ಇತ್ತೀಚೆಗೆ ನಡೆದ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರ.
ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು, ಆಖಾಡಕ್ಕೆ ಧುಮುಕಿದ್ದ ಕೆ.ಎಸ್. ಈಶ್ವರಪ್ಪ, ರಘುಪತಿ ಭಟ್.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಫರ್ಧೆ.
ಇತ್ತ ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸ್ಫರ್ಧೆ.
ಈ ಇಬ್ಬರ ರಾಜಕೀಯ ಭವಿಷ್ಯ ಏನು? ಎಂಬ ಚರ್ಚೆ ಆರಂಭ.
ಈ ಇಬ್ಬರನ್ನು ಬಿಜೆಪಿಯಿಂದ ಅಮಾನತ್ತು ಮಾಡಿ ಆದೇಶ ಹೊರ ಹಾಕಿರುವ ಶಿಸ್ತು ಸಮಿತಿ.
ಈ ಇಬ್ಬರು ನಾಯಕರು ಮತ್ತೆ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಚರ್ಚೆಯೂ ತೆರೆಮರೆಯಲ್ಲಿ ಆರಂಭ.
ಆದ್ರೆ, ಹೇಗೆ ಅವರು ಬಿಜೆಪಿ ಸೇರುತ್ತಾರೆ?
ಯಾವಾಗ ಅವರನ್ನು ಬಿಜೆಪಿ ಕರೆತರಲಾಗುತ್ತೆ?
ಯಾರು ಈ ನಿರ್ಧಾರ ಮಾಡುತ್ತಾರೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸಬೇಕಾಗಿರುವುದು ಬೇರೆ ಯಾರು ಅಲ್ಲ.
ಹೈಕಮಾಂಡ್ ನಾಯಕರು.
ಹೈಕಮಾಂಡ್ ನಾಯಕರ ಗ್ರೀನ್‌ಸಿಗ್ನಲ್ ಸಿಕ್ಕರೇ ಮಾತ್ರ ಈ ಇಬ್ಬರು ನಾಯಕರು ಪಕ್ಷ ಸೇರ್ಪಡೆ.
ಹಾಗಾದ್ರೆ, ಈ ಇಬ್ಬರು ನಾಯಕರಿಗೂ ಹೈಕಮಾಂಡ್ ನಾಯಕರು ಓಕೆ ಅಂತಾರಾ? ಇಲ್ವಾ?
ಸದ್ಯ ಇಬ್ಬರು ನಾಯಕರು ತೆರೆಮರೆಯಲ್ಲಿ ಮಾಡುತ್ತಿರುವುದಾದ್ರೂ ಏನು?
“ಪ್ರತಿಧ್ವನಿ” ಬಿಚ್ಚಿಡುತ್ತಿದೆ ಇಬ್ಬರು ನಾಯಕರ ಕಂಪ್ಲೀಟ್ ಡೀಟೈಲ್ಸ್.
ಇಬ್ಬರು ನಾಯಕರು ಕೂಡ ತೆರೆಮರೆಯಲ್ಲಿ ಪಕ್ಷ ಸೇರ್ಪಡೆಗೆ ಕಸರತ್ತು ಆರಂಭಿಸಿದ್ದಾರೆ.
ರಾಜ್ಯ ನಾಯಕರ ಸಂಪರ್ಕಕ್ಕೆ ಬಾರದೇ ನೇರವಾಗಿ ಹೈಕಮಾಂಡ್ ನಾಯಕರ ಮಟ್ಟದಲ್ಲೇ ಮಾತುಕತೆ ನಡೆಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದ್ರೆ, ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಬೇಕಾಗಿರುವ ಉಪ-ಚುನಾವಣೆಗೂ ಮುನ್ನಾ ಪಕ್ಷ ಸೇರ್ಪಡೆ ಎಂಬ ಮಾತುಗಳು ಆರಂಭವಾಗಿದೆ.