
ರಾಜ್ಯದ ಆಡಳಿತ ಪಕ್ಷದಲ್ಲಿ ದಿನೇ ದಿನೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ.ಸಿಎಂ ಸಿದ್ದರಾಮಯ್ಯ(CM Siddaramaiah)ಅವರು ರಾಜೀನಾಮೆ ಕೊಡಬೇಕು ಡಿಕೆ ಶಿವಾಕುಮಾರ್(DK Sivakumar) ಮುಖ್ಯಮಂತ್ರಿ ಆಗಬೇಕು ಅಂತ ಅನೇಕರು ಕಾಯ್ತಾ ಇದ್ದಾರೆ.ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆಗೋದು ಇದೆ.ಆ ಮುನ್ಸೂಚನೆಗಳನ್ನು ನೀವು ನೋಡುತ್ತಿದ್ದೀರಿ.
ಡಿಸಿಎಂ ಡಿ.ಕೆ.ಶಿವಕುಮಾರ್(DCM DK Sivakumar)ವಿಚಾರದಲ್ಲಿ ಹೇಳಿಕೆಗಳ ವಿಚಾರ ಯಾರು ಏನು ಹೇಳಿದ್ದಾರೆ ನನಗಂತು ಗೊತ್ತಿಲ್ಲ. ಡಿಕೆಶಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಅವರನ್ನು ಪ್ರಶ್ನೆ ಮಾಡಿ. ಸರ್ಕಾರ ಎಲ್ಲಿದೆ, ಕಾಂಗ್ರೆಸ್ ಒಂದು ರೀತಿ ತಾಲಿಬಾನ್ ಸರ್ಕಾರ ಹಿಂದೂತ್ವಕ್ಕೆ, ಹಿಂದೂಗಳಿಗೂ ಗೌರವವಿಲ್ಲ ಆ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿಲ್ಲ.

ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳಕ್ಕೆ ಕಾಂಗ್ರೆಸ್‌ನವರು ತಕರಾರು ಎತ್ತಿದ್ರು ಇದರ ಮಧ್ಯೆ ಡಿ.ಕೆ.ಶಿವಕುಮಾರ್( DK Sivakumar)ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ.ನಮ್ಮ ಪ್ರಾಚೀನತೆ ಆಧಾರದ ಮೇಲೆ ಹೋಗಿ ಬಂದಿದ್ದಾರೆ.ಬಿಜೆಪಿಗೂ ಆ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ.
ಮಹಾ ಶಿವರಾತ್ರಿದಂದು ಗೃಹ ಸಚಿವ ಅಮಿತ್ ಶಾ ಅವರು ಡಿಸಿಎಂ ಡಿಕೆ ಶಿವಕುಮಾರ್(DCM DK Sivakumar) ಇಶಾ ಫೌಂಡೇಶನ್(Isha Foundation)ಕಾರ್ಯಕ್ರಮದಲ್ಲಿ ಕೇಂದ್ರ ಭಾಗವಹಿಸಿದ್ರು ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.ಶಿವರಾತ್ರಿ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.ಅದಕ್ಕೂ ರಾಜಕೀಯ ಧ್ರುವೀಕರಣ, ಡಿ.ಕೆ.ಶಿವಕುಮಾರ್(DK Sivakumar) ಬಿಜೆಪಿಗೆ ಬಂದು ಬಿಡ್ತಾರೆ ಈ ರೀತಿಯ ಗುಸು, ಗುಸು ಶುರುವಾಗಿದೆ.

ಇದರಲ್ಲಿ ಯಾವುದರಲ್ಲಿ ಅರ್ಥವಿಲ್ಲ ನಾವು ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ಪತ್ರ ಬರೆದಿದ್ದೇನೆ.ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ(Siddaramaiah) ಅವರು ಬಜೆಟ್ ಮಂಡನೆ ಮಾಡಬೇಕು ಅತಿ ಹೆಚ್ಚು ಬಜೆಟ್ ಮಂಡನೆ(Budget presentation)ಮಾಡಿರುವ ಕೀರ್ತಿ ಸಿದ್ದರಾಮಯ್ಯ(Siddaramaiah) ಅವರಿಗೆ ಸಲ್ಲುತ್ತದೆ.ಹಾಗಾಗಿ ಜನರ ಅಪೇಕ್ಷನು ಕೂಡ ಸಾಕಾಷ್ಟಿದೆ ಗ್ಯಾರೆಂಟಿಗಳೇ ಅಭಿವೃದ್ಧಿ ಆಗಿಬಿಟ್ಟರೆ ಶಾಸಕರುಗಳು ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಿಲ್ಲ. ಜನರು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ, ಇದನ್ನು ಅರ್ಥ ಮಾಡಿಕೊಂಡು ಮುಖ್ಯಮಂತ್ರಿಗಳು ಕ್ಷೇತ್ರಗಳಿಗೆ ಅನುದಾನ ನೀಡ್ತಾರೆ ಎಂದು ನಾನು ಆಶಿಸುತ್ತೇನೆ.ಮೊದಲ ಬಾರಿ ಗೆದ್ದ ಶಾಸಕರಿಗೆ ಅನುದಾನ ನೀಡಿಲ್ಲ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡನೆ(Budget presentation) ಮಾಡ್ತಾರೆ ಎಂಬ ಆಶಾಭಾವನೆಯಲ್ಲಿ ನಾವು ಕೂಡ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ.

ಬಿಜೆಪಿ(BJP)ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ಎಲ್ಲಾ ಜಿಲ್ಲಾಧ್ಯಕ್ಷರ ತೀರ್ಮಾನ ಆಗಿದೆ ಉಳಿದಂತಹ ಜಿಲ್ಲೆಗಳ ಅಧ್ಯಕ್ಷರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಯಾವಾಗ ತೀರ್ಮಾನ ಆಗುತ್ತೆ ಆಗ ಘೋಷಣೆ ಆಗುತ್ತೆ ಎಂದು ಹಾಸನದಲ್ಲಿ ಬಿಜೆಪಿ(BJP) ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ.