ಕೆಲವರು ಎಷ್ಟೆ ಹಲ್ಲುಗಳನ್ನ ಗುಜ್ಜಿ ಸ್ವಚ್ಛ ಮಾಡಿದ್ರು ಹಳದಿ ಬಣ್ಣೆ ಹಾಗೆ ಇರುತ್ತದೆ..ಹಲ್ಲುಗಳು ಹಳದಿ ಇದ್ದರೆ ನಗಲು ಮುಜುಗರ ಅಥವ ಹಿಂಜರಿಯುತ್ತಾರೆ..ಹಾಗು ಮುಖದ ಅಂದವನ್ನ ಕೆಡಿಸುತ್ತದೆ ಈ ಹಳದಿ ಹಲ್ಲುಗಳು..ನಿಮ್ಮ ಹಲ್ಲುಗಳು ಮುತ್ತಿನಂತೆ ಕಾಣ್ಬೇಕು ಬಿಳಿ ಆಗ್ಬೇಕು ಅಂದ್ರೆ ಹೀಗೆ ಮಾಡಿ..
![](https://pratidhvani.com/wp-content/uploads/2024/06/IMG_8509.jpeg)
- ನಾವು ಸೇವಿಸುವ ಕೆಲವು ಆಹಾರ ಮತ್ತು ಪಾನಿಯಗಳಿಂದ ನಮ್ಮ ಹಲ್ಲುಗಳ ಹೊಳಪನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು.. ಅದರಲ್ಲೂ ಮುಖ್ಯವಾಗಿ ಕಾಫಿ, ಟೀ ,ಬೆರಿಸ್ ಮತ್ತು ರೆಡ್ ವೈನ್ ಸೇವಿಸುವುದರಿಂದ ಹಲ್ಲಿನ ಹೊಳಪು ಕಡಿಮೆಯಾಗುತ್ತದೆ. ಕಾರಣ ಇದರಲ್ಲಿ ವರ್ಣ ದ್ರವ್ಯದ ಅಣುಗಳಾದ ಕ್ರೋಮೋಜೆನ್ಗಳು ಇರುತ್ತದೆ..
- ಆಗಾಗ ನೀರಿನಿಂದ ಬಾಯಿಯನ್ನ ತೊಳೆಯುವುದರಿಂದ, ನಿಮ್ಮ ಓರಲ್ ಹೈಜಿನ್ ಅನ್ನು ಮತ್ತು ಬಿಳಿ ಹೊಳೆಯುವ ಹಲ್ಲುಗಳನ್ನ ಪಡೆಯಬಹುದು. ಅದರಲ್ಲೂ ಕೂಡ ಊಟದ ಬಳಿಕ ತಪ್ಪದೇ ಇಡೀ ಬಾಯಿಗೆ ನೀರನ್ನು ಹಾಕುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತದೆ..
- ಬೆಳಗ್ಗೆ ಹಲ್ಲುಜ್ಜುವ ಸಂದರ್ಭದಲ್ಲಿ ಉಪ್ಪು ಬಾಲಸಿ ಉಜ್ಜುವುದರಿಂದ ಹಳದಿ ಹಲ್ಲುಗಳು ಬಿಳಪಾಗುತ್ತದೆ , ಮಾತ್ರವಲ್ಲದೆ ಕ್ಯಾವಿಟಿಸ್ ಕಡಿಮೆಯಾಗುತ್ತದೆ. ಇದರ ಜೊತೆಗೆ ನ್ಯಾಚುರಲ್ ಆಗಿ ನಿಮ್ಮ ಹಲ್ಲುಗಳನ್ನ ಗಟ್ಟಿಯಾಗಿ ಮಾಡುತ್ತದೆ.
- ಒಂದು ಟೇಬಲ್ ಸ್ಪೂನ್ ಅಷ್ಟು ಕೊಬ್ರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನ ಬಾಯಿಗೆ ಹಾಕಿ 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಅದನ್ನು ಉಗಿದು ,ಬೆಚ್ಚಗಿನ ನೀರಿನಿಂದ ಬಾಯಿಯನ್ನ ತೊಳೆಯುವುದರಿಂದ ನಿಮ್ಮ ಹಲ್ಲುಗಳು ಶುದ್ಧವಾಗುತ್ತದೆ.ಕ್ಯಾವಿಟಿಸ್ ಕಡಿಮೆಯಾಗುತ್ತದೆ ಹಳದಿ ಹಲ್ಲುಗಳು ಬಿಳುಪಾಗುತ್ತದೆ.
- ಹಲ್ಲು ಹಳದಿಗಟ್ಟಲು ಮತ್ತು ಕಪ್ಪಾಗಲು ಮುಖ್ಯ ಕಾರಣ ನೀವು ಬಳಸುವಂತಹ ಟೋಬಾಕೋ ಹಾಗೂ ಸ್ಮೋಕಿಂಗ್ ಹ್ಯಾಬಿಟ್ ಇಂದ. ಸಿಗರೇಟ್ ನಲ್ಲಿರುವ ನಿಕುಟಿನ್ ಅಂಶದಿಂದ ನಿಮ್ಮ ಹಲ್ಲುಗಳು ಹಳದಿ ಅಥವಾ ಬ್ರೌನ್ ಆಗುತ್ತದೆ ಹಾಗೂ ಸ್ಮೋಕಿಂಗ್ ಮಾಡುವುದರಿಂದ ಹಲ್ಲು ಗಮ್ ಗಳಿಗೆ ಬ್ಲಡ್ ಫ್ಲೋ ಕಡಿಮೆಯಾಗುತ್ತದೆ. ಇದರಿಂದಾಗಿ ಸಾಕಷ್ಟು ಡಿಸೀಸ್ ಗಳು ಎದುರಾಗಿ ಹಲ್ಲುಗಳನ್ನ ಕಳೆದುಕೊಳ್ಳುವ ಚಾನ್ಸಸ್ ಜಾಸ್ತಿ ಇರುತ್ತದೆ..