~ಡಾ. ಜೆ ಎಸ್ ಪಾಟೀಲ.
ಡಾ. ಮನಮೋಹನ್ ಸಿಂಗ್ ಅವರಂತಹ ವಿಶ್ವವಿಖ್ಯಾತ ಆರ್ಥಿಕ ತಜ್ಞರು ಸ್ಥಿರಗೊಳಿಸಿದ ದೇಶದ ಅರ್ಥ ವ್ಯವಸ್ಥೆಯನ್ನು ಮೋದಿ ಆಡಳಿತ ಸಂಘಿ ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ಶಿಫಾರಸ್ಸಿನಂತೆ ಪಾತಾಳಕ್ಕೆ ದೂಡಿದೆ. ಮೋದಿಯ ಆರ್ಥಿಕ ನೀತಿಯನ್ನು ನಿರ್ಧರಿಸುವವ ಆರ್ಥಿಕ ತಜ್ಞರೆ ಈ ಸರಕಾರದಲ್ಲಿ ಕಂಡುಬಂದಿಲ್ಲ. ಜನಸಾಮಾನ್ಯರ ಮೇಲೆ ಭಯಂಕರ ತೆರಿಗೆ ಹೇರಿದ್ದರಿಂದಲೆ ಮೋದಿ ಸರಕಾರ ಈಗಲೂ ಉಸಿರಾಡುತ್ತಿದೆ. ಸಚಿವೆ ನಿರ್ಮಲಾ ಇದುವರೆಗಿನ ಅತ್ಯಂತ ಕಳಪೆ ಅರ್ಥ ಸಚಿವೆ ಎಂದು ಈಗಾಗಲೆ ಕುಖ್ಯಾತಿ ಪಡೆದಾಗಿದೆ. ರೂಪಾಯಿ ಮೌಲ್ಯ ಇಂದಿಗೂ ನಿರಂತರ ಕುಸಿತ ಕಾಣುತ್ತಿದ್ದು ಹಣದುಬ್ಬರ ಹೆಚ್ಚುತ್ತಿದೆ.
ಅರ್ಥಶಾಸ್ತ್ರಜ್ಞನಲ್ಲದ ಹಾಗು ತನ್ನನ್ನು ಅರ್ಥ ಮಂತ್ರಿ ಮಾಡಲಿಲ್ಲವಲ್ಲ ಎಂಬ ಮತ್ಸರದಿಂದ ಮೋದಿ ಆಡಳಿತದ ಎರ್ರಾಬಿರ್ರಿ ಆರ್ಥಿಕ ನೀತಿಯನ್ನು ಸದಾ ಟೀಕಿಸುತ್ತಿರುವ ಸುಬ್ರಮಣ್ಯಂ ಸ್ವಾಮಿ ಎನ್ನುವ ಪಾಲಿಟಿಕಲ್ ಜೋಕರ್ ನ ಮಾತುಗಳು ಗಂಭೀರವಾಗಿ ಕಾಣಿಸದಿದ್ದರೂ ಈ ವಿಷಯದಲ್ಲಿ ಮಾತ್ರ ಸತ್ಯದಿಂದ ಕೂಡಿವೆ. ಸುಬ್ರಮಣ್ಯಮ್ ಸ್ವಾಮಿ ಗಂಭೀರ ಮನುಷ್ಯನಲ್ಲ ಹಾಗು ಆತನೊಬ್ಬ ರಾಜಕೀಯ ಕಿಡಿಗೇಡಿ ಎನ್ನುವುದು ನಿಜವಾಗಿದ್ದು ಆತ ತನ್ನದೆ ತಮಿಳುನಾಡಿನˌ ಹಾಗು ತನ್ನದೇ ಅಯ್ಯಂಗಾರಿ ಜಾತಿಗೆ ಸೇರಿರುವ ತನಗಿಂತ ಕಿರಿಯಳು ಹಾಗು ಆರ್ಥಿಕತೆಯ ಬಗ್ಗೆ ಶೂನ್ಯ ಜ್ಞಾನ ಹೊಂದಿರುವ ನಿರ್ಮಲಾಳನ್ನು ಅರ್ಥ ಸಚಿವೆ ಮಾಡಿದ್ದಕ್ಕೆ ಮತ್ಸರದಿಂದ ಮೋದಿ ಆಡಳಿತದ ಆರ್ಥಿಕತೆಯನ್ನು ವಸ್ತುನಿಷ್ಟವಾಗಿಯೆ ಟೀಕಿಸುತ್ತಿದ್ದಾನೆ.
ಸುಬ್ರಮಣ್ಯಮ್ ಸ್ವಾಮಿಯ ಉಡಾಫೆತನˌ ಗಂಭೀರವಲ್ಲದ ಮಾತುಗಳನ್ನು ನಾವು ಕಡೆಗಣಿಸಬಹುದುˌ ಆದರೆ ಆಶ್ಚರ್ಯದ ಸಂಗತಿ ಏನೆಂದರೆˌ ಸ್ವತಃ ಅರ್ಥ ಸಚಿವೆಯ ಪತಿ ಪರಕಾಲ ಪ್ರಭಾಕರ್ ಎನ್ನುವ ವ್ಯಕ್ತಿ ಮೋದಿ ಆಡಳಿತದ ವಿಕೃತ ಆರ್ಥಿಕ ನೀತಿಯನ್ನು ಆಗಾಗ ಟೀಕಿಸುತ್ತಿರುವುದು. ಈ ಪರಕಾಲ ಪ್ರಭಾಕರ್ ಮಾತ್ರ ತನ್ನ ಪತ್ನಿ ನಿರ್ಮಲಾ ಹಾಗು ಆಕೆಯ ಬಾಸ್ ಮೋದಿಜಿಯ ಮರ್ಯಾದೆ ತೆಗೆಯುವ ಹೇಳಿಕೆ ಆಗಾಗ ನೀಡಿತ್ತಿರುವುದರ ಹಿಂದಿನ ಗುಟ್ಟೇನು ಎನ್ನುವುದು ಇದುವರೆಗೆ ಯಾರಿಗೂ ಅರ್ಥವಾಗಿಲ್ಲ. ಯಾರಾದರೂ ತನ್ನ ವಿರುದ್ಧ ಮಾತನಾಡಿದರೆ ತಕ್ಷಣ ಸರಕಾರಿ ವ್ಯವಸ್ಥೆಯ ಮೂಲಕ ಅಂತವರ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗುವ ಮೋದಿಜಿˌ ನಿರ್ಮಲಾಳ ಪತಿ ಪರಕಾಲ ಪ್ರಭಾಕರ್ ಮೋದಿಯ ಆರ್ಥಿಕ ನೀತಿಯನ್ನು ಅನೇಕ ವೇಳೆ ಉಗ್ರವಾಗಿ ಟೀಕಿಸಿದರೂ ನಿರ್ಮಲಾಳನ್ನು ಅರ್ಥ ಮಂತ್ರಿಣಿಯಾಗಿ ಮುಂದುವರೆಸಿದ್ದು ಕೂಡ ಅತ್ಯಂತ ಆಶ್ಚರ್ಯದ ಸಂಗತಿಯಾಗಿದೆ.
ಈ ಅರ್ಥ ಸಚಿವೆ ನಿರ್ಮಲಾ, ಮನೆಯಲ್ಲಿ ತನ್ನ ಪತಿಗೆ ಸರಿಯಾಗಿ ನೋಡಿಕೊಳ್ಳುತ್ತಿದ್ದಾಳೆಯೆ ಎನ್ನುವ ಸಂಶಯ ಕೂಡ ಇಲ್ಲಿ ಹುಟ್ಟಿಕೊಳ್ಳುತ್ತಿದೆ. ಆರ್ಥಿಕತೆ ಕುರಿತ ಈ ಪತಿ ಪತ್ನಿಯರ ನಡುವಿನ ಬಯಾನ್ಬಾಜಿಯಿಂದ ದೇಶಕ್ಕಾಗುವ ಲಾಭವಂತೂ ಶೂನ್ಯ ಬಿಡಿ. ಆದರೆ ಗಂಡ ಹೆಂಡತಿಯರ ನಡುವೆ ಈ ಸ್ಮೃತಿ ಇರಾನಿ ಪ್ರವೇಶಿಸುವುದು ಭಾರತಿಯ ಸಸ್ಕ್ರತಿ ಅಲ್ಲ ಎಂದು ಆಕೆಗೆ ಹೇಳುವವರಾದರೂ ಯಾರು? ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಭಾವ ಹೇಳುವುದೇನೆಂದರೆ:
೧. ಇಡೀ ಕೊರೋನ ಸಾಂಕ್ರಮಿಕ ಪ್ರಕರಣದಲ್ಲಿ ಮೋದಿ ಸ್ವಂತದ ಪ್ರಚಾರ ಮಾಡಿಕೊಳ್ಳುವುದು ಬಿಟ್ಟು ದೇಶದ ಜನಕ್ಕೆ ಸಹಾಯವಾಗುವ ಯಾವೊಂದು ಕೆಲಸ ಮಾಡಲಿಲ್ಲ. ಈ ಪ್ರಭಾಕರ್ ಬಹಳ ವಿಸ್ತಾರವಾಗಿ ಮೋದಿಜಿಗೆ ಪತ್ರವೊಂದನ್ನು ಬರೆದಿದ್ದರು. ಆ ಪತ್ರದಲ್ಲಿ ದೇಶದ ಜನರು ತಮ್ಮ ಕೂಡಿಟ್ಟ ಹಣವನ್ನು ಈ ಸಂಕಷ್ಟ ಕಾಲದಲ್ಲಿ ಖರ್ಚು ಮಾಡಬೇಕಾಗಿ ಬಂತು. ಅದಕ್ಕಾಗಿ ಅರ್ಥ ಸಚಿವೆ ನಿರ್ಮಲಾ ನಾಚಿಕೆ ಪಡಲೆಯಿಲ್ಲ.
೨. ಸಾಯುವ ಜನರು ಮತ್ತು ಉರಿಯುತ್ತಿರುವ ಚಿತೆಗಳನ್ನು ನೋಡಿ ಮೋದಿಜಿಗೆ ಯಾವುದೇ ಬಗೆಯಲ್ಲಿ ಸಂಕೋಚವಾಗಲಿಲ್ಲ. ಮೋದಿಜಿಗೆ ಕೇವಲ ಚುನಾವಣಾ ಸಭೆಗಳು, ಕುಂಭಮೇಳ ಈ ತರಹದ ಸಂಗತಿಗಳಲ್ಲಿ ಮಾತ್ರ ಆಸಕ್ತಿಹೊಂದಿದ್ದರು. ಮಾಧ್ಯಮಗಳು ಮೋದಿಜಿ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆಂದು ಸುಳ್ಳು ಸುದ್ದಿ ಹರಡಿದವು. ಆದರೆ, ನೈಜದಲ್ಲಿ ಮೋದಿ ದೇಶವನ್ನು ಸರ್ವನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ.
ರಾಹುಲ್ ಗಾಂಧಿಯ ಚಿಂತನೆಯ ಆಧಾರದ ಮೇಲೆ ಈ ಪರಕಾಲ ಪ್ರಭಾಕರ್ ಹೇಳುವುದೇನೆಂದರೆ:
೩. ಲಾಕ್ಡೌನ್ ಮಾಡುವ ಬದಲಿಗೆ ಪರಿಸ್ಥಿತಿಯ ನಿಯಂತ್ರಣ ಮತ್ತು ಲಸಿಕೆ ತಯ್ಯಾರಿಕೆಯಲ್ಲಿ ಸರಕಾರ ತೊಡಗಬೇಕಿತ್ತು. ಆಗ ಅಂತಹ ಯಾವುದೇ ವ್ಯವಸ್ಥೆಯೂ ಮಾಡಲಿಲ್ಲ. ಲಸಿಕೆಯೂ ಸಮಯಕ್ಕೆ ಸಿಗದೆ ಜನರಿಗೆ ಸಾಯಲು ಅವಕಾಶ ಕಲ್ಪಿಸಲಾಯಿತು.
೪. ಮೋದಿಜಿಗೆ ಯಾವುದೇ ಸಂದರ್ಭದಲ್ಲೂ ತಜ್ಞರ ಅಗತ್ಯವೇ ಇರುವುದಿಲ್ಲ. ಅವರು ಕೇವಲ ತಾವಾಯ್ತು ತಮ್ಮ ಭಾಷಣವಾಯ್ತು. ಮಾಧ್ಯಮಗಳನ್ನು ನಿಯಂತ್ರಿಸುತ್ತ ಮೋದಿ ನಾಟಕೀಯವಾಗಿ ವರ್ತಿಸುತ್ತಾರೆ. ಮೋದಿಜಿಗೆ ಯಾವುದೇ ಜವಾಬ್ಧಾರಿಯೂ ಇಲ್ಲ. ಡಿಮೊನಿಟೈಜೇಶನ್ ಕೂಡ ಮೋದಿಜಿ ಹೀಗೇ ಮಾಡಿದ್ದರು.
ಪರಕಾಲ ಪ್ರಭಾಕರ್ ಕೊನೆಯಲ್ಲಿ ಹೀಗೆ ಬರೆಯುತ್ತಾರೇ;
೫. ಮೋದಿಜಿಯ ಈ ಅನಾಹುತಗಳಿಂದ ದೇಶ ಬಹಳ ದಿನ ಸುಮ್ಮನಿರಲಾರದು, ಮೋದಿಯ ಈ ನಾಟಕೀಯ ನಡೆ ದೇಶಕ್ಕೆ ಒಳಿತನ್ನು ಮಾಡದು. ಡಾ. ಮನಮೋಹನ್ ಸಿಂಗ್ ಅವರಂತ ವಿದ್ವಾನರುˌ ವಿದ್ಯಾವಂತರನ್ನು ಅವಮಾನಿಸಿದ ಮೋದಿ ಅದರ ಪ್ರತಿಫಲ ತಾನಷ್ಟೇ ಅಲ್ಲದೆ ಇಡೀ ದೇಶಕ್ಕೆ ಉಣ್ಣಿಸುತ್ತಿದ್ದಾರೆ.
ಈ ರೀತಿಯಲ್ಲಿ ಮೋದಿ ತಮ್ಮ ಆಡಳಿತದುದ್ದಕ್ಕೂ ತಮ್ಮ ಸಹುದ್ಯೋಗಿಗಳುˌ ಅವರ ಕುಟುಂಬದವರು ಮತ್ತು ಸ್ವಪಕ್ಷದವರಿಂದ ಎಷ್ಟೆ ಟೀಕೆಗಳು ಬಂದರೂ ನಿರ್ಲಿಪ್ತವಾಗಿ ತಮಗೆ ಹಾಗು ದೇಶದ ಕಾರ್ಪೋರೇಟ್ ಕಳ್ಳೋದ್ಯಮಿಗಳಿಗೆ ಏನೊ ಒಳಿತೊ ಅದನ್ನು ಯಾವ ಸಂಕೋಚ ಹಾಗು ನಾಚಿಕೆ ಇಲ್ಲದೆ ಮಾಡುತ್ತ ದೇಶವನ್ನು ಅಳಿವಿಮಂಚಿಗೆ ತಂದು ನಿಲ್ಲಿಸಿದ್ದಂತೂ ಎಲ್ಲರ ಅರಿವಿಗೆ ಬರಲು ಇನ್ನು ಹೆಚ್ಚು ಸಮಯ ಹಿಡಿಯಲಾರದು.
~ ಡಾ. ಜೆ ಎಸ್ ಪಾಟೀಲ.