ಇತ್ತೀಚಿನ ಎರಡೂವರೆ ಶತಮಾನಗಳ ಅವಧಿಯ ವಿಶ್ವದ ಇತಿಹಾಸವನ್ನು ಅವಲೋಕಿಸಿದಾಗ ಕ್ರಿ.ಶ. ೧೮೦೦ ರ ನಂತರದ ಕಾಲಘಟ್ಟವನ್ನು ಜಗತ್ತಿನ ಅಧುನಿಕ ಕಾಲವೆಂದು ಗುರುತಿಸುತ್ತೇವೆ. ಈ ಕಾಲಘಟ್ಟದಲ್ಲಿ ಜಗತ್ತಿನಾದ್ಯಂತ ಆಗಿಹೋದ ಬದಲಾವಣೆಗಳು ಹಾಗು ಅಭಿವೃದ್ಧಿಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಡುಗೆ ಗಣನೀಯವಾಗಿದೆ. ನಾಗರಿಕ ಸುಧಾರಣೆಗಳಿಂದ ಮೊದಲ್ಗೊಂಡುˌ ಶಿಕ್ಷಣˌ ವೈಜ್ಞಾನಿಕ ಸಂಶೋಧನೆಗಳುˌ ತಂತ್ರಜ್ಞಾನˌ ಆರೋಗ್ಯ ವಿಜ್ಞಾನದ ವಿಕಸನˌ ಸಾಮಾಜಿಕ ಕಾರ್ಯಗಳು ಮುಂತಾದಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಪಾಶ್ಟಿಮಾತ್ಯ ದೇಶಗಳು ಗಮನಾರ್ಹ ಕೊಡುಗೆ ನೀಡಿವೆ.
ಅಧುನಿಕ ಜಗತ್ತಿನ ಅಭಿವೃದ್ಧಿಗೆ ಹಿಂದೂ ಮತ್ತು ಮುಸ್ಲಿಮ್ ಧರ್ಮಿಯರು ಮತ್ತು ಆ ಧರ್ಮಿಯರು ವಾಸಿಸುವ ದೇಶಗಳ ಕೊಡುಗೆ ಶೇಕಡ ೧% ಕ್ಕಿಂತಲೂ ಕಡಿಮೆಯಿದೆ ಎನ್ನುವುದು ಆಯಾ ಧರ್ಮಿಯರು ಮತ್ತು ಅವರು ಪ್ರತಿನಿಧಿಸುವ ದೇಶಗಳ ಜನರು ಚಿಂತಿಸಬೇಕಾದದ್ದ ಸಂಗತಿಯಾಗಿದೆ. ನಾವು ಇತಿಹಾಸದ ಪುಟಗಳನ್ನು ತಿರಿವಿ ಹಾಕಿದರೆ ಕ್ರಿ.ಶ.೧೮೦೦ ರಿಂದ ೧೯೪೦ ರ ವರೆಗಿನ ಒಟ್ಟು ಒಂದೂವರೆ ಶತಮಾನಗಳ ಅವಧಿಯಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಕೇವಲ ತಮ್ಮತಮ್ಮ ಸಾಮ್ರಾಜ್ಯಗಳ ವಿಸ್ತರಣೆˌ ಗದ್ದುಗೆಗಳ ರಕ್ಷಣೆಗಾಗಿ ಯುದ್ದ ˌ ರಕ್ತಪಾತ ಮತ್ತು ಬಡಿದಾಟ ಮಾಡಿದ್ದನ್ನು ಕಾಣುತ್ತೇವೆ.
ಒಂದು ವೇಳೆ ನಾವು ವಿಶ್ವದ ೧೦೦ ಜನ ದೊಡ್ಡ ದೊಡ್ಡ ವಿಜ್ಞಾನಿಗಳ ಹೆಸರಿರುವ ಪಟ್ಟಿಯನ್ನು ತಡಕಾಡಿದರೆ ಅದರಲ್ಲಿ ನಮಗೆ ಒಂದೊ ಅಥವಾ ಎರಡೊ ಹಿಂದೂ ಮತ್ತು ಮುಸಲ್ಮಾನ ವಿಜ್ಞಾನಿಗಳ ಹೆಸರುಗಳು ಸಿಗುತ್ತವೆ. ಅಂದರೆ ಹಿಂದೂ ಮತ್ತು ಮುಸಲ್ಮಾನ ರಾಷ್ಟ್ರಕ್ಕೆ ಸೇರಿದ ಜನರು ವಿಜ್ಞಾನಕ್ಕಿಂದ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಈ ಹಿನ್ನೆಡೆಗೆ ಕಾರಣವೆಂದು ಹೇಳಬಹುದಾಗಿದೆ. ಧಾರ್ಮಿಕ ಕಂದಾಚಾರಗಳು ಹಾಗು ಉನ್ಮಾದಗಳು ಆಯಾ ಸಮುದಾಯದ ವೈಜ್ಞಾನಿಕ ಮನೋಭಾವವನ್ನು ನಾಶಗೊಳಿಸುತ್ತವೆ ಎನ್ನುವ ಸಂಗತಿ ಚಿಂತನಾರ್ಹವಾದದ್ದು.
ಇಡೀ ಜಗತ್ತಿನ ೬೧ ರಾಷ್ಟ್ರಗಳ ಮೇಲೆ ಇಸ್ಲಾಮ್ ಧರ್ಮಿಯರು ಪ್ರಾಬಲ್ಯ ಹೊಂದಿದ್ದು ಆ ದೇಶಗಳಲ್ಲಿ ಮುಸಲ್ಮಾನ ಧರ್ಮಿಯರ ಜನಸಂಖ್ಯೆ ೧.೫೦ ಅರಬ್ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಆ ದೇಶಗಳಲ್ಲಿ ಒಟ್ಟು ೪೩೫ ವಿಶ್ವವಿದ್ಯಾಲಯಗಳಿದ್ದು ಮಸೀದಿಗಳ ಸಂಖ್ಯೆ ಅಗಣಿತ ಎಂದು ಹೇಳಲಾಗುತ್ತಿದೆ. ಇನ್ನೊಂದುಕಡೆ ಜಗತ್ತಿನಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ ೧.೨೬ ಅರಬ್ ಎಂದು ಅಂದಾಜಿಸಲಾಗಿದ್ದುˌ ˌ ಹಿಂದೂ ಧರ್ಮಿಯರ ಪ್ರಾಬಲ್ಯವಿರುವ ದೇಶಗಳಲ್ಲಿ(ಜಗತ್ತಿನ 95% ಹಿಂದೂಗಳು ಭಾರತದಲ್ಲಿದ್ದಾರೆ) ೩೮೫ ವಿಶ್ವವಿದ್ಯಾಲಯಗಳು ಮತ್ತು ೩೦ ಲಕ್ಷಕ್ಕೂ ಮಿಕ್ಕು ಮಂದಿರಗಳಿವೆ ಎನ್ನುತ್ತವೆ ಅಂಕಿಅಂಶಗಳು. ಇದು ಈ ಎರಡೂ ಧರ್ಮಿಯರ ಆದ್ಯತೆಯನ್ನು ಸ್ಪಷ್ಟಪಡಿಸುತ್ತದೆ.

ಅಮೇರಿಕ ಒಂದೇ ರಾಷ್ಟ್ರದಲ್ಲಿ ೩೦೦೦ ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಹಾಗು ಉನ್ನತ ಶಿಕ್ಷಣ ಸಂಸ್ಥೆಗಳಿದ್ದು ಚಿಕ್ಕ ದೇಶವಾಗಿರುವ ಜಪಾನಲ್ಲಿ ೯೦೦ ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಆದರೆ ಇಂಗ್ಲೆಂಡ ಮತ್ತು ಅಮೆರಿಕ ಉಭಯ ದೇಶಗಳಲ್ಲಿ ಅಂದಾಜು ೩-೪ ಲಕ್ಷ ಸಂಖ್ಯೆಯ ಚರ್ಚುಗಳು ಮಾತ್ರ ಇವೆ ಎನ್ನುತ್ತವೆ ಗೂಗಲ್ ದಾಖಲೆಗಳು. ಕ್ರೈಸ್ತ ಧರ್ಮದ ೪೫% ಯುವಕರು ಉನ್ನತ ಶಿಕ್ಷಣ ಪಡೆಯಲು ವಿಶ್ವವಿದ್ಯಾಲಯಗಳ ವರೆಗೆ ಮುಟ್ಟಿದರೆ ೨% ಮುಸಲ್ಮಾನ್ ಹಾಗು ೮% ಹಿಂದೂ ಯುವಕರು ಉನ್ನತ ಶಿಕ್ಷಣ ಪಡೆಯಲು ವಿಶ್ವವಿದ್ಯಾಲಯ ಮಟ್ಟ ತಲಪುತ್ತಾರೆ.
ವಿಶ್ವದ ೨೦೦ ಬಹು ದೊಡ್ಡ ಮತ್ತು ಜನಪ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಮೆರಿಕದಲ್ಲಿ ೫೪ˌ ಇಂಗ್ಲೆಂಡ್ನಲ್ಲಿ ೨೪ˌ ಆಸ್ಟ್ರೇಲಿಯದಲ್ಲಿ ೧೭ˌ ಚೀನಾˌ ಜಪಾನ್ ಮತ್ತು ಹಾಲೆಂಡಿನಲ್ಲಿ ತಲಾ ೧೦ˌ ಫ್ರಾನ್ಸ್ ನಲ್ಲಿ ೯ˌ ಜರ್ಮನಿಯಲ್ಲಿ ೮ ವಿಶ್ವವಿದ್ಯಾಲಯಗಳಿದ್ದರೆ ಹಿಂದೂಗಳ ಭಾರತದಲ್ಲಿ ಕೇವಲ ೨ ಮತ್ತು ಮುಸಲ್ಮಾನರ ದೇಶಗಳಲ್ಲಿ ಕೇವಲ ೧ ದೊಡ್ಡ ವಿಶ್ವವಿದ್ಯಾಲಯಗಳಿವೆ. ಶೈಕ್ಷಣಿಕ ಗುಣಮಟ್ಟದಲ್ಲಿ ಜಗತ್ತಿನ ೨೦೦ ಅತ್ಯುತ್ಕೃಷ್ಟ ವಿಶ್ವವಿದ್ಯಾಲಯಗಳಲ್ಲಿ ಭಾರತದಲ್ಲಿ ಒಂದೂ ವಿಶ್ವವಿದ್ಯಾಲಯ ಇಲ್ಲ. ಇದು ಶೈಕ್ಷಣಿಕ ಕ್ಷೇತ್ರಕ್ಕೆ ಹಿಂದೂ ಮತ್ತು ಮುಸಲ್ಮಾನರು ನೀಡಿದ ಮಹತ್ವವನ್ನು ಸಾಂಕೇತಿಸುತ್ತದೆ.
ಜಗತ್ತಿನ ಎಲ್ಲ ದೇಶಗಳ ಆರ್ಥಿಕ ಸ್ಥಿತಿಗತಿಗಳನ್ನು ನಾವು ಅವಲೋಕಿಸಿದಾಗ ಅಮೆರಿಕದ ಜಿಡಿಪಿ (ಆರ್ಥಿಕ ಬೆಳವಣಿಗೆಯ ದರ) ೧೪.೯ ಟ್ರಿಲಿಯನ್ ಡಾಲರ್ ಇದ್ದರೆ ಸಂಪೂರ್ಣ ಮುಸ್ಲಿಮ್ ರಾಷ್ಟ್ರಗಳ ಸರಾಸರಿ ಜಿಡಿಪಿ ೩.೫ ಟ್ರಿಲಿಯನ್ ಡಾಲರ್ ಆಗಿದೆ. ಸಮಸ್ತ ಹಿಂದೂಗಳನ್ನು ಪ್ರತಿನಿಧಿಸುವ ವಿಶ್ವಗುರು ಮೋದಿ ನೇತೃತ್ವದ ಭಾರತದ ಜಿಡಿಪಿ ೧.೮೭ ಟ್ರಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆಯಾದರೂ ಅದೂ ಇನ್ನೂ ಋಣಾತ್ಮಕ ಮಟ್ಟದಲ್ಲಿದೆ ಎನ್ನಲಾಗುತ್ತಿದೆ. ಆರ್ಥಿಕ ಸ್ಥಿತಿಗತಿಗಳಲ್ಲೂ ಈ ಹಿಂದೂ-ಮುಸ್ಲಿಮ್ ದೇಶಗಳ ಪರಿಸ್ಥಿತಿ ಅಯೋಮಯವಾಗಿದೆ.
ಜಗತ್ತಿನ ೬೦ˌ೦೦೦ ಬಹುರಾಷ್ಟೀಯ ಕಂಪನಿಗಳಲ್ಲಿ ಬಹುತೇಕ ಕಂಪನಿಗಳು ಅಮೆರಿಕ ಮತ್ತು ಐರೋಪ್ಯ ಮೂಲದವುಗಳಾಗಿದ್ದು ಆ ದೇಶಗಳಲ್ಲೇ ಹೆಚ್ಚಿನ ಪ್ರಮಾಣದ ವ್ಯವಹಾರಗಳನ್ನು ಹೊಂದಿವೆ. ಇಲ್ಲಿಯವರೆಗೆ ಜಗತ್ತಿನ ೧೦೦೦೦ ವೈಜ್ಞಾನಿಕ ಅವಿಷ್ಕಾರಗಳನ್ನು ಅವಲೋಕಿಸಿದಾಗ ೬೧೦೩ ಅವಿಷ್ಕಾರಗಳು ಅಮೆರಿಕೆಯಲ್ಲಿ ನಡೆದಿವೆ. ಜಗತ್ತಿನ ೫೦ ಶ್ರೀಮಂತರಲ್ಲಿ ೨೦ ಜನ ಅಮೆರಿಕನ್ನರುˌ ೫ ಜನ ಇಂಗ್ಲೆಂಡಿಗರುˌˌ ೩ ಜನ ಚೀನಿಯರುˌ ಇಬ್ಬರು ಮೆಕ್ಸಿಕೊದವರುˌ ಇಬ್ಬರು ಭಾರತೀಯರು ಮತ್ತು ಒಬ್ಬ ಅರಬ್ ರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ.

ಜನಹಿತ ಕಾರ್ಯಗಳುˌ ಪರೋಪಕಾರ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ಕೂಡ ಹಿಂದೂಗಳು ಮತ್ತು ಮುಸಲ್ಮಾನರು ಕ್ರೈಸ್ತರಿಗಿಂತ ಹಿಂದಿದ್ದಾರೆ. ೧೮೬೫ ರಲ್ಲಿ ಸ್ಥಾಪಿಸಲಾದ ರೆಡ್-ಕ್ರಾಸ್ ಸಂಸ್ಥೆಯು ಜಗತ್ತಿನಲ್ಲಿ ತನ್ನ ಸೇವಾ ಕಾರ್ಯಗಳಿಗಾಗಿ ಪ್ರಸಿದ್ಧವಾಗಿದೆ. ಮೊದಲಿಗೆ ಯುದ್ಧ ಕಾಲದಲ್ಲಿ ಗಾಯಗೊಂಡ ಸೈನಿಕರಿಗೆ ಸಹಾಯ ಮಾಡಲು ಸ್ಥಾಪನೆಗೊಂಡ ಈ ಸಂಸ್ಥೆಯು ಕಾಲಾನಂತರದಲ್ಲಿ ಇನ್ನಿತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಹಿಂದೂ ಮತ್ತು ಮುಸ್ಲಿಮ್ ಜಗತ್ತಿನ ದೇಶಗಳು ಈ ರೀತಿಯ ಅಂತರಾಷ್ಟ್ರೀಯ ಮಟ್ಟದ ಸಹಾಯಾರ್ಥ ಸಂಸ್ಥೆಗಳು ಹೊಂದಿಲ್ಲವೆಂದೇ ಹೇಳಬೇಕು.
ಬಿಲ್ ಗೇಟ್ಸ್ ಎಂಬ ಪಾಶ್ಟಿಮಾತ್ಯ ಉದ್ಯಮಿ ೧೦ ಬಿಲಿಯನ್ ಡಾಲರ್ ಹಣ ತೊಡಗಿಸಿ ಬಿಲ್-ಮಿಲಿಂಡಾ ಗೇಟ್ಸ್ ಫಂಡೇಷನ್ ಸ್ಥಾಪಿಸಿ ಅದರ ಮೂಲಕ ಜಗತ್ತಿನ ೮ ಕೋಟಿ ಮಕ್ಕಳಿಗೆ ವಿವಿಧ ಕಾರಣಗಳಿಗಾಗಿ ಸಹಾಯ ಹಸ್ತ ಚಾಚುತ್ತಿದ್ದಾನೆ. ನಮ್ಮಲ್ಲಿ ಕೆಲವು ಉದ್ಯಮಿಗಳು ತಮ್ಮ ಕುಲಬಾಂಭವರ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ. ಮುಕೇಶ್ ಅಂಬಾನಿಯಂತ ಕೋಟ್ಯಾಧಿಪತಿಗಳು ೪೦೦೦ ಕೋಟಿ ವೆಚ್ಚದಲ್ಲಿ ತಮ್ಮ ಐಷಾರಾಮಿ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಅರಬ್ ರಾಜ ಶಹಜಾದಾ ತನ್ನ ವಿಶೇಷ ಹಡಗಿಗಾಗಿ ೫೦೦ ಕೋಟಿ ವೆಚ್ಚ ಮಾಡಿದರೆ ಭಾರತದ ಪ್ರಧಾನಿ ಮೋದಿ ಕೋಟ್ಯಾಂತರ ವೆಚ್ಚದಲ್ಲಿ ಎರಡು ಐಷಾರಾಮಿ ವಿಮಾನಗಳನ್ನು ಖರಿದಿಸಿದ್ದಾರೆ.
ಜಗತ್ತಿನಲ್ಲಿಯೇ ಅತ್ಯಂತ ಬಡತನ ಅನುಭವಿಸುವ ಹಿಂದೂಗಳು ವಾಸಿಸುವ ಭಾರತದಲ್ಲಿ ಬಿಜೆಪಿಯಂತ ಶ್ರೀಮಂತ ರಾಜಕೀಯ ಪಕ್ಷಗಳು ಸೆವೆನ್ ಸ್ಟಾರ್ ಸೌಲಭ್ಯವುಳ್ಳ ಪಕ್ಷದ ಕಚೇರಿಗಳನ್ನು ಹೊಂದಿವೆ. ಎಲ್ಲ ಪಕ್ಷಕ್ಕೆ ಸೇರಿದ ರಾಜಕಾರಣಿಗಳ ಆಸ್ತಿ ಕೇವಲ ಕೆಲವೇ ದಿನಗಳಲ್ಲಿ ಬಹುಗುಣವಾಗುವ ಭಾರತದಲ್ಲಿ ಬಡವ ಬಡವನಾಗಿಯೇ ಸಾಯುತ್ತಾನೆ. ಒಲಿಂಪಿಕ್ ಕ್ರೀಡೆಗಳಲ್ಲೂ ಕೂಡ ಅಮೆರಿಕ ಮುಂತಾದ ಪಾಶ್ಟಾತ್ಯ ದೇಶಗಳು ಅತ್ಯಂತ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದರೆ ಹಿಂದೂಗಳ ಭಾರತ ಮತ್ತು ಮುಸ್ಲಿಮ್ ರಾಷ್ಟ್ರಗಳು ಕ್ರೀಡಾ ಸಾಧನೆಯಲ್ಲೂ ಹಿಂದೆ ಇವೆ.
ಹಿಂದೂ ಮತ್ತು ಮುಸಲ್ಮಾನರು ತಮ್ಮ ಧರ್ಮಗಳ ಬಗ್ಗೆ ಒಣ ಹೆಮ್ಮೆ ಪಡುತ್ತಾ ಸ್ಪಾರ್ಥಿಗಳಂತೆ ಬದುಕುತ್ತಾರೆ. ಆಂತರಿಕ ಕಿತ್ತಾಟಗಳಲ್ಲಿ ಹಿಂದೂ ಮುಸಲ್ಮಾನರದ್ದು ಎತ್ತಿದ ಕೈ. ಮಾನಸಿಕಮಾಗಿ ಮತ್ತು ಎಲ್ಲ ರಂಗಗಳಲ್ಲಿ ಹಿಂದೂ ಮತ್ತು ಮುಸಲ್ಮಾನರು ಇಂದಿಗೂ ಹಿಂದುಳಿದದ್ದು ಕಂಗಾಲು ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಜೈ ಶ್ರೀರಾಮ್! ಅಲ್ಲಾ ಹೋ ಅಕ್ಬರ್ ಮುಂತಾದ ಧಾರ್ಮಿಕ ಉನ್ಮಾದ ಕೆರಳಿಸುವ ಘೋಷಣೆ ಕೂಗುವಲ್ಲಿ ಹಿಂದೂ ಮತ್ತು ಮುಸಲ್ಮಾನರು ಜಗತ್ತಿನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಕುರಿತು ಈಗ ಚಿಂತಿಸಬೇಕಿದೆ. ಸದಾ ಧಾರ್ಮಿಕ ಮತ್ತು ಭಾವನಾತ್ಮಕ ವಿಷಗಳ ಸುತ್ತ ಗಿರಕಿಹೊಡೆಯುವ ಹಿಂದೂಗಳು ಮತ್ತು ಮುಸ್ಲಿಮರು ಜಾಗತಿಕವಾಗಿ ತಾವೂ ಕೂಡ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ದಿಸೆಯಲ್ಲಿ ಯೋಚಿಸಬೇಕು ಹಾಗು ಈ ಹಿಂದೂ-ಮುಸ್ಲಿಮ್ ಕೆಸರೆರಚಾಟ ನಿಲ್ಲಿಸಬೇಕಿದೆ.