• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಾಟ್ಸಪ್ ಬಳಕೆದಾರರೇ ಎಚ್ಚರ : ದೀಪಾವಳಿ ಆಫರ್ ಹೆಸರಲ್ಲಿ ಬರುವ ಈ ಲಿಂಕ್ ಕ್ಲಿಕ್ ಮಾಡಿದ್ರೆ ಖಾತೆ ಖಾಲಿ!

Shivakumar by Shivakumar
November 2, 2026
in Top Story, ದೇಶ
0
WhatsApp users, beware: Clicking on this link—purportedly a 'Diwali offer'—could empty your account
Share on WhatsAppShare on FacebookShare on Telegram

ನವದೆಹಲಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಮುಖ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಆಫರ್ ಹಾಗೂ ರಿಯಾಯಿತಿಗಳನ್ನು (Diwali offer) ಘೋಷಿಸುತ್ತಿವೆ. ಆದರೆ ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು (Cyber ​​fraudsters), ನಕಲಿ ಸಂದೇಶಗಳ (WhatsApp) ಮೂಲಕ ಜನರನ್ನು ವಂಚಿಸಲು ಬಲೆ ಬೀಸುತ್ತಿದ್ದಾರೆ.

ADVERTISEMENT

ದೇಶದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಾಟ್ಸಾಪ್‌ ಮೂಲಕ ಜನಪ್ರಿಯ ಬ್ರ್ಯಾಂಡ್‌ಗಳ ಹೆಸರಿನಲ್ಲಿ ನಕಲಿ ಆಫರ್ ಲಿಂಕ್‌ಗಳನ್ನು ಕಳುಹಿಸಿ ಹಣ ಲೂಟಿ ಮಾಡುವ ಜಾಲ ಸಕ್ರಿಯವಾಗಿದೆ. ಸದ್ಯ ಏರ್‌ಟೆಲ್ (Airtel) ಹೆಸರಿನಲ್ಲಿ ₹2,000 ಉಚಿತ ನಗದು ನೀಡುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಹರಡಲಾಗುತ್ತಿದೆ.

HD Kumaraswamy: ಕೃಪಾ ಆಳ್ವಾಗೂ, ಕೇರಳದ ಆ ಹೆಣ್ಣು ಮಗಳಿಗೂ ಏನು ಸಂಬಂಧ? #pratidhvani

ಏನಿದು ದೀಪಾವಳಿ ಹಗರಣ?

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು (@arbajahmad009) ವಿಡಿಯೋ ಮೂಲಕ ಈ ವಂಚನೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್‌ಗೆ ಸಂದೇಶಗಳು ಬರುತ್ತಿದ್ದು, ಅದರಲ್ಲಿ “ಏರ್‌ಟೆಲ್- ದೀಪಾವಳಿ ಕಾ ತ್ಯೋಹಾರ್” (Airtel- Diwali ka Tyohaar) ಎಂದು ಬರೆಯಲಾಗಿದೆ.

ಈ ಸಂದೇಶದಲ್ಲಿ, “ನನಗೆ ಲಿಂಕ್ ಮೂಲಕ ₹2,000 ಹಣ ಬಂದಿದೆ, ನೀವು ಕೂಡ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಣ ಪಡೆದುಕೊಳ್ಳಿ” ಎಂದು ಆಮಿಷ ಒಡ್ಡಲಾಗುತ್ತಿದೆ. ಉಚಿತ ಹಣ ಸಿಗುತ್ತದೆ ಎಂಬ ಆಸೆಗೆ ಬಿದ್ದು ಜನ ಪರಿಶೀಲಿಸದೆ ಲಿಂಕ್ ಕ್ಲಿಕ್ ಮಾಡುವ ಸಾಧ್ಯತೆ ಹೆಚ್ಚು. ಆದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಖಾಲಿಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ವಂಚನೆಯಿಂದ ಪಾರಾಗಲು ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ:

ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ: ಅಪರಿಚಿತ ಸಂಖ್ಯೆಗಳಿಂದ ಬರುವ ಉಚಿತ ಹಣ, ಬಹುಮಾನ ಅಥವಾ ಉಡುಗೊರೆಗಳ ಆಮಿಷವಿರುವ ಯಾವುದೇ ಲಿಂಕ್‌ಗಳನ್ನು ತೆರೆಯಬೇಡಿ.

ಅಧಿಕೃತ ಮೂಲಗಳಿಂದ ಪರಿಶೀಲಿಸಿ: ಯಾವುದೇ ಕಂಪನಿ ಅಥವಾ ಬ್ರ್ಯಾಂಡ್‌ ಹೆಸರಿನಲ್ಲಿ ಆಫರ್ ಬಂದಾಗ, ನೇರವಾಗಿ ಆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಮಾತ್ರ ಮಾಹಿತಿ ಖಚಿತಪಡಿಸಿಕೊಳ್ಳಿ.

ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ: ಅನುಮಾನಾಸ್ಪದ ವೆಬ್‌ಸೈಟ್‌ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರ, ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ, ಯುಪಿಐ ಪಿನ್ (UPI PIN), ಪಾಸ್‌ವರ್ಡ್ ಅಥವಾ ಒಟಿಪಿ (OTP) ಅನ್ನು ನಮೂದಿಸಬೇಡಿ.

ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ: ಖಚಿತಪಡಿಸಿಕೊಳ್ಳದ ಯಾವುದೇ ಸಂದೇಶ ಅಥವಾ ಆಫರ್‌ಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕಳುಹಿಸಬೇಡಿ. ಇದರಿಂದ ಇತರರೂ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು.

ರಿಪೋರ್ಟ್ ಮತ್ತು ಬ್ಲಾಕ್ ಮಾಡಿ: ಇಂತಹ ಅನುಮಾನಾಸ್ಪದ ಸಂದೇಶಗಳು ಬಂದ ತಕ್ಷಣ ಆ ನಂಬರ್ ಅನ್ನು ವಾಟ್ಸಾಪ್‌ನಲ್ಲಿ ರಿಪೋರ್ಟ್ ಮಾಡಿ, ಬಳಿಕ ಬ್ಲಾಕ್ ಮಾಡಿ.

ಉಚಿತವಾಗಿ ಹಣ ಸಿಗುತ್ತದೆ ಎಂಬ ಸಂದೇಶಗಳು ಬಹುತೇಕ ವಂಚನೆಯ ಭಾಗವೇ ಆಗಿರುತ್ತವೆ. ಯಾವುದೇ ಆನ್‌ಲೈನ್ ಆಫರ್‌ಗಳನ್ನು ನಂಬುವ ಮುನ್ನ ಅಧಿಕೃತ ಮೂಲಗಳಿಂದ ಮಾಹಿತಿ ದೃಢಪಡಿಸಿಕೊಳ್ಳುವುದು ಸುರಕ್ಷಿತ.

ತಮ್ಮ ವಿರುದ್ಧ ಐಟಿ, ಇಡಿ ದಾಳಿಗೆ ಕೇಂದ್ರ ಸಚಿವರ ಸಂಚು: ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

Tags: cyber fraudstersDiwali offerWhatsApp
Previous Post

ತಮ್ಮ ವಿರುದ್ಧ ಐಟಿ, ಇಡಿ ದಾಳಿಗೆ ಕೇಂದ್ರ ಸಚಿವರ ಸಂಚು: ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

Next Post

ವಿಮಲ್ ಜಾಹೀರಾತು ವಿವಾದ : ಹೈಕೋರ್ಟ್ ಮೊರೆ ಹೋದರೂ ಅಜಯ್ ದೇವಗನ್ ವಿರುದ್ಧ ಕ್ರಮ ಖಚಿತ!

Related Posts

A shock for passengers during the Diwali season: KSRTC and BMTC bus ticket fares hiked suddenly
Top Story

ದೀಪಾವಳಿ ಹೊತ್ತಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ

by Shivakumar
November 4, 2026
0

ಬೆಂಗಳೂರು :  ದೀಪಾವಳಿ (Deepavali) ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಭಾರಿ ಆಘಾತ ನೀಡಿದೆ. ಇತ್ತೀಚೆಗಷ್ಟೇ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿದ್ದ...

Read moreDetails
ಶ್ರೀರಾಮ ಮಂದಿರದ ದೇಣಿಗೆ ಹಣಕ್ಕೆ ಕನ್ನ?ರಾಮಮಂದಿರದ ದೇಣಿಗೆ ಎಣಿಕೆ ವೇಳೆ ಅಕ್ರಮ?

ಶ್ರೀರಾಮ ಮಂದಿರದ ದೇಣಿಗೆ ಹಣಕ್ಕೆ ಕನ್ನ?ರಾಮಮಂದಿರದ ದೇಣಿಗೆ ಎಣಿಕೆ ವೇಳೆ ಅಕ್ರಮ?

November 4, 2026
22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

November 4, 2026
ಭಾರತದಲ್ಲಿ ಹೆಚ್ಚಿದ ಆಪಲ್ ಹವಾ; ಜಾಗತಿಕವಾಗಿ ಕಂಪನಿಯ ಗಳಿಕೆ ಎಷ್ಟಾಗಿದೆ ಗೊತ್ತೇ?

ಭಾರತದಲ್ಲಿ ಹೆಚ್ಚಿದ ಆಪಲ್ ಹವಾ; ಜಾಗತಿಕವಾಗಿ ಕಂಪನಿಯ ಗಳಿಕೆ ಎಷ್ಟಾಗಿದೆ ಗೊತ್ತೇ?

November 4, 2026
ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

November 3, 2026
Next Post
Vimal Ad Controversy: Action Against Ajay Devgn Certain, Despite Him Approaching the High Court!

ವಿಮಲ್ ಜಾಹೀರಾತು ವಿವಾದ : ಹೈಕೋರ್ಟ್ ಮೊರೆ ಹೋದರೂ ಅಜಯ್ ದೇವಗನ್ ವಿರುದ್ಧ ಕ್ರಮ ಖಚಿತ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada