ಮೋದಿ(Modi) ಕಾ ಪರಿವಾರ್ ಅನ್ನೋ ಅಭಿಯಾನವನ್ನು ಬಿಜೆಪಿ(BJP) ಮಾಡ್ತಿದೆ. ಇದು ಲೋಕಸಭೆಗೆ(Loka Saba) ಮಾಡ್ತಿರೋ ಗಿಮಿಕ್ ಅನ್ನೋದು ರಾಜ್ಯ ಹಾಗು ದೇಶದ ಜನರಿಗೂ ಗೊತ್ತಿರೋ ಸಂಗತಿಯೇ ಆಗಿದೆ. ಆದರೂ ಲಾಲೂ ಪ್ರಸಾದ್ ಯಾದವ್(Laalu Prasad Yadav) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಪ್ರಶ್ನೆ ಮಾಡಿರುವು ಹಿಂದೂ ಧರ್ಮದ ಪ್ರಕಾರ ಸರಿಯಾಗಿಯೇ ಇದೆ. ಅದಕ್ಕೆ ಉತ್ತರ ಕೊಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಗಿಮಿಕ್ ರಾಜಕಾರಣ ಮಾಡಲು ಮುಂದಾಗಿದ್ದಾರೆ.

ನರೇಂದ್ರ ಮೋದಿ ಯಾರು..? ನರೇಂದ್ರ ಮೋದಿ ಏನ್ ಮಾಡ್ತಿದ್ದಾರೆ..? ನರೇಂದ್ರ ಮೋದಿಗೆ ಕುಟುಂಬ ಇಲ್ಲ.. ಇದಕ್ಕಾಗಿ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ನರೇಂದ್ರ ಮೋದಿ ಹಿಂದೂ ಅಲ್ಲ. ಒಂದು ವೇಳೆ ಹಿಂದೂ ಆಗಿದ್ದರೆ ಹಿಂದೂ ಸಂಪ್ರದಾಯವನ್ನು ಮೋದಿ ಪಾಲಿಸಬೇಕಿತ್ತು. ಪ್ರತಿಯೊಬ್ಬ ಹಿಂದೂ ಕೂಡ ತನ್ನ ತಾಯಿಯ ಮರಣದ ನಂತರ ತಲೆ ಬೋಳಿಸಿಕೊಳ್ಳುತ್ತಾರೆ. ಆದರೆ ನರೇಂದ್ರ ಮೋದಿ ತಾಯಿ ನಿಧರಾದ ವೇಳೆ ನರೇಂದ್ರ ಮೋದಿ ಅವರು ತಲೆ ಬೋಳಿಸಿಕೊಂಡಿಲ್ಲ. ಅವರು ಏಕೆ ತಲೆ ಬೋಳಿಸಿಕೊಂಡಿಲ್ಲ..? ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಅಲ್ಲವೇ..? ಎಂದು ಪ್ರಶ್ನಿಸಿರುವ ಲಾಲೂ ಪ್ರಸಾದ್ ಯಾದವ್ ಪ್ರಧಾನಿ ಮೋದಿಗೆ ಕುಟುಂಬವಿಲ್ಲದ ಕಾರಣ ಎಲ್ಲಾ ಕಡೆಯಲ್ಲೂ ಕುಟುಂಬದ ವಿರುದ್ಧ ವಾಗ್ದಾಳಿ ಮಾಡ್ತಾರೆ ಎಂದಿದ್ದರು..
ಇದಕ್ಕೆ ಕೌಂಟರ್ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ I.N.D.I.A ಮೈತ್ರಿಕೂಟದ ನಾಯಕರ ವಿರುದ್ದ ಗುಡುಗಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಲ್ಲಿ I.N.D.I.A ಮೈತ್ರಿಕೂಟ ಮುಳುಗಿದೆ. ಕುಟುಂಬ ರಾಜಕೀಯದ ಬಗ್ಗೆ ನಾನು ಪ್ರಶ್ನಿಸಿದಾಗ, ನನ್ನ ಕುಟುಂಬದ ಈಗ ಪ್ರಶ್ನೆ ಮಾಡಿದ್ದಾರೆ. ನನಗೆ ಕುಟುಂಬವಿಲ್ಲ ಎಂದು ಹೇಳಲು ಆರಂಭಿಸಿದ್ದಾರೆ. ದೇಶದ 140 ಕೋಟಿ ಜನರಿಗೆ ನಾನು ಇದನ್ನು ಹೇಳುತ್ತೇನೆ, ಇದು ನನ್ನ ಕುಟುಂಬ, ಯಾರೂ ಇಲ್ಲದವರಿಗೂ ಮೋದಿ ಇದ್ದಾನೆ.. ಬಿಜೆಪಿ ರಾಷ್ಟ್ರದ ಅಭಿವೃದ್ಧಿಗೆ ಬದ್ಧವಾಗಿದೆ. ನನ್ನ ಜೀವನ ತೆರೆದ ಪುಸ್ತಕದಂತೆ. ನಾನು ಚಿಕ್ಕವಯಸ್ಸಲ್ಲಿ ಕನಸು ಹೊತ್ತು ಮನೆ ಬಿಟ್ಟಿದ್ದೆ. ನಾನು ದೇಶದ ಜನರಿಗಾಗಿ ಜೀವ-ಜೀವನ ನಡೆಸ್ತೀದ್ದೀನಿ. ನನಗೆ ಅಂತಾ ಯಾವ ಕನಸನ್ನೂ ಕಟ್ಟುಕೊಂಡವನಲ್ಲ. ನಿಮ್ಮ ಕನಸನ್ನ ನನಸು ಮಾಡುವುದೇ ನನ್ನ ದೊಡ್ಡ ಸಂಕಲ್ಪ. ದೇಶದ ಜನ ನನ್ನನ್ನ ಅವ್ರ ಮನೆಯವ್ರು ಅಂದ್ಕೊಂಡಿದ್ದಾರೆ. ಹಾಗಾಗಿ ಹೇಳ್ತಿದ್ದೀನಿ 140 ಕೋಟಿ ಜನರೇ ನನ್ನ ಪರಿವಾರ ಎಂದಿದ್ದಾರೆ.

ಲಾಲೂ ಹೇಳಿರುವ ಮಾತಿನಲ್ಲೂ ಅರ್ಥವಿದೆ. ಹಿಂದೂಗಳು ಅದರಲ್ಲೂ ತಾಯಿ ನಿಧನರಾದಾಗ ಕಿರಿಯ ಮಗ ತಲೆ ಬೋಳಿಸಿಕೊಂಡು ಶ್ರಾದ್ಧ ಮಾಡಬೇಕಿತ್ತು. ಇರಲಿ. ಆದರೆ ಬಿಜೆಪಿಯಲ್ಲಿ ಎಷ್ಟೊಂದು ನಾಯಕರ ಮಕ್ಕಳು ರಾಜಕಾರಣದಲ್ಲಿದ್ದಾರೆ..? ಬಿಜೆಪಿ ಮೈತ್ರಿ ಪಕ್ಷದಲ್ಲೂ ಕುಟುಂಬ ರಾಜಕಾರಣ ಹಾಸು ಹೊಕ್ಕಿದೆ. ಕಳೆದ ಬಾರಿ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದ ಪ್ರಧಾನಿ ಮೋದಿ ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಅಸ್ತ್ರ ಬಳಸಿದ್ದರು. ಈ ಬಾರಿ ಅದೇ ರೀತಿ ರಾಜ್ಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಗುಡುಗುತ್ತಾರಾ..? ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಹೊಂದಾಣಿಕೆಗಳನ್ನು ನೋಡಿದಾಗ ಯಾರೂ ಸಾಚಾಗಳಲ್ಲ, ಎಲ್ಲವೂ ರಾಜಕಾರಣ ಎಂದೆನಿಸುವುದು ಮಾತ್ರ ಸತ್ಯ.
#NarendraModi #LaaluPrasadYadav #PMofIndia #BJPIndia #LokaSaba2024












