ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧ ವಕೀಲ ದೇವರಾಜೇಗೌಡ(Devaraje Gowda) ನೇರವಾಗಿ ವಾಗ್ದಾಳಿ ಮಾಡಿದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ(HD Revanna) ಫ್ಯಾಮಿಲಿ ವಿರುದ್ಧ ಸಮರ ಸಾರಿರುವ ವಕೀಲ ದೇವರಾಜೇಗೌಡ, ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮೇಲೆ ಯುದ್ಧ ಮಾಡಬೇಕು. ನೀನು ಸ್ಟೇಟ್ ಮೆಂಟ್ ಮಾಡು ಅಂತಾ ಹೇಳಿಕೊಟ್ಟು ಒಬ್ಬರು ಮಹಿಳೆಯಿಂದ ಪ್ರೆಸ್ಮೀಟ್(Press meet) ಮಾಡಿಸಿದ್ದೀರಾ ರೇವಣ್ಣ..? ನಿನಗೆ ನೇರವಾಗಿ ಚಾಲೆಂಜ್(Challange) ಮಾಡ್ತೇನೆ. ಇಲ್ಲಿಯವರೆಗೂ ನಿಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿರಲಿಲ್ಲ. ಆದರೆ ನಿಮಗೆ ತಾಕತ್ ಇದ್ರೆ, ನೀನು ಗಂಡಸಾಗಿದ್ರೆ ನನ್ನ ಎದುರುಗಡೆ ಬಾ. ನಿನ್ನ ಅಕ್ರಮ ಚಟುವಟಿಕೆ ಎಲ್ಲವುಗಳ ದಾಖಲೆ ತೆಗೆದುಕೊಂಡು ಬರ್ತೇನೆ ಎಂದು ದೇವರಾಜೇಗೌಡ ಸವಾಲು ಎಡಸೆದಿದ್ದಾರೆ.
ನಿನ್ನ ಹಾಗೂ ನಿನ್ನ ಕುಟುಂಬದ ರಾಸಲೀಲೆಗಳು ನನ್ನ ಹತ್ರ ಇವೆ ಎಂದಿರುವ ದೇವರಾಜೇಗೌಡ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೇಲಿರೋ ಗೌರವ ಹಾಗು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೇಲಿರೋ ಅಭಿಮಾನದಿಂದ ಇಲ್ಲೀವರೆಗೂ ಬಿಡುಗಡೆ ಮಾಡಲಿಲ್ಲ. ನೀನು ನಮ್ಮ ನಾಯಕರಿಗೆ ವೇದಿಕೆ ಮೇಲೆ ನಿಂತು ಡರ್ಟಿಫೆಲೋ ಅಂತಾ ಕರೆದೆಯಲ್ಲ, ಡರ್ಟಿ ಫೆಲೋ ಅಂದ್ರೆ ಅರ್ಥ ಏನು..? ಲಜ್ಜೆಗೆಟ್ಟವನು ಅಂತಾ. ನಿನ್ನ ಮಗ ಯಾಕೆ ಹೋಗಿ ಕೋರ್ಟ್ನಲ್ಲಿ ಸ್ಟೇ ತೆಗೆದುಕೊಂಡು ಬಂದಿದ್ದಾನೆ. ರಾಜ್ಯದಲ್ಲಿರೋ ಪ್ರತಿಯೊಂದು ಮಾಧ್ಯಮದ ಮೇಲೆ, ರಾಷ್ಟ್ರೀಯ ಮಾಧ್ಯಮಗಳು ಹಾಗು ಸೋಶಿಯಲ್ ಮೀಡಿಯಾಗಳು, ಟ್ವಿಟರ್, ಫೇಸ್ಬುಕ್ಗಳಲ್ಲಿ ನನ್ನ ಅಶ್ಲೀಲ ಚಿತ್ರಗಳನ್ನ ಬಿಡುಗಡೆ ಮಾಡಬಾರದು ಅಂತೇಳಿ ತಡೆಯಾಜ್ಞೆ ತಂದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾನು ಲಜ್ಜೆಗೆಟ್ಟವನೋ ನೀನು ಲಜ್ಜೆಗೆಟ್ಟವನೋ ನೋಡೋಣ. ತಾಕತ್ ಇದ್ಯಾ ನಿಮಗೆ, ಬನ್ನಿ ನೋಡೋಣ. ಹಾಸನದ ಎನ್ ಆರ್ ಸರ್ಕಲ್ನಲ್ಲಿ ದೊಡ್ಡ ಡಿಸ್ಪ್ಲೇ ಬೋರ್ಡ್ ಹಾಕಿಸುತ್ತೇನೆ. ವಿಡಿಯೋ ಪ್ಲೇ ಮಾಡಿಸ್ತೇನೆ. ಕೇಸ್ ವೆಕೆಟ್ ಆದ ಕೂಡಲೇ ಈ ಕೆಲಸ ಮಾಡಿಸ್ತೇನೆ. ಯಾರ ಬಗ್ಗೆ ಮಾತನಾಡ್ತಾ ಇದ್ದೀಯಾ ನೀನು..? ಗೌರವದಿಂದ ಬದುಕಿದ್ರೆ ಸರಿ ರೇವಣ್ಣ, ಗೌರವ ಬಿಟ್ಟು ಈ ಮೀರ್ ಸಾದಿಕ್ ಕೆಲಸ ಮಾಡಿದ್ರೆ ಪರಿಣಾಮ ಬೇರೆ ಆಗುತ್ತದೆ. ಇದು ನಿನಗೆ ನನ್ನ ಕೊನೆಯ ಎಚ್ಚರಿಕೆಯ ಸಂದೇಶ ಎಂದು ವಕೀಲ ದೇವರಾಜೇಗೌಡ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದರೆ ರೇವಣ್ಣ ಕುಟುಂಬದ ಯಾವುದೋ ಒಂದು ರಾಸಲೀಲೆ ವಿಡಿಯೋ ವಕೀಲರ ಬಳಿ ಸೇರಿಕೊಂಡಿದೆ ಎನ್ನುವುದು ಖಚಿತವಾಗಿದೆ. ಇಂದಲ್ಲ ನಾಳೆ ಹೊರಬಹುದು ಬಹುತೇಕ ನಿಚ್ಛಳ.
ಲೋಕಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬೇಡ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆಧಿಕಾರದ ಅಮಲು ನೆತ್ತಿಗೇರಿದೆ ಎನ್ನುವ ಜೊತೆಗೆ ಈ ಬಾರಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಟ್ಟರೆ ಸೋಲು ಗ್ಯಾರಂಟಿ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧ ಹಲ್ಲೆ ಮಾಡಿದ ಆರೋಪವೊಂದು ಕೇಳಿ ಬಂದಿದೆ. ಇದೀಗ ದೇವರಾಜೇಗೌಡರು ಸಿಡಿಸಿರುವ ಬಾಂಬ್ ಎಲ್ಲಿ ಸಿಡಿಯುತ್ತದೆ ಎಂದು ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಆ ರಾಸಲೀಲೆ ಕೇಸ್ ಯಾರದ್ದು..? ಪ್ರಜ್ವಲ್ಗೆ ಸೇರಿದ್ದಾ..? ಅಥವಾ ರೇವಣ್ಣನದ್ದೇ ಪುರಾಣವಾ..? ಎನ್ನುವುದನ್ನು ಕಾದು ನೋಡಬೇಕಿದೆ.