ಕರ್ನಾಟಕ ಪೊಲೀಸರು ಕುಖ್ಯಾತ ಹ್ಯಾಕರ್ ಶ್ರೀನಿವಾಸ್ ಆಲಿಯಾಸ್ ಶ್ರೀಕಿ ಅವರ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳದ ಸುಪರ್ದಿಗೆ ವಹಿಸಲು ಮನಪೂರ್ವ ವಿಳಂಬ ಮಾಡಿದ್ದಾರೆ ಎಂದು ತೋರುತ್ತಿದೆ. 2006 ರಲ್ಲಿ ನಡೆದ ಬಿಟ್ಫಿನೆಕ್ಸ್ ಕ್ರಿಪ್ಟೋ ಕರೆನ್ಸಿ ವಿನಿಮಯ ಹ್ಯಾಕ್ ನಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಶ್ರೀಕಿಯನ್ನು ಡಿಸೆಂಬರ್ 2020 ರಲ್ಲಿ ಬಂಧಿಸಲಾಯಿತ್ತು. ಆತನ ಬಿಟ್ಫಿನೆಕ್ಸ್ ಹ್ಯಾಕ್ ನ ತಪ್ಪೊಪ್ಪಿಗೆಯೊಂದಿಗೆ ಚಾರ್ಜ್ ಶೀಟ್ ಅನ್ನು ಫೆಬ್ರವರಿ 2021 ರಲ್ಲಿ ದಾಖಲಿಸಲಾಯಿತು. ಈ ಪ್ರಕರಣವನ್ನು ಆ ಸಮಯದಲ್ಲಿ ಅತಿದೊಡ್ಡ ಕ್ರಿಪ್ಟೋಕರೆನ್ಸಿ ದರೋಡೆ ಎಂದು ಪರಿಗಣಿಸಲಾಗಿತ್ತು. ಆದರೆ ಬಸವರಾಜ್ ಬೊಮ್ಮಾಯಿ ಆಡಳಿತವು ಸಿಬಿಐನ ಇಂಟರ್ ಪೋಲ್ ವಿಭಾಗಕ್ಕೆ ಮಾಹಿತಿ ನೀಡಿದ್ದು ಏಪ್ರಿಲ್ 24,2021 ರಂದು. ಗಂಭೀರ ಪ್ರಕರಣ ಎಂದು ಪರಿಗಣಿಸಿದ ಮೇಲೂ ಫೆಬ್ರವರಿಯಲ್ಲಿ ಫೈಲ್ ಮಾಡಿದ ಕೇಸಿನ ಮಾಹಿತಿ ರವಾನೆ ಮಾಡಲು ಎರಡು ತಿಂಗಳ ಕಾಲ ವಿಳಂಬ ಮಾಡಿದ್ದು ಯಾಕೆ? ಇದು ಸಂಶಯ ಮೂಡಲು ಕಾರಣವಾಗಿದೆ.
ಅಲ್ಲದೆ ಅಂತರಾರಾಷ್ಟ್ರೀಯ ಏಜೆನ್ಸಿಗಳು ಮತ್ತು ಬ್ಲಾಕ್ ಚೈನ್ ವಿಶ್ಲೇಷಣಾ ಸಂಸ್ಥೆಗಳು ದೀರ್ಘಕಾಲದಿಂದ ಸುಪ್ತವಾಗಿದ್ದ, ಬ್ಲಾಕ್ ಲಿಸ್ಟಿಗೆ ಸೇರಿಸಿದ್ದ ಬಿಟ್ ಕಾಯಿನ್ ಗಳು ಕೋಲ್ಡ್ ವ್ಯಾಲೆಟ್ ಗಳಿಂದ ಹೊಸದಾಗಿ ರಚಿಸಿದ ವ್ಯಾಲೆಟ್ ಗಳಿಗೆ ವರ್ಗಾಯಿಸುವುದನ್ನು ಟ್ರ್ಯಾಕ್ ಮಾಡಿದ ಎರಡು ವಾರಗಳ ನಂತರ ಸಿಬಿಐನ ಇಂಟರ್ ಪೋಲ್ ಗೆ ಮಾಹಿತಿ ನೀಡಲಾಯಿತು ಎನ್ನಲಾಗಿದೆ. ಬಿಟ್ ಫಿನೆಕ್ಸ್ ಅನ್ನು 2015 ಮತ್ತು 2016 ರಲ್ಲಿ ಎರಡು ಬಾರಿ ಹ್ಯಾಕ್ ಮಾಡಲಾಗಿತ್ತು. ಎರಡೂ ಬಾರಿಯೂ ಶ್ರೀಕಿ ಪಾಲ್ಗೊಂಡಿದ್ದ. ಬೆಂಗಳೂರು ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ, ಶ್ರೀಕಿ ಬಿಟ್ ಫಿನೆಕ್ಸ್ ಅನ್ನು ಎರಡು ಬಾರಿ ಹ್ಯಾಕ್ ಮಾಡಿದ ಮೊದಲ ವ್ಯಕ್ತಿ ಎನ್ನಲಾಗಿದೆ.
ಶ್ರೀಕಿ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಿರುವ ಹೇಳಿಕೆಯ ಪ್ರಕಾರ “2016 ನಡೆಸಿದ ಹ್ಯಾಕ್ ಒಂದು ಸರಳ ಸ್ಪಿಯರ್ ಫಿಶಿಂಗ್ ದಾಳಿಯಾಗಿದ್ದು, ಇಬ್ಬರು ಇಸ್ರೇಲಿ ಹ್ಯಾಕರ್ ಗಳನ್ನು ಮುಂದಿರಿಸಿಕೊಂಡು ನಡೆಸಲಾಗಿತ್ತು. ಸೈನ್ಯಕ್ಕಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಬಿಟ್ಫಿನೆಕ್ಸ್ ಉದ್ಯೋಗಿಗಳನ್ನು ಗುರಿಯಾಗಿಸಿತ್ತು. ಅದರಲ್ಲಿ ಒಬ್ಬ ಉದ್ಯೋಗಿ ನಕಲಿ ಇಮೇಲ್ಗೆ ಉತ್ತರಿಸಿದ ಕಾರಣ ಅವನ ಕಂಪ್ಯೂಟರ್ ಗಳಿಗೆ ಪ್ರವೇಶಪಡೆಯಲು ಕಾರಣವಾಯಿತು” ಎಂದಿದ್ದಾರೆ.
2019 ರಲ್ಲಿ ಇಬ್ಬರು ಇಸ್ರೇಲಿ ಸಹೋದರರಾದ ಎಲಿ ಗಿಗಿ ಮತ್ತು ಅಸ್ಸಾಫ್ ಗಿಗಿ ಅವರನ್ನು ಬಿಟ್ಫಿನೆಕ್ಸ್ ಹ್ಯಾಕ್ ನಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಯಿತು. ವರದಿಗಳ ಪ್ರಕಾರ, ಎಲಿ ಬಂಧನಕ್ಕೆ ಮೊದಲು ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ಸೀವೆಯಲ್ಲಿದ್ದರಂತೆ. ತೀವ್ರ ವಿಚಾರಣೆಯ ಬಳಿಕವೂ ಅಧಿಕಾರಿಗಳು ಅವರಿಂದ ಎಲ್ಲಾ 1.19 ಲಕ್ಷ ಬಿಟ್ ಕಾಯಿನ್ ಗಳನ್ನು ಮರಳಿ ಪಡೆಯುವಲ್ಲಿ ವಿಫಲರಾದರು ಮತ್ತು ಹ್ಯಾಕ್ ನಲ್ಲಿ ಇತರರ ಪಾತ್ರವಿರಬಹುದು ಎಂದು ಶಂಕಿಸಿದರು.
ಬಿಟ್ ಫಿನೆಕ್ಸ್ ಹ್ಯಾಕ್ ಅನ್ನು ಕಾರ್ಯಗತಗೊಳಿಸಿದ ರೀತಿ ಮತ್ತು ಕದ್ದಿದ್ದ ಬಿಟ್ ಕಾಯಿನ್ ಗಳನ್ನು ತನ್ನ ವಿಳಾಸಕ್ಕೆ ಹೇಗೆ ರೂಟ್ ಮಾಡಿದನು ಎಂಬುದನ್ನು ಶ್ರೀಕಿ ವಿವರವಾಗಿ ವಿವರಿಸಿದ್ದಾನೆ. 1.19 ಲಕ್ಷ ಬಿಟ್ ಕಾಯಿನ್ ಗಳನ್ನು ಒಮ್ಮೆಲೆ ಕದ್ದಿದ್ದರಿಂದ ಬಿಟ್ ಫಿನೆಕ್ಸ್ ಹ್ಯಾಕ್ ಅಂತರರಾಷ್ಟ್ರೀಯ ಅಧಿಕಾರಿಗಳನ್ನು ಎಚ್ಚರಿಸಿತ್ತು. ತಕ್ಷಣವೇ ಎಲ್ಲಾ ನಾಣ್ಯಗಳನ್ನು ಬ್ಲಾಕ್ ಲಿಸ್ಟಿಗೆ ಸೇರಿಸಿತು. ಹ್ಯಾಕರ್ ಗಳು ಅವುಗಳಲ್ಲಿ ಹೆಚ್ಚಿನವುಗಳನ್ನು ಕೋಲ್ಡ್ ವ್ಯಾಲೆಟ್ ಗಳಲ್ಲಿ ಸಂಗ್ರಹಿಸುವಂತೆ ಒತ್ತಾಯಿಸಲಾಯಿತು, ಆದರೆ ಐದು ವರ್ಷಗಳಲ್ಲಿ ಸ್ವಲ್ಪ ಪ್ರಮಾಣದ ನಾಣ್ಯಗಳನ್ನು ಹ್ಯಾಕರ್ಬಗಳು ಸ್ಥಳಾಂತರಿಸಿದರು.
2020 ರಲ್ಲಿ ಬಿಟ್ ಫಿನೆಕ್ಸ್ ಕೂಡ ಹ್ಯಾಕರ್ ಗಳ ಬಗ್ಗೆ ಮಾಹಿತಿಗಾಗಿ 400 ಡಾಲರ್ ಮಿಲಿಯನ್ ಬಹುಮಾನವನ್ನು ಘೋಷಿಸಿತ್ತು ಈ ಬಹುಮಾನದ ಮೊತ್ತವು ಹ್ಯಾಕ್ ಮಾದಲ್ಪಟ್ಟಿದ್ದ 1.19 ಲಕ್ಷ ಬಿಟ್ ಕಾಯಿನ್ ಗಳ ನಿವ್ವಳ ಮೌಲ್ಯದ ಶೇಕಡಾ 30 ಕ್ಕೆ ಸಮನಾಗಿದೆ.
ಏಪ್ರಿಲ್ 14, 2021 ರಂದು ಕದ್ದ ಬಿಟ್ ಕಾಯಿನ್ ಗಳು ಐದು ವರ್ಷಗಳಲ್ಲಿ ಮೊದಲ ಬಾರಿಗೆ ಚಲಿಸಲು ಪ್ರಾರಂಭಿಸಿದವು ಮತ್ತು 750 ಮಿಲಿಯನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಸಕ್ರಿಯಗೊಂಡವು. ಇದರ ಮೌಲ್ಯ ರೂ 5,580 ಕೋಟಿಗಿಂತ ಹೆಚ್ಚಾಗಿದೆ. ಬಿಟ್ ಕಾಯಿನ್ ಗಳು ಪ್ರತಿ ನಾಣ್ಯಕ್ಕೆ ಸುಮಾರು 65,000 ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸ್ವಲ್ಪ ಸಮಯದ ನಂತರ 11,000 ಕ್ಕೂ ಹೆಚ್ಚು ಬಿಟ್ ಕಾಯಿನ್ ಗಳನ್ನು ಒಳಗೊಂಡ 30 ಕ್ಕೂ ಹೆಚ್ಚು ವಹಿವಾಟುಗಳು ನಡೆದವು. ಅನೇಕ ವಹಿವಾಟುಗಳು ಹೊಸದಾಗಿ ರಚಿಸಿದ ವ್ಯಾಲೆಟ್ ಗಳಲ್ಲಿ ನಡೆದಿತ್ತು
ಡಿಸೆಂಬರ್ 2020ರಲ್ಲಿ ಶ್ರೀಕಿ ಬಂಧನದಿಂದ 2121ರ ಫೆಬ್ರವರಿಯಲ್ಲಿ ಅವರ ವಿರುದ್ಧ ದಾಖಲಾದ ಮೊದಲ ಚಾರ್ಜ್ ಶೀಟ್ ವರೆಗೆ ಪ್ರಾರಂಭವಾದ ಘಟನೆಗಳ ಕಾಲಾನುಕ್ರಮಣಿಕೆಯು ಸಿಬಿಐ ಇಂಟರ್ ಪೋಲ್ ಎಚ್ಚರಿಸುವ ಮೊದಲೇ ಬಿಟ್ಫಿನೆಕ್ಸ್ ಹ್ಯಾಕ್ ನಲ್ಲಿ ಅವರ ಪಾತ್ರದ ಬಗ್ಗೆ ತನಿಖಾಧಿಕಾರಿಗಳಿಗೆ ತಿಳಿದಿತ್ತು ಎಂದು ಸೂಚಿಸುತ್ತದೆ.
ಸಿಬಿಐ ಇಂಟರ್ ಪೋಲ್ ಅನ್ನು ಎಚ್ಚರಿಸಲು ವಿಳಂಬಕ್ಕೆ ಕಾರಣಗಳನ್ನು ಕಂಡುಹಿಡಿಯಲು ಡಿಎಚ್ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರು ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ.