
ರಾಹುಲ್ ಗಾಂಧಿ ಪತ್ರ ಬರೆದು ಸಿಇಸಿ ಆಯುಕ್ತರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ರಾಹುಲ್ ಗಾಂಧಿಯ ಚುನಾವಣಾ ಆಯುಕ್ತರ ನೇಮಕದ ತಗಾದೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೌಂಟರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಚುನಾವಣಾ ಆಯೋಗಗಳನ್ನು ಹೇಗೆ ನೇಮಿಸಲಾಯಿತು ಎಂಬುದನ್ನು ರಾಹುಲ್ ಗಾಂಧಿ ಮರೆತಿದ್ದಾರೆಯೇ..? ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಸರ್ಕಾರಗಳು ಆಯ್ಕೆ ಕಾರ್ಯ ವಿಧಾನವನ್ನು ಸುಧಾರಿಸಲು ಏಕೆ ಏನನ್ನೂ ಮಾಡಲಿಲ್ಲ..? ಅಂತ ಎಕ್ಸ್‌ನಲ್ಲಿ ಧರ್ಮೇಂದ್ರ ಪ್ರಧಾನ್ ಪ್ರಶ್ನಿಸಿದ್ದಾರೆ..
ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗ್ತಿರೋ ಜ್ಞಾನೇಶ್ಕುಮಾರ್ ಯಾರು..? ಇವರ ನೇಮಕಕ್ಕೆ ರಾಹುಲ್ಗಾಂಧಿ ವಿರೋಧ ಮಾಡ್ತಿರೋದು ಯಾಕೆ ಅನ್ನೋದನ್ನು ನೋಡೋದಾರೆ, ಜ್ಞಾನೇಶ್ ಕುಮಾರ್ 1988ರ ಬ್ಯಾಚ್‌ನ ಕೇರಳ ಕೇಡರ್‌ನ ನಿವೃತ್ತ IAS ಅಧಿಕಾರಿ. ಕಳೆದ ವರ್ಷ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ರು. 2023ರಲ್ಲಿ ಸಹಕಾರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಕೊಟ್ಟಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದತಿಯಲ್ಲಿ ಪಾತ್ರಧಾರಿ ಜ್ಞಾನೇಶ್ ಕುಮಾರ್. ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಆರ್ಟಿಕಲ್ 370 ರದ್ದತಿ ತೀರ್ಮಾನದಲ್ಲಿ ಮಹತ್ವದ ಪಾತ್ರ ಎನ್ನಲಾಗ್ತಿದೆ.

2007 ರಿಂದ 2012 ರವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನೆ ವಿಭಾಗದ ಜಂಟಿ ಕಾರ್ಯದರ್ಶಿಯಾಗಿಯೂ ಜ್ಞಾನೇಶ್ ಕುಮಾರ್ ಸೇವೆ ಸಲ್ಲಿಸಿದ್ದಾರೆ. ಈಗಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತಿಯಾಗಿದ್ದು, ಜ್ಞಾನೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ನಡುವೆ ವಿವಾದ ಸೃಷ್ಟಿಯಾಗಿದ್ದು, ಸುಪ್ರೀಂಕೋರ್ಟ್ ಆದೇಶ ಏನೂ ಅನ್ನೋದು ಕುತೂಹಲ ಕೆರಳಿಸಿದೆ.