ಕಾನೂನು,ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಪೊಲೀಸರೇ ಪುಂಡರಂತೆ ವರ್ತಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಯುವತಿಗೆ ಚುಂಬಿಸಿದ್ದಾರೆ.

ಈ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.ಮಹಿಳಾ ಪೊಲೀಸ್ ಅಧಿಕಾರಿಗಳು ರಾತ್ರಿ ವೇಳೆ ಪಿಂಕ್ ಪೊಲೀಸ್ ವಾಹನದಲ್ಲಿ ಗಸ್ತು ತಿರುಗುತ್ತಿದ್ರು.ಈ ವೇಳೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತನಿಯಾ ರಾಯ್ ಕುಡಿದ ಮತ್ತಿನಲ್ಲಿ ಮತ್ತೊಂದು ವಾಹನಕ್ಕೆ ಪೊಲೀಸ್ ವಾಹನವನ್ನ ಡಿಕ್ಕಿ ಹೊಡೆಸಿದ್ದಾರೆ.

ಇದನ್ನ ಪ್ರಶ್ನಿಸಿದ ಯುವತಿಯರ ಮುಂದೆ ಕುಡಿದಅಮಲಿನಲ್ಲಿದ್ದ ಪೊಲೀಸರು ಹೈಡ್ರಾಮಾ ಮಾಡಿದ್ದಲ್ಲದೇ, ಮಹಿಳಾ ಪೊಲೀಸ್ ಅಧಿಕಾರಿ ಚುಂಬಿಸಲು ಹೋಗಿ ಭಾರೀ ಅವಾಂತರ ಮಾಡಿಕೊಂಡಿದ್ದಾರೆ.