• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಪ್ರತಿಧ್ವನಿ by ಪ್ರತಿಧ್ವನಿ
September 21, 2026
in Top Story, ಕರ್ನಾಟಕ
0
ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದೇನು?
Share on WhatsAppShare on FacebookShare on Telegram

ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯವು ತಿರಸ್ಕರಿಸಿಕೊಂಡು ಬಂದಿರುವ ನಡುವೆಯೂ ಕೇಂದ್ರವು ಅಧಿಸೂಚನೆಗಳನ್ನು ಹೊರಡಿಸುತ್ತಿರುವುದರಿಂದ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅಗತ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ADVERTISEMENT

ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ.

Assembly Session : ಬಿಕೆ ಹರಿಪ್ರಸಾದ್‌ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ಶಾಸಕರು..! #bkhariprasad #bjpmla

ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ.

ವಿಧಾನ ಪರಿಷತ್ನಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕಬಾಧಕಗಳ ಚರ್ಚಿಸಿ, ವಸ್ತುನಿಷ್ಠ ನಿಲುವು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಸದನಕ್ಕೆ ಮನವರಿಕೆ ಮಾಡಿಕೊಟ್ಟೆ.ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ (ರಕ್ಷಣೆ) ಕಾಯ್ದೆ, 1986ರ ಅಡಿಯಲ್ಲಿ ಪಶ್ಚಿಮ ಘಟ್ಟಗಳ ಪ್ರದೇಶದ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ, ಅದರ ಸಂರಕ್ಷಣೆ, ರಕ್ಷಣೆ ಮತ್ತು ಪುನರುಜೀವನಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು 2010 ರಲ್ಲಿ ಪ್ರೊ|| ಮಾಧವ್ ಗಾಡ್ಗೀಳ್ ರವರ ನೇತೃತ್ವದಲ್ಲಿ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP)ಯನ್ನು ರಚಿಸಿತ್ತು. ಸದರಿ ಸಮಿತಿಯು ಅಧ್ಯಯನ ನಡೆಸಿ ದಿನಾಂಕ: 30.08.2011ರಂದು ತನ್ನ ವರದಿಯನ್ನು ಸಲ್ಲಿಸಿದೆ.

Dinesh Gooligowda : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರೋರೆಷ್ಟು..?  #pratidhvani

 

ಪ್ರೊ|| ಮಾಧವ್ ಗಾಡ್ಗೀಳ್ ಸಮಿತಿಯ ವರದಿಯಲ್ಲಿ ಒಟ್ಟು 1,29,037 ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಗುರುತಿಸಿ ಮೂರು ಪರಿಸರ ಸೂಕ್ಷ್ಮ ವಲಯಗಳಾಗಿ (ESZ-1, ESZ – 2, & ESZ-3) ವರ್ಗೀಕರಿಸಿ, ಈ ವಿಶಾಲವಾದ ಪ್ರದೇಶಗಳನ್ನು ಸಂರಕ್ಷಿಸುವ ಕುರಿತು ಹಲವು ಶಿಫಾರಸ್ಸುಗಳನ್ನು ನೀಡಲಾಗಿಗಿದೆ. ಆದರೆ, ಪಶ್ಚಿಮ ಘಟ್ಟಗಳ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಮತ್ತು ಆ ಭಾಗಗಳ ಜನ-ಜನಪ್ರತಿನಿಧಿಗಳು ಮಾಧವ ಗಾಡ್ಗೀಳ್ ಸಮಿತಿಯ ವರದಿಯ ಕುರಿತು ವಿರೋಧಗಳನ್ನು ವ್ಯಕ್ತಪಡಿಸಿದ ಕಾರಣದಿಂದ ರಾಜ್ಯಗಳ ಅಭಿಪ್ರಾಯಗಳನ್ನು ಆಲಿಸಿ, ಗಾಡ್ಗೀಳ್ ಸಮಿತಿಯ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರವು ಡಾ| ಕೆ. ಕಸ್ತೂರಿರಂಗನ್ ರವರ ಅಧ್ಯಕ್ಷತೆಯಲ್ಲಿ 2012ರ ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು [ High level working group] ರಚಿಸಿತು.

Dinesh Gooligowda : ಶಕ್ತಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ದಿನೇಶ್ ಗೂಳಿಗೌಡ.. #pratidhvani

ಡಾ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯ 11 ಜನರ ಈ ಕಾರ್ಯಪಡೆಯು (Working Group) ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸುಮಾರು 1,500 ಕಿ.ಮೀ ಉದ್ದವನ್ನು ಒಳಗೊಂಡ ಪಶ್ಚಿಮ ಘಟ್ಟಗಳ ಭೂ ಪ್ರದೇಶಗಳನ್ನು ಅಧ್ಯಯನ ಮಾಡಿ “Report of the High level Working Group on Western Ghats” ಎಂಬ ಹೆಸರಿನಲ್ಲಿ ದಿನಾಂಕ 15-4-2013 ರಂದು ಸಲ್ಲಿಸಿದೆ. ಆ ವರದಿಯಲ್ಲಿ “We the Members of the High level Working Group constituted to study the preservation of ecology. environmental integrity and holistic development of the Western Ghats in view of their rich and unique biodiversity after due deliberation have adopted the report for submission” ಎಂದು ಹೇಳಲಾಗಿದೆ.

ಈ ಕಾರ್ಯಪಡೆಯು 15.04.2013 ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಭಾರತದ ಆರು ರಾಜ್ಯಗಳ ಅಂದಾಜು 59,940 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area) ಗಳೆಂದು ವಿಭಾಗಿಸಿ ಶಿಫಾರಸ್ಸು ಮಾಡಿತ್ತು.ಆದರೆ, ಕೇರಳ ಸರ್ಕಾರವು ಆ ವೇಳೆಗೆ ವಿಸ್ತ್ರತ ಅಧ್ಯಯನ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು 9,993.7 ಚದರ ಕಿ.ಮೀಗಳನ್ನು ಗುರುತಿಸಿತ್ತು. ಹಾಗಾಗಿ ಕಸ್ತೂರಿ ರಂಗನ್ ವರದಿಯು ಗುರ್ತಿಸಿದ್ದ 13,108 ಚದರ ಕಿ.ಮೀ.ಗಳಿಗೆ ಬದಲಾಗಿ 9,993.7 ಚ.ಕಿ.ಮೀಗಳನ್ನ ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಆದ್ದರಿಂದಲೇ 59,940 ಚ. ಕಿಮೀಗಳ ಬದಲಿಗೆ 56,825.7 ಕಿಮೀ ಪ್ರದೇಶವನ್ನು ಉಳಿಸಿಕೊಳ್ಳಲಾಗಿದೆ.

Dinesh Gooligowda : ರಾಜ್ಯದ ಜನರ ಜೀವನ ಸುಧಾರಣೆಗೆ ಸಿದ್ದು, ಡಿಕೆಶಿ ಶ್ರಮಿಸುತ್ತಿದ್ದಾರೆ..  #pratidhvani

ರಾಜ್ಯದಲ್ಲಿ ಕಸ್ತೂರಿ ರಂಗನ್ ಅವರ ವರದಿಯಲ್ಲಿ 1,576 ಗ್ರಾಮಗಳೆಂದು ತಿಳಿಸಲಾಗಿತ್ತು. ಕೇಂದ್ರ ಸರ್ಕಾರದ ಇತ್ತೀಚಿನ ಕರಡು ಅಧಿಸೂಚನೆಯಲ್ಲಿ 1,449 ಗ್ರಾಮಗಳೆಂದು ಪ್ರಸ್ತಾಪಿಸಲಾಗಿದೆ. ಮಾಧವ್ ಗಾಡ್ಲೀಳ್ ಅವರ ಆಯೋಗವು ಇಡೀ ಪಶ್ಚಿಮ ಘಟ್ಟವನ್ನು ಮೂರು ಹಂತದ ಪರಿಸರ ಸೂಕ್ಷ್ಮ ವಲಯ ( ESZ 1,2,3] ಎಂದು ಗುರ್ತಿಸಿ ವಿಭಾಗಿಸಿತ್ತು. 1.29 ಲಕ್ಷ ಚದರ ಕಿ. ಮೀಗಳಷ್ಟು ಪ್ರದೇಶವನ್ನು ಗಾಡ್ಲೀಳ್ ಅವರು ಗುರ್ತಿಸಿದ್ದರು. ಆದರೆ, ಡಾ. ಕಸ್ತೂರಿ ರಂಗನ್ ಅವರ ಕಾರ್ಯಪಡೆಯು ಅದನ್ನು 56,825.7 ಚ. ಕಿ.ಮೀಗೆ ಇಳಿಸಿತು.

ಈ 56,825.7 ಕಿ.ಮೀ.ಗಳಲ್ಲಿ ಕರ್ನಾಟಕವೊಂದರಲ್ಲಿ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರ್ತಿಸಲಾಗಿರುತ್ತದೆ. ಈ ಪ್ರದೇಶವು ರಾಜ್ಯದ 10 ಜಿಲ್ಲೆಗಳ 33 ತಾಲ್ಲೂಕುಗಳ 1,576 ಗ್ರಾಮಗಳೆಂದು ಗುರುತಿಸಲಾಗಿತ್ತು. ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಈ ಪಟ್ಟಿಯಲ್ಲಿವೆ..

ಈ ವರದಿಯನುಸಾರ ಗ್ರಾಮವನ್ನು ಒಂದು ಸಣ್ಣ ಘಟಕವಾಗಿ ಪರಿಸರ ಸೂಕ್ಷ್ಮ ಪ್ರದೇಶದ ನಿರ್ಧರಣೆಗೆ ಪರಿಗಣಿಸಲಾಗಿದ್ದು, ಒಂದು ಗ್ರಾಮದ 1/5 ನೇ ಭಾಗ ಅಥವಾ ಅದಕ್ಕಿಂತ ಹೆಚ್ಚಿನ ಭೂ ಪ್ರದೇಶವು ಪಶ್ಚಿಮ ಘಟ್ಟದ ವ್ಯಾಪ್ತಿಯ ಪ್ರದೇಶಗಳ ವ್ಯಾಪ್ತಿಗೆ ಒಳಪಟ್ಟರೆ, ಅಂತಹ ಗ್ರಾಮವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿ ಪಡಿಸಲಾಗಿದೆ.
ಸದರಿ ವರದಿಯಲ್ಲಿ 2 ಭಾಗಗಳಾಗಿ ವಿಂಗಡಣೆ ಮಾಡಲಾಗಿದ್ದು, ಅವುಗಳಲ್ಲಿ ಮೊದಲನೆಯದು ಪರಿಸರಕ್ಕೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದು. & ಎರಡನೇಯದಾಗಿ ನಿರ್ಬಂಧದಿಂದ ಕಷ್ಟಕ್ಕೊಳಗಾಗುವ ಸ್ಥಳಗಳ ಬದಲಿಗೆ ಪ್ರೋತ್ಸಾಹಕಗಳನ್ನು ನೀಡುವ ವಿಚಾರಗಳು ಅದರಲ್ಲಿ ಅಡಕವಾಗಿವೆ.

ಡಾ.ಕಸ್ತೂರಿ ರಂಗನ್ ಅವರ ಕಾರ್ಯಪಡೆಯ ಶಿಫಾರಸುಗಳನ್ನು ಕೇಂದ್ರ ಸರ್ಕಾರವು 2014ರ ಆಗಸ್ಟ್ 27ರಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕ ಸಲ್ಲಿಸಿದೆ. ಆ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರವು ಪ್ರೊ. ಮಾಧವ್ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಕಾರ್ಯಪಡೆಯು ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವುದಾಗಿ ಹೇಳಿದೆ. ಪಶ್ಚಿಮ ಘಟ್ಟಗಳ ಶೇ.37 ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿದ್ದ ಶಿಫಾರಸ್ಸಿನಂತೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ಅಫಿಡವಿಟ್ ನಲ್ಲಿ ಹೇಳಿತ್ತು.
ಸದರಿ ಕಾರ್ಯಪಡೆಯ ವರದಿಯನ್ನಾಧರಿಸಿ, ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯು ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಸಂಬಂಧ ಈ ಮೊದಲು ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ, ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳ ವಿರೋಧದಿಂದಾಗಿ ಮೊದಲ 6 ಕರಡು ಅಧಿಸೂಚನೆಗಳು ಅಂತಿಮಗೊಳ್ಳಲಿಲ್ಲ. ಆನಂತರ ದಿನಾಂಕ: 31.07.2024 ರಂದು ಕೇಂದ್ರ ಸರ್ಕಾರವು 6ನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಕಸ್ತೂರಿ ರಂಗನ್ ಅವರ ಕಾರ್ಯಪಡೆಯ ವರದಿಯು ಈ ಕೆಳಕಂಡ ಚಟುವಟಿಕೆಗಳ ಹೊಸ ಸ್ಥಾಪನೆಗಳು ಹಾಗೂ ವಿಸ್ತರಣೆಯನ್ನು ನಿರ್ಬಂಧಿಸುತ್ತದೆ.

ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆಗಳನ್ನು ಸಂಪೂರ್ಣ ನಿಷೇಧಿಸಬೇಕು. (ಅಸ್ತಿತ್ವದಲ್ಲಿರುವ ಗುತ್ತಿಗೆಗಳು 5 ವರ್ಷದೊಳಗೆ ಸ್ಥಗಿತಗೊಳ್ಳಬೇಕು).

ಉಷ್ಣ ವಿದ್ಯುತ್ ಸ್ಥಾವರಗಳು:– ಹೊಸ ಸ್ಥಾವರಗಳು ಹಾಗೂ ವಿಸ್ತರಣೆಗೆ ನಿರ್ಬಂಧ ವಿಧಿಸಬೇಕು.
ಕೈಗಾರಿಕೆಗಳು–ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರ್ದಿಷ್ಟಪಡಿಸಿದ ಎಲ್ಲಾ ಹೊಸ ‘ಕೆಂಪು’ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ವಿಸ್ತರಣೆಗೆ ನಿಷೇಧ. ಆಸ್ಪತ್ರೆಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಅಂತಹ ಕೆಂಪು ವರ್ಗದ ಕೈಗಾರಿಕೆಗಳು ನಿಯಮಾನುಸಾರ ಮುಂದುವರಿಯಬಹುದಾಗಿರುತ್ತದೆ.

20,000 ಚದರ ಮೀಟರ್ ಮತ್ತು ಅದಕ್ಕಿಂತಲೂ ಹೆಚ್ಚಿನ ವಿಸ್ತೀರ್ಣವುಳ್ಳ ಕಟ್ಟಡ ಮತ್ತು ನಿರ್ಮಾಣ ಯೋಜನೆಗಳು, 50 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಅಥವಾ 1,50,000 ಚ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿರ್ಮಾಣ, ಟೌನ್ ಶಿಪ್ (ಪಟ್ಟಣಗಳು) ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳ ಹೊಸ ಪ್ರಸ್ತಾವನೆ ಹಾಗೂ ವಿಸ್ತರಣೆಗೆ ನಿರ್ಬಂಧ.

ಜಲವಿದ್ಯುತ್ (ಹೈಡ್ರೋ) ಯೋಜನೆಗಳು: ಹೊಸ ಜಲವಿದ್ಯುತ್ ಯೋಜನೆಗಳಿಗೆ ಅಧಿಸೂಚನೆ, 2006ಕ್ಕೆ ಒಳಪಟ್ಟು ಷರತ್ತು ಬದ್ಧ ಅನುಮತಿ. (ಒಂದು ಯೋಜನೆ ಮತ್ತು ಇನ್ನೊಂದರ ನಡುವಿನ ಕನಿಷ್ಠ ಅಂತರ ಮೂರು ಕಿ.ಮೀ. ಇರಬೇಕು).
ಈ ಅಂಶಗಳಲ್ಲಿ ಬಹಳ ವ್ಯತ್ಯಾಸವಿಲ್ಲದ ಕರಡು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.

ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಕಾರ್ಯಪಡೆಯು ಸಲ್ಲಿಸಿರುವ ವರದಿಯು ರಾಜ್ಯದ ಪಶ್ಚಿಮ ಘಟ್ಟಗಳ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಜನರು ಹಾಗೂ ಜನಪ್ರತಿನಿಧಿಗಳ ಭಾವನೆಗಳನ್ನು ಪರಿಗಣಿಸಿದ ನಮ್ಮ ಸರ್ಕಾರವು 2014ರಿಂದಲೇ ನಿರಂತರವಾಗಿ ಪ್ರತಿಭಟಿಸಿಕೊಂಡು ಬಂದಿದೆ.

ರಾಜ್ಯ ಸರ್ಕಾರವು 2014ರಲ್ಲೇ ಸಂಪುಟ ಉಪ ಸಮಿತಿಯನ್ನು ರಚಿಸಿ ಪಶ್ಚಿಮ ಘಟ್ಟಗಳ ಜಿಲ್ಲೆಗಳಿಗೆ ಭೇಟಿ ಮಾಡಿ ವರದಿ ಸಲ್ಲಿಸಲು ತಿಳಿಸಿತ್ತು. ಅದರಂತೆ ಉಪ ಸಮಿತಿಯು 2015ರ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ಸಾರ್ವಜನಿಕ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಅದನ್ನು ಅಂಗೀಕರಿಸಿ ಕೇಂದ್ರಕ್ಕೆ ವರದಿಯ ಕುರಿತು ತಿಳಿಸಿತ್ತು. ಆನಂತರ ಪ್ರತಿ ಕರಡು ಅಧಿಸೂಚನೆಗಳನ್ನು ಹೊರಡಿಸಿದಾಗಲೂ ರಾಜ್ಯ ಸರ್ಕಾರವು ತನ್ನ ಪ್ರತಿಭಟನೆಗಳನ್ನು ದಾಖಲಿಸುತ್ತಲೇ ಬಂದಿದೆ.

ರಾಜ್ಯವು ಈಗಾಗಲೇ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡನ್ನೂ ಸಮತೋಲನಗೊಳಿಸಿ ಪಶ್ಚಿಮ ಘಟ್ಟಗಳ ಹೆಚ್ಚಿನ ಪ್ರದೇಶವನ್ನು ಅರಣ್ಯಗಳು, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಹಾಗೂ ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಿ ಕಟ್ಟುನಿಟ್ಟಾಗಿ ಸಂರಕ್ಷಣೆಯ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚುವರಿಯಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಿದರೆ ಆ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗಾಗಿ ಡಾ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕವು ಒಪ್ಪುವುದಿಲ್ಲವೆಂದು ರಾಜ್ಯ ಸರ್ಕಾರ ಪದೇ ಪದೇ ತಿರಸ್ಕರಿಸುತ್ತಲೇ ಬಂದಿದೆ.

ಕೇಂದ್ರ ಸರ್ಕಾರಕ್ಕೆ ಹಿಂದಿನ ನಮ್ಮ ಸರ್ಕಾರವು 5-5-2014, 24-4-2015, 20-10-2015, 27-2-2016, 22-4-2017, 27-7-2017 ರ ದಿನಾಂಕಗಳಂದು ಪತ್ರಗಳನ್ನು ಬರೆದು, ಅಧ್ಯಯನಗಳನ್ನು ಮಾಡಿ ವರದಿಗಳನ್ನು ಸಿದ್ಧಪಡಿಸಿ ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಕಸ್ತೂರಿ ರಂಗನ್ ವರದಿಯನ್ನು ಒಪ್ಪಲಾಗುವುದಿಲ್ಲವೆಂದು ತಿಳಿಸಿತ್ತು. ಆ ನಂತರದ ಸಮಿತಿಗಳು ಕೂಡ ಕಾಲ ಕಾಲಕ್ಕೆ ಕರಡು ಅಧಿಸೂಚನೆಗಳನ್ನು ತಿರಸ್ಕರಿಸುವುದಾಗಿ ಸಚಿವ ಸಂಪುಟಗಳಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿವೆ.

ಈ ನಡುವೆ ದಿನಾಂಕ 18-4-2022ರಂದು ಕೇಂದ್ರ ಸರ್ಕಾರವು ಶ್ರೀ. ಸಂಜಯ್ ಕುಮಾರ್ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ. ಸದರಿ ಸಮಿತಿಯು 2022ರ ಮೇ ತಿಂಗಳಲ್ಲಿ ರಾಜ್ಯಕ್ಕೂ ಭೇಟಿ ನೀಡಿ ಪರಿಶೀಲಿಸಿದೆ. ಆ ಸಮಿತಿಗೂ ಸಹ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾದ ಕಾರಣ ತಿರಸ್ಕರಿಸುವುದಾಗಿ ತಿಳಿಸಲಾಗಿದೆ.

ಶ್ರೀ. ಸಂಜಯ್ ಕುಮಾರ್ ಅವರ ಸಮಿತಿಯ ಪರಿಶೀಲನಾ ಕಾರ್ಯ ಮುಂದುವರೆಯುತ್ತಿರುವಾಗಲೇ ಕೇಂದ್ರ ಸರ್ಕಾರವು 5, 6 ಮತ್ತು 7ನೇ ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಪದೇ ಪದೇ ಅಧಿಸೂಚನೆಗಳನ್ನು ಹೊರಡಿಸುವುದರಿಂದ ಜನರ ಆತಂಕಗಳು ಹೆಚ್ಚಾಗುತ್ತಿವೆ.

ಆದರೆ, ಇದಕ್ಕೆ ಕೇಂದ್ರ ಸರ್ಕಾರವು ಹೇಳುವ ಉತ್ತರವೇ ಬೇರೆ. ಸಾಮಾನ್ಯವಾಗಿ ಪರಿಸರ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿದ ಕಾನೂನುಗಳು 725 ದಿನಗಳವರೆಗೆ ಮಾತ್ರ ಜೀವಂತವಾಗಿರುತ್ತದೆ. ಆದಾದ ನಂತರ ಪ್ರಕ್ರಿಯೆಯನ್ನು ಕಾನೂನಾತ್ಮಕವಾಗಿ ಜೀವಂತವಾಗಿಡಲು ಹಾಗೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿದೆ. ಸಂಜಯ್ ಕುಮಾರ್ ಅವರ ಸಮಿತಿಯ ಅವಧಿ ಜುಲೈ-2027 ರ ವರೆಗೆ ಇದೆ. ಸದರಿ ಸಮಿತಿಯು ಉಪಗ್ರಹ ಆಧಾರಿತ ಸರ್ವೇಗಳ ಜೊತೆಗೆ ಭೌತಿಕ ಪರಿಶೀಲನೆಯನ್ನೂ ಮಾಡುತ್ತಿದೆ. ಕಾಡುಗಳ ನಡುವೆ ಇರುವ ಜನವಸತಿ ಪ್ರದೇಶಗಳು, ತೋಟಗಳು ಹಾಗೂ ಕೃಷಿ ಭೂಮಿಗಳ ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚೆಗಳನ್ನು ನಡೆಸುತ್ತಿದೆ. ಹಾಗಾಗಿ ಈ ಸಮಿತಿಯ ಅವಧಿಯನ್ನೂ ವಿಸ್ತರಿಸಲಾಗಿದೆ.

ನಮ್ಮ ಸರ್ಕಾರವು ದಿನಾಂಕ 31-7-2024 ರಂದು ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವುದಾಗಿ ಸಚಿವ ಸಂಪುಟವು ದಿನಾಂಕ 6-9-2024ರಂದು ತೀರ್ಮಾನ ಕೈಗೊಂಡಿದೆ. ಮತ್ತೊಮ್ಮೆ ನಮ್ಮ ಸರ್ಕಾರವು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಪಶ್ಚಿಮ ಘಟ್ಟ ವ್ಯಾಪ್ತಿಯ 39 ತಾಲ್ಲೂಕುಗಳ ಜನಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿರುತ್ತದೆ. ಬಹುಪಾಲು ಜನರ ಅಭಿಪ್ರಾಯ ಕರಡು ಅಧಿಸೂಚನೆಯನ್ನು ವಿರೋಧಿಸುವುದು ಮತ್ತು ಕಸ್ತೂರಿ ರಂಗನ್ ಅವರ ವರದಿಯನ್ನು ತಿರಸ್ಕರಿಸಬೇಕು ಎಂಬುದೇ ಆಗಿತ್ತು. ಅದರಂತೆ ಸರ್ಕಾರವು ತಿರಸ್ಕರಿಸಿಕೊಂಡೇ ಬಂದಿದೆ. ಕೇಂದ್ರವು ಅಧಿಸೂಚನೆಗಳನ್ನು ಹೊರಡಿಸುವುದು ಮತ್ತು ರಾಜ್ಯವು ಅದನ್ನು ತಿರಸ್ಕರಿಸುವುದೂ ನಡೆಯುತ್ತಲೇ ಇದೆ.

ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ. ಮಲೆನಾಡಿನ ಜನರ ಸಾಮಾನ್ಯ ಅಭಿಪ್ರಾಯ, ಕಸ್ತೂರಿ ರಂಗನ್ ಅವರು ಸ್ಯಾಟಲೈಟ್ ಚಿತ್ರಗಳನ್ನಾಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಅದಕ್ಕೆ ವಾಸ್ತವಿಕ ನೆಲಗಟ್ಟಿಲ್ಲ. ಭೌತಿಕ ಸರ್ವೆ ಮಾಡಿದಾಗ ಮಾತ್ರ ವಾಸ್ತವಾಂಶ ತಿಳಿಯುತ್ತದೆ. ಹಾಗಾಗಿ ಕಸ್ತೂರಿ ರಂಗನ್ ಅವರ ವರದಿ ತಿರಸ್ಕರಿಸಬೇಕು ಎಂಬುದಾಗಿದೆ.
ಕಸ್ತೂರಿ ರಂಗನ್ ಅವರು ಅಕ್ಕ ಪಕ್ಕದ ಊರುಗಳಲ್ಲೇ ಒಂದು ಊರನ್ನು ಸೇರಿಸಿಕೊಂಡು ಮತ್ತೊಂದು ಊರನ್ನು ಕೈ ಬಿಟ್ಟಿದ್ದಾರೆ. ಪಶ್ಚಿಮ ಘಟ್ಟಗಳ ಗ್ರಾಮಗಳನ್ನು ಮ್ಯೂಸಿಯಂ ಮಾಡಲು ಹೊರಟಿದ್ದಾರೆ, ಅಭಿವೃದ್ದಿಯನ್ನು ನಿರಾಕರಿಸುವ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನೂ ನಿರಾಕರಿಸಿದ್ದಾರೆ ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ.
ಕಸ್ತೂರಿ ರಂಗನ್ ಅವರ ಸಮಿತಿಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಯಾರಿದ್ದರು? ಕಸ್ತೂರಿ ರಂಗನ್ ಕಾರ್ಯಪಡೆಯು ಸಣ್ಣ ರೈತರರು ಹಾಗೂ ಆದಿವಾಸಿಗಳ ಜೊತೆ ಮಾತುಕತೆಯನ್ನ್ನೇ ನಡೆಸದೆ ಈ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂಬುದೂ ಕೂಡ ವಾಸ್ತವ ಸಂಗತಿಯಾಗಿದೆ.

Tejasvi Surya : ನಕಲಿ ಚಿಟ್ ಫಂಡ್ ಮಾಫಿಯಾ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ ತೇಜಸ್ವಿ ಸೂರ್ಯ..!#pratidhvani

ಈಗ ಸರ್ಕಾರದ ಮುಂದೆ ಇರುವ ಸಾಧ್ಯತೆಗಳು ಹೀಗಿವೆ. ಡಾ. ಕಸ್ತೂರಿ ರಂಗನ್ ಅವರ ವರದಿಯಲ್ಲಿ 20,668 ಚ.ಕಿಮೀ ಪ್ರದೇಶ ಗುರುತಿಸಿದೆ. ಅದರಲ್ಲಿನ ತಾಂತ್ರಿಕ ಲೋಪ ದೋಷಗಳನ್ನು ಸರಿಪಡಿಸಿದರೆ 19,252.16 ಚ. ಕಿಮೀ ಆಗುತ್ತದೆ. ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಉದ್ಯಾನವನ, ವೈಲ್ಡ್ ಲೈಫ್ ಸ್ಯಾಂಕ್ಚುರಿ, ಮೀಸಲು ಅರಣ್ಯ ಮುಂತಾದವುಗಳ ಹೆಸರಿನಲ್ಲಿ 16,114.08 ಚ.ಕಿಮೀ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವೇ ಆಗಿದೆ. ಹಾಗಾಗಿ 3,108.08 ಚ.ಕಿಮೀಗಳ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದನ್ನು ಅರಿತುಕೊಳ್ಳಲು ಗ್ರಾಮವಾರು ಪರಿಶೀಲನೆ ನಡೆಸಿ ಸರ್ವೇ ನಂಬರ್ವಾರು ನಕ್ಷೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಏಕೆಂದರೆ ಪಶ್ಚಿಮ ಘಟ್ಟಗಳ ಜೊತೆಗೆ ಸಾವಿರಾರು ವರ್ಷಗಳಿಂದ ವಾಸಿಸಿಕೊಂಡು ಬಂದ ಜನರ ಬದುಕನ್ನೂ ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ. ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

Tags: Centre continues to issueDeputy Chief MinisterDr. G. ParameshwarKarnatakaKasturi Rangan reportstate rejecting
Previous Post

ಯಲ್ಲಮ್ಮನಗುಡ್ಡದಲ್ಲಿ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ :  ಕಳಪೆ ಆಹಾರ, ಎಕ್ಸ್‌ಪೈರಿ ಪಾನೀಯ ಪತ್ತೆ.!

Next Post

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

Related Posts

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?
Top Story

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?

by ಪ್ರತಿಧ್ವನಿ
September 21, 2026
0

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಅಕ್ಟೋಬರ್ 20, 2026ರಿಂದ ಜಾರಿಗೆ ಬರಲಿದೆ. ಎರಡೂ ದೇಶಗಳು ಒಪ್ಪಂದವನ್ನು ಅನುಮೋದಿಸಿದ ಬಳಿಕ ಈ...

Read moreDetails
ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

September 21, 2026
ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

September 21, 2026
108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

September 21, 2026
ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

September 21, 2026
Next Post
ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada