
ಹುಬ್ಬಳ್ಳಿಯಲ್ಲಿ ಚಾಕೊಲೇಟ್ ಕೊಡೋದಾಗಿ 5 ವರ್ಷದ ಪುಟ್ಟ ಬಾಲಕಿಯನ್ನು ಕರ್ಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿ ಬಿಹಾರ ಮೂಲದ ರಿತೇಶನ ಎದೆಗೆ ಗುಂಡಿಕ್ಕಿ ಕಥೆ ಮುಗಿಸಿದ್ದಾರೆ ಪೊಲೀಸರು. ವಿಚಾರಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿ ಸತ್ತಿದ್ದಾನೆ.

ಈಗ ದಯಮಾಡಿ ಯಾರೂ ನಕಲಿ ಎನ್ಕೌಂಟರ್ ಕಥೆ ಕುಟ್ಟೋಕೆ ಶುರುಮಾಡಬೇಡಿ. ಅವನು ಬಡವ, ಕೂಲಿಕಾರ್ಮಿಕ, ಅನಾಥ ಎಂದೆಲ್ಲಾ ತವಡು ಕುಟ್ಟಬೇಡಿ. ನಂದೆಲ್ಲಿಡ್ಲಿ… ಎಂಬ ಪ್ರಯತ್ನ ನಿಲ್ಲಿಸಿ ಆ ಮಗುವಿನ ದುರಂತ ಸಾವಿಗೆ, ಆ ಕುಟುಂಬದ ಕಣ್ಣೀರಿಗೆ ಹೃದಯವಾಗಿ! ಕ್ರೈಂ – ಆಸ್ತಿ ಅಂತಸ್ತಿನ ಮೇಲೆ ನಿರ್ಧಾರವಾಗುವುದಿಲ್ಲ. ನಿಜ, ಕಾನೂನು ಪ್ರಕಾರವೇ ಪ್ರಕ್ರಿಯೆಗಳು ನಡೆಯಬೇಕು. ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಅವನನ್ನು ಬಂಧಿಸಿ ಕಾನೂನು ಪ್ರಕಾರವೇ ವಿಚಾರಣೆ ನಡೆಸುತ್ತಿದ್ದರು. ಆದರೆ ಪುಟ್ಟ ಬಾಲೆಯನ್ನು ಅತ್ಯಾಚಾರ ಮಾಡಿ ಕೊಂದಿದ್ದಲ್ಲದೇ ಪೊಲೀಸರನ್ನೇ ಕೊಲ್ಲಲು ಮುಂದಾಗುವ ಇಂತಹ ರಕ್ಕಸರನ್ನು ಕೊಲ್ಲದೇ ಇನ್ನೇನು ಪೊಲೀಸರು ತಾವೇ ಬಲಿಯಾಗಬೇಕೆ? ಅವರಿಗೆ ಬಂದೂಕು ಕೊಟ್ಟಿರುವುದೇಕೆ ಆಟ ಆಡೋಕಾ?

ಹೆಣ್ಣುಮಕ್ಕಳನ್ನು ಮುಟ್ಟುವ ರಾಕ್ಷಸರಿಗೆ ಇದಕ್ಕಿಂತ ಸೂಕ್ತ ಶಿಕ್ಷೆ ಬೇರೆ ಏನಿದೆ?
ಅಂದಹಾಗೇ, ಹೊರ ರಾಜ್ಯದಿಂದ ಅಥವಾ ಹೊರ ದೇಶದಿಂದ ಹೊಟ್ಟೆಪಾಡಿಗೆ ಬಂದವರು ನಮ್ಮ ಹೆಣ್ಣುಮಕ್ಕಳ ಮೇಲೆಯೇ ಕೈ ಇಡುತ್ತಿದ್ದಾರೆ. ದುಷ್ಕ್ರತ್ಯಗಳನ್ನು ಎಸಗುತ್ತಿದ್ದಾರೆ. ಇದು ಅತ್ಯಂತ ಎಚ್ಚರವಹಿಸುವ ಸಮಯ!