ರಾಕಿಂಗ್ ಸ್ಟಾರ್ ಯಶ್ (Rocking star yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಶೂಟಿಂಗ್‌ಗೆ ಭರದ ಸಿದ್ಧತೆ ನಡೆದಿದ್ದು, ಇಷ್ಟರಲ್ಲೇ ಪೂರ್ಣ ಪ್ರಮಾಣದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಇಷ್ಟೆಲ್ಲದರ ನಡುವೆ ಟಾಕ್ಸಿಕ್ ಟೀಂ ಸಿನಿಮಾದ ತಂತ್ರಜ್ಞರು, ಕಲಾವಿದರ ಬಗ್ಗೆ ಒಂದಿಂಚೂ ಮಾಹಿತಿ ಇದುವರೆಗೂ ಹೊರಬಂದಿಲ್ಲ.
ಆದ್ರೀಗ ಮೂಲಗಳಿಂದ ಟಾಕ್ಸಿಕ್ ಸಿನಿಮಾಟೋಗ್ರಾಫರ್ (Cinematographer) ಯಾರು ಅನ್ನೋದು ತಿಳಿದು ಬಂದಿದೆ. ಟಾಕ್ಸಿಕ್ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್ (Geethu mohan das) ಅವರ ಪತಿ ರಾಜೀವ್ ರವಿ (Rajeev ravi) ಟಾಕ್ಸಿಕ್ ಸಿನಿಮಾಗೆ ಸಿನಿಮಾಟೋಗ್ರಾಫರ್ ಆಗಿದ್ದಾರೆ. ರಾಜೀವ್ ರವಿ ಖ್ಯಾತ ಡಿಓಪಿ (DOP) ಆಗಿದ್ದು, ಕಮ್ಮಟಿಪಡಂ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 (KGF Chapter 2) ನಂತರ ಯಶ್‌ರ ಮುಂದಿನ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದ್ದು, ಈಗಾಗಲೇ ಟೈಟಲ್ ಅನೌನ್ಸ್ ಆಗಿ ಕೆಲ ತಿಂಗಳುಗಳೇ ಕಳೆದಿದೆ. ಆದ್ರೆ ಚಿತ್ರತಂಡದಿಂದ ಯಾವುದೇ ಅಪ್ಲೇಟ್ಸ್ ಇಲ್ಲದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.