ಪೊಲೀಸರು ನೋಟಿಸ್ ನೀಡಲು ವಾಟ್ಸಾಪ್ (Whats App Or Social Media) ಅಥವಾ ಇತರ ಎಲೆಕ್ಟ್ರಾನಿಕ್ ಸಾಧನ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ,

CRPC , 1973/BNSS, 2023 ರ ಅಡಿಯಲ್ಲಿ ಸೂಚಿಸಿರುವ ಸೇವಾ ವಿಧಾನದ ಮೂಲಕ ಮಾತ್ರ ನೋಟಿಸ್ ನೀಡಲು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಆಯಾ ಪೊಲೀಸರು ಆದೇಶವನ್ನು ನೀಡಬೇಕು. CRPC ,1973/BNSS 2023 ರ ಅಡಿಯಲ್ಲಿ ಗುರುತಿಸಲ್ಪಟ್ಟ ಸೇವಾ ವಿಧಾನಕ್ಕೆ ಬದಲಿಯಾಗಿ ವಾಟ್ಸಾಪ್ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೋಟಿಸ್ ಸೇವೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ MM Sundaresh & Rajesh Bindal ಅವರ ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆ (CRPC), 1973 ಅಥವಾ BNSS (ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ) 2023 ರ ಅಡಿಯಲ್ಲಿ ಸೂಚಿಸಿರುವ ಸೇವಾ ವಿಧಾನದ ಮೂಲಕ ಮಾತ್ರ ಆರೋಪಿಗಳಿಗೆ ನೋಟಿಸ್ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯಾ ಪೊಲೀಸ್ ಯಂತ್ರಕ್ಕೆ ಹೆಚ್ಚುವರಿ ಸ್ಥಾಯಿ ಆದೇಶವನ್ನು ಹೊರಡಿಸಬೇಕು ಎಂದು ನ್ಯಾಯಮೂರ್ತಿ ಸುಂದರೇಶ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಹಿರಿಯ ವಕೀಲ ಸಿದ್ಧಾರ್ಥ್ ಲೂತ್ತಾ Siddarth Lutha), ಅಮಿಕಸ್ ಕ್ಯೂರಿ (ನ್ಯಾಯಾಲಯದ ಸ್ನೇಹಿತ) ಅವರು ನೋಟಿಸ್ ಸೇವೆಯನ್ನು ವೈಯಕ್ತಿಕವಾಗಿ ಮಾಡಬೇಕು, ವಾಟ್ಸಾಪ್ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅಲ್ಲ ಎಂದು ಹೇಳಿದರು.