ನಾಡಹಬ್ಬ ದಸರಾಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ದಸರಾದ ವಿಶೇಷ ಆಕರ್ಷಣೆ ಎಂದೇ ಕರೆಯಲ್ಪಡುವ ಗಜಪಡೆ ಈಗಾಗಲೇ ತಾಲೀಮು ಶುರು ಮಾಡಿದ್ದು ಆನೆಗಳಿಗೆ ವಿಶೇಷ ಹಾರೈಕೆ ಮಾಡಲಾಗುತ್ತಿದೆ.
ಕಳೆದ ತಿಂಗಳು ಮೈಸೂರಿಗೆ ಆಗಮಿಸಿದ ಗಜಪಡೆ ವಿಶೇಷ ಆಹಾರ ಹಾಗೂ ಹಾರೈಕೆಯನ್ನ ತೂಕವನ್ನ ಹೆಚ್ಚಿಸಿಕೊಂಡಿದ್ದು ಕ್ಯಾಪ್ಟನ್ ಅಭಿಮನ್ಯು ಬರೋಬ್ಬರಿ 230ಕೆಜಿಯನ್ನು ಹೆಚ್ಚಿಸಿಕೊಂಡಿದ್ದಾನೆ.
ಕಳೆದ ತಿಂಗಳು ನಡೆದ ತೂಕ ಪರೀಕ್ಷೆಯಲ್ಲಿ ಅಭಿಮನ್ಯು 4,770 ಕೆಜಿ ತೂಕವಿತ್ತು ಒಂದು ತಿಂಗಳ ನಂತರ 230 ಕೆಜಿ ತೂಕವನ್ನ ಹೆಚ್ಚಿಸಿಕೊಂಡು 5,000 ಸಾವಿರ ಕೆ.ಜಿ ಯಾಗಿರುವುದು ವಿಶೇಷ.

ಇನ್ನು ತಂಡದ ಹಿರಿಯ ಸದಸ್ಯನಾದ ಅರ್ಜುನ ಎಂದಿನಂತೆ ತೂಕದಲ್ಲಿ ಮುಂದಿದ್ದಾನೆ. ಬರೋಬ್ಬರಿ 5950 ಕೆಜಿ ತೂಗುವ ಮೂಲಕ ಮೊದಲ ಸ್ಥಾನದಲ್ಲಿದ್ದಾನೆ. ನಂತರದ ಸ್ಥಾನಗಳಲ್ಲಿ ಗೋಪಾಲಸ್ವಾಮಿ(5,460), ಅಭಿಮನ್ಯು(5,000). ಧನಂಜಯ(4890) ತೂಕವಿರುವ ಮೂಲಕ ನಂತರದ ಸ್ಥಾನದಲ್ಲಿದ್ದಾವೆ.
ಹೆಣ್ಣಾನೆಗಳ ಪೈಕಿ ಕಾವೇರಿ (3,245), ಚೈತ್ರಾ (3,235) ಹಾಗೂ ಲಕ್ಷ್ಮೀ (3,150) ತೂಕವಿದ್ದರು.
ಈ ಕುರಿತು ಮಾತನಾಡಿರುವ ಡಿಸಿಎಫ್ ಡಾ.ಕರಿಕಾಳನ್ ವಿಶೇಷ ಆಹಾರ ನೀಡಿದ ನಂತರ ಆನೆಗಳ ತೂಕ ಹೆಚ್ಚಾಗಿದೆ. ಎರಡನೇ ತಂಡದ ಆನೆಗಳಿಗೆ ಮೊದಲಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನೀಡಲಾಗುವುದು ಕುಶಾಲು ತೋಪಿನ ನಂತರ ಎಲ್ಲಾ 14 ಆನೆಗಳೂ ಬನ್ನಿಮಂಟಪದವರೆಗೂ ನಡಿಗೆ ತಾಲೀಮಿನಲ್ಲಿ ಭಾಗವಹಿಸುತ್ತವೆ ಎಂದು ತಿಳಿಸಿದ್ದಾರೆ.