
ಬೆಂಗಳೂರು: ಸಿದ್ದರಾಮಯ್ಯ ಮೇಲೆ ಯಾವ ಆರೋಪವೂ ಇಲ್ಲ. ಶಾಸಕರು ಅವರ ಪರ ಇದ್ದಾರೆ. ಅವರನ್ನು ಬದಲಾಯಿಸುವ ಅಗತ್ಯ ಇಲ್ಲ. ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎನ್ನುವುದು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದರ ಬಗ್ಗೆ ಬೇರೆಯವರು ಅಭಿಪ್ರಾಯ ಹೇಳಿದರೆ ಚೆನ್ನಾಗಿರಲ್ಲ. ವೈಯಕ್ತಿಕವಾಗಿ ಇನ್ನೂ ಎರಡೂವರೆ ವರ್ಷ ನನ್ನ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಭರವಸೆ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ಪಕ್ಷದ ವಿಚಾರಗಳನ್ನ ಸಾರ್ವಜನಿಕರವಾಗಿ ಚರ್ಚಿಸಲು ಸಾಧ್ಯವಿಲ್ಲ. ಯಾರೇ ಏನೇ ಮಾತನಾಡಿದರು ಅದನ್ನ ನಾನು ಮಾತಾಡಲ್ಲ. ಸಿಎಂ ಆಗಲಿ ಬೇರೆಯವರಾಗಲಿ ಸಿಎಂ ಸ್ಥಾನದ ಹಂಚಿಕೆ ಬಗ್ಗೆ ಯಾರು ನನ್ನ ಬಳಿ ಮಾತಾಡಿಲ್ಲ.
https://www.youtube.com/post/UgkxZlYFw0oB9G_eVKp8atUdnn0mQJao0_QF
ಬೇರೆಯವರು ಸಿಎಂ ಸ್ಥಾನ ಬೇಕು ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಪಕ್ಷದಲ್ಲಿ ಎಲ್ಲರೂ ಕೂಡ ಹೈಕಮಾಂಡ್ ಮಾತಿಗೆ ಬದ್ಧತೆಯಾಗಿ ನಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಬದಲಾವಣೆ ಅಗತ್ಯವಿಲ್ಲ. ಅನಗತ್ಯವಾಗಿ ಬದಲಾವಣೆ ಕೂಗು ಬರಬಾರದಿತ್ತು.ಆದರೂ ಬಂದಿದೆ. ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಡಿಕೆಶಿ ಪೋಸ್ಟ್ ಬಗ್ಗೆ ಮಾತನಾಡಿದ ಯತೀಂದ್ರ, ಹೈಕಮಾಂಡ್ ನವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ. ಅವರು ಯಾವ ಅರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ ಗೊತ್ತಿಲ್ಲ. ಹಾಗೆ ಯಾರಿಗೆ ಎಷ್ಟು ಶಾಸಕರು ಬೆಂಬಲ ಇದೆ ಅನ್ನೋದನ್ನ ಸಾರ್ವಜನಿಕವಾಗಿ ಹೇಳುವುದಕ್ಕೂ ಆಗಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಎಂದಿದ್ದಾರೆ.













