ವ್ಹೀಲಿಂಗ್ ಪುಂಡರನ್ನು ಬಂಧಿಸಿದ ಬೆಂಗಳೂರು ಪೊಲೀಸ್..!ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಮಾಡುವ ಪುಂಡರ ಹಾವಳಿ ಮೀತಿಮಿರಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ 20

ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬೆಂಗಳೂರಿನ ವಿವಿಧ ಸಂಚಾರಿ ಠಾಣೆಗಳಲ್ಲಿ 20 ಪ್ರಕರಣ ದಾಖಲಾಗಿದೆ. ಪೀಣ್ಯ , ರಾಜಾಜಿನಗರ , ಯಶವಂತಪುರ, ಆರ್ಟಿ ನಗರ ಸೇರಿ ಹಲವು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ವೀಲಿಂಗ್ಗೆ

ಬಳಸಿದ್ದ ಬೈಕ್ಗಳು ಕೂಡ ಸಿಜ್ ಮಾಡಲಾಗಿದೆ. ಜೊತೆಗೆ 6 ಪ್ರಕರಣಗಳಲ್ಲಿ ಬೈಕ್ ಕೊಟ್ಟ ಪೋಷಕರ ಮೇಲೂ ಕೇಸ್ ದಾಖಲಿಸಲಾಗಿದೆ. ಇನ್ನೂ 5 ಕೇಸ್ನಲ್ಲಿ ಡಿಎಲ್ ಕ್ಯಾನ್ಸಲ್ ಮಾಡುವಂತೆ ಆರ್ಟಿಓಗೆ ಪೊಲೀಸರು ಪತ್ರ ಬರೆದಿದ್ದಾರೆ.











