗುತ್ತೆ ನೆಲ್ಲಿಕಾಯಿ ಎಣ್ಣೆ ಇಲ್ಲದಿದ್ದರೆ ನೆಲ್ಲಿಕಾಯನ್ನ ಚಿಕ್ಕ ಚಿಕ್ಕದಾಗಿ ತುಂಡುಗಳನ್ನು ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ನಂತರ ತಣ್ಣಗಾದ ಮೇಲೆ ತಲೆಗೆ ಹಚ್ಚುವುದರಿಂದ ಬಿಳಿ ಕೂದಲ ಸಮಸ್ಯೆ ಬೇಗನೆ ನಿವಾರಣೆ ಆಗುತ್ತೆ..
ಕರಿಬೇವು ಮತ್ತು ಮೆಂತ್ಯ
ನೀವು ದಿನ ಬಳಸುವ ಎಣ್ಣೆಯಲ್ಲಿ ಕರಿಬೇವು ಹಾಗೂ ಮೆಂತ್ಯ ಹಾಕಿ ಚೆನ್ನಾಗಿ ಕುದಿಸಿ ವಾರಕ್ಕೆ ಮೂರು ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಬಿಳಿ ಕೂದಲು ಬೇಗನೆ ಕಪ್ಪು ಕೂದಲಾಗುತ್ತದೆ. ಹಾಗೂ ಕರಿಬೇವು ಮತ್ತು ಮೆಂತ್ಯೆಯನ್ನು ಹಚ್ಚುವುದರಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯುತ್ತೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ಇರುವುದಿಲ್ಲ..
ದಾಸವಾಳ
ಈ ಹೂವಿನ ಎಸಳು ಹಾಗೂ ಎಲೆ ಮತ್ತು ಬೇರು ಮೂರೂ ಕೂಡ ಉಪಯುಕ್ತ. ಆದರೆ ಬಿಳಿ ಕೂದಲಿನ ಸಮಸ್ಯೆ ಗೆಚ್ಚಗಿದ್ರೆ ದಾಸವಾಳದ ಬೇರನ್ನು ಎಣ್ಣೆಯಲ್ಲಿ ಕುದಿಸಿ , ನಂತರ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆ ಬೇಗನೆ ಕಡಿಮೆಯಾಗುತ್ತೆ ಹಾಗೂ ದಾಸವಾಳದ ಎಲೆಯನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡೋದ್ರಿಂದ ನಿಮ್ಮ ಕೂದಲು ತುಂಬಾನೇ ಸಿಲ್ಕಿಯಾಗುತ್ತದೆ ಜೊತೆಗೆ ಸಾಫ್ಟ್ ಹೇರ್ ನಿಮ್ಮದಾಗುತ್ತದೆ.. ಡ್ಯಾಂಡ್ರಫ್ ಸಮಸ್ಯೆ ಅಂತ ಮುಕ್ತಿ..