2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು. ಆದರೂ ರಾಜ್ಯದಲ್ಲಿ ಟಿಎಂಸಿ ಗೆ ಬಹುಮತ ಸಿಕ್ಕಿ ಕಾರಣ ಸತತ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಂದಿಗ್ರಾಮದಲ್ಲಿ ಸುವೆಂದು ಅಧಿಕಾರಿಯ ಗೆಲುವು ಪ್ರಶ್ನಿಸಿ ಬ್ಯಾನರ್ಜಿ ಕೋಲ್ಕತ್ತಾ ಕೋರ್ಟ್ ಮೆಟ್ಟಿಲ್ಲೇರಿದ್ದಾರೆ. ಇಂದು ಬೆಳಗ್ಗೆ 11.00 ಗಂಟೆಗೆ ಅರ್ಜಿ ವಿಚಾರಣೆ ನಡೆಯಲಿದೆ.

ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯಲ್ಲಿ ಮೊದಲಿಗೆ ಬ್ಯಾನರ್ಜಿ ಗೆಲುವು ಎಂದು ಘೋಷಿಸಲಾಗಿತ್ತು. ಕೆಲವೂ ಸಮಯದ ನಂತರ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿಯ ವಿರುದ್ಧ 2,000 ಮತಗಳ ಅಂತರದಲ್ಲಿ ಸೋತಿದ್ದಾರೆಂದು ಘೋಷಿಸಲಾಗಿತ್ತು. ಇದು ಟಿಎಂಸಿ ಗರಿಂದ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.

ಬಿಜೆಪಿ ಅಭ್ಯರ್ಥಿ ಸುವೇಂದು ಅವರ ಚುನಾವಣಾ ಗೆಲುವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲ್ಲೇರಿರುವ ಮಮತಾ ಬ್ಯಾನರ್ಜಿ ಅರ್ಜಿಯಲ್ಲಿ 3 ಅಂಶಗಳನ್ನು ಉಲ್ಲೇಖಿಸಿ ಅವರನ್ನು ಅನೂರ್ಜಿತಗೊಳಿಸಬೇಕೆಂದ ಮನವಿ ಮಾಡಿದ್ದಾರೆ. ಹಾಗೆಯೇ ಮರು ಮತ ಎಣಿಕೆ ಮಾಡುವಂತೆ ಸಲ್ಲಿಸಿದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಸುವೇಂದು ಅವರು ಲಂಚ, ಭ್ರಷ್ಟಾಚಾರ ಮತ್ತು ದ್ವೇಷವನ್ನು ಉತ್ತೇಜಿಸುವ ಮುಖಾಂತರ, ಧಾರ್ಮಿಕ ನೆಲೆಗಟ್ಟಿನಲ್ಲಿ ಮತಗಳನ್ನು ಕೇಳುವ ಮೂಲಕ ಹಾಗು ಬೂತ್ ಕ್ಯಾಪ್ಚರ್ ಮೂಲಕ ನಂದಿಗ್ರಾಮದಲ್ಲಿ ಗೆದ್ದಿದ್ದಾರೆಂದು ಆರೋಪಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ, ಎಣಿಕೆಯ ಫಲಿತಾಂಶ, ಮತಗಳ ದಾಖಲೆಗೆ ಪಾಲಿಸಬೇಕಿರುವ ಪಾರ್ಮ್ 17 ಸಿ ಯ ಪಾಲನೆ ಮಾಡುವುದರಲ್ಲಿ ಲೋಪದೋಷಗಳು ಕಂಡುಬಂದಿದೆ. ಈ ಎಲ್ಲಾ ಕಾರಣದಿಂದ ಸುವೇಂದು ಆಯ್ಕೆಯನ್ನು ಅನುರ್ಜಿತಗೊಳಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಭ್ರಷ್ಟಾಚಾರದ ಮೂಲಕ ಸುವೇಂದು ಅವರು ಮಮತಾ ಬ್ಯಾನರ್ಜಿಯ ಗೆಲುವಿನ ಸಾಧ್ಯತೆಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಬ್ಯಾನರ್ಜಿ ಪರ ವಕೀಲರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

Top of Form