ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ..ಸಂಪೂರ್ಣ ಹಳ್ಳ ಹಿಡಿದಿದೆ..ಗೃಹ ಸಚಿವರು (Home minister) ತಮ್ಮ ಖಾತೆ ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ ಎಂಬ ವಿಪಕ್ಷಗಳ ಆರೋಪ ಟೀಕೆಗಳ ನಡುವೆ, ಪರಮೇಶ್ವರ್ (Parameshwar) ಅವರು ತಮ್ಮ ಖಾತೆ ಬದಲಾವಣೆಗೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದರು ಎಂಬ ಚರ್ಚೆ ಜೋರಾಗಿತ್ತು.

ಆದ್ರೆ ಈಗ ಈ ಬಗ್ಗೆ ಸ್ವತಃ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು,ನಾನು ಗೃಹ ಖಾತೆ ಬದಲಾವಣೆಗೆ ಕೇಳಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಗೃಹ ಖಾತೆ ಬದಲಾವಣೆಗೆ ಒತ್ತಾಯ ಮಾಡಿದ ವಿಚಾರವಾಗಿ, ನಾನು ಖಾತೆ ಬದಲಾವಣೆಗೆ ಕೇಳಿದ್ದೇನೆ ಅಂತ ಯಾರು ಹೇಳಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಯಾವ ಸೋರ್ಸ್ ಆಧಾರದ ಮೇಲೆ ಸುದ್ದಿಯಾಗಿದೆ. ನನ್ನ ನೇರವಾಗಿ ಕೇಳಬೇಕಿತ್ತಲ್ಲ. ಅದು ಬಿಟ್ಟು ಸಿಎಂ ಬಳಿ ಖಾತೆ ಬದಲಾವಣೆಗೆ ಕೇಳಿದ್ದಾರೆ. ನಮ್ಮ ಬೆಂಬಲಿಗರು ಇರ್ತಾರೆ, ಬೇರೆ ಮೆಸೇಜ್ ಹೋಗುತ್ತೆ. ಕಾಲ್ತುಲಿತ ಪ್ರಕರಣ ನಮಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ನಾವು ಖಾತೆ ಬದಲಾವಣೆ ಕೇಳುವುದು ಸರಿಯಲ್ಲ. ಈ ಸಂದರ್ಭ ನಾವು ಗಟ್ಟಿಯಾಗಿ ಎದುರಿಸಬೇಕು ನಾನು ಖಾತೆ ಬದಲಾವಣೆಗೆ ಕೇಳಿದ್ದೇನೆ ಅನ್ನುವುದು ಫೇಕ್ ಸುದ್ದಿ ಎಂದು ಹೇಳಿದ್ರು.