ನಾಲ್ವಡಿ ಕೃಷ್ಣರಾಜ ಒಡಯರ್ ಗಿಂತ (Nalwadi krishnaraja Odeyar) ಸಿದ್ದರಾಮಯ್ಯ (Siddaramaiah) ಮೈಸೂರಿಗೆ, ರಾಜ್ಯಕ್ಕೆ ಅಭಿವೃದ್ಧಿ, ಅನುದಾನ ಹೆಚ್ಚು ಕೊಟ್ಟಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಒಡೆಯರ್ ಅವರನ್ನ ಸಿದ್ದರಾಮಯ್ಯ ಜೊತೆ ಹೊಲಿಕೆ ಮಾಡಿದ್ದು ಅಪಹಾಸ್ಯ..ಅವರು ಎಲ್ಲಿ..? ಇವರು ಎಲ್ಲಿ..? ಎಂದು ವಿಪಕ್ಷ ನಾಯಕ ಆರ್.ಅಶೋಕ್ (R ashok) ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ಪಾರ್ಟಿ ಯಿಂದ ಪಾರ್ಟಿ ಜಂಪ್ ಮಾಡಿದ್ದಾರೆ. ನಾಲ್ವಡಿ ಒಡೆಯರ್ ಅವರು ಕುಡಿಯುವ ನೀರು, ಕಬ್ಬಿನ ಫ್ಯಾಕ್ಟರಿ, ಸೋಪಿನ ಫ್ಯಾಕ್ಟರಿ ನೀಡಿದ್ದಾರೆ.ಇವರು ಜಾತಿ ಜಾತಿ ಮಧ್ಯ, ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚೋ ಕೆಲಸ ಮಾಡಿದ್ದಾರೆ, ಕೇವಲ ಮನೆ ಹಾಳು ಮಾಡೋ ಕೆಲಸ ಮಾಡಿದ್ದಾರೆ ಎಂದು ಆರ್.ಆಹೋಕ್ ಜರಿದಿದ್ದಾರೆ.ಯತೀಂದ್ರ ಸಿದ್ದರಾಮಯ್ಯ..ಪುಣ್ಯಕ್ಕೆ ನಮ್ಮಪ್ಪ ಗಾಂಧಿಗಿಂತ ದೊಡ್ಡವರು ಅಂತ ಹೇಳಿಲ್ಲ. ಈ ರೀತಿ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗದಿರಿ ಹುಷಾರ್ ಎಂದು ಆರ್.ಅಶೋಕ್ ಯತೀಂದ್ರ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಇನ್ನು ದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕ್ರಮ ಸಿದ್ದರಾಮಯ್ಯ ಭಾಗಿಯಾಗಿದ ವಿಚಾರಕಾಂಗ್ರೆಸ್ ನವರು ಏನು ಬೇಕಾದರೂ ಮಾಡಲಿ.ಆದ್ರೆ ಸಿದ್ದರಾಮಯ್ಯ ಅವರಯ ಔಟ್ ಗೋಯಿಂಗ್ ಸಿಎಂ.ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜಗಳ ಬಿಡಿಸಿದ್ರೆ ಸಾಕು.ಇದನ್ನ ಬಿಡಿಸಿದ್ರೆ ಒಂದು ಸಾಧನೆ ಇದಕ್ಕಿಂತ ದೊಡ್ಡ ಸಾಧನೆ ಬೇರೇನೂ ಇಲ್ಲ ಎಂದು ಆರ್.ಅಶೋಕ್ ಟೀಕಿಸಿದ್ದಾರೆ .







