ಹುಬ್ಬಳ್ಳಿ: ವಿಚಾರಣೆಗೆ ಸಮಯ ಕೇಳುವ ನಿಟ್ಟಿನಲ್ಲಿ ಅಧಿಕಾರಿಗಳ ಭೇಟಿಗೆ ಬಂದಿದ್ದೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಹೇಳಿದ್ದಾರೆ.
ಸಿಐಡಿ ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ದಿನಗಳಿಂದ ನಾನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಇವತ್ತು ಸಮಯ ಕೇಳಿದ್ದೆ. ನೇಹಾ ಕೊಲೆ ಕೇಸ್ ವಿಚಾರವಾಗಿ ಕೆಲವು ಮಾಹಿತಿ ಕೊಟ್ಟಿದ್ದೇನೆ. ಇದುವರೆಗೂ ನೇಹಾ ಕೇಸ್ ನಲ್ಲಿ ಒಬ್ಬರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಪ್ರಶ್ನಿಸಿದ್ದೇನೆ ಎಂದು ಹೇಳಿದ್ದಾರೆ.
ನಿಮಗೆ ಅನುಮಾನ ಇದ್ದರೆ ಬರೆದು ಕೊಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಹತ್ಯೆಯಾದ ಅಂಜಲಿ ಮನೆಯಲ್ಲಿ ತಂದೆ, ಸಹೋದರ ಯಾರೂ ಇಲ್ಲ. ನಾನು ಆ ವಾರ್ಡ್ ಸದಸ್ಯನಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಅಂಜಲಿ ಹತ್ಯೆ ಕೇಸ್ ಕೂಡ ಪಾಸ್ಟ್ ಟ್ರ್ಯಾಕ್ ಕೊಡಬೇಕು. ಸಂಪೂರ್ಣವಾಗಿ ಅಂಜಲಿ ಪ್ರಕರಣ ಬೇಧಿಸಬೇಕಿದೆ ಎಂದು ಹೇಳಿದ್ದಾರೆ.