ಲೋಕಸಭೆ ಚುನಾವಣೆಗೆ (loksabhaelection) ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ (Dr.C.N.AshwathNarayan) ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಚುನಾವಣೆ, ಇಡೀ ದೇಶವೇ ಲೋಕಸಭೆ ಮತದಾನಕ್ಕೆ ಎದುರು ನೋಡ್ತಿದೆ. ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರುವುದು ಜನರ ಇಚ್ಛೆ.
ರಾಜ್ಯದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದ್ದು, ರಾಜ್ಯದ ಜನತೆ, ಬಿಜೆಪಿ (BJP) ಪಕ್ಷ ಚುನಾವಣೆಗೆ ಸಜ್ಜಾಗಿದೆ. ಎಲ್ಲಾ ಕ್ಷೇತ್ರಗಳನ್ನೂ ನಾವು ಗೆಲ್ತೇವೆ. ಕೆಲವು ಕ್ಷೇತ್ರಗಳಲ್ಲಿ ಬಿಕ್ಕಟ್ಟು ಇರಬಹುದು, ಅಭ್ಯರ್ಥಿ ಘೋಷಣೆವರೆಗೆ ಒತ್ತಡವಿರಬಹುದು. ಒಮ್ಮೆ ಅಭ್ಯರ್ಥಿ ಘೋಷಣೆ ಪ್ರಕಟವಾದರೆ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸ್ತೇವೆ. ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿಯಿಂದ ಜಾತ್ಯಾತೀತ ಮತಗಳು ದೂರ ಆಗಬಹುದೆಂಬ ಚರ್ಚೆ ಬಗ್ಗೆ ಮಾತನಾಡಿ, ಎಲ್ಲ ಸಮಯದಾಯಗಳಿಗೂ ನಮ್ಮಲ್ಲಿ ಅವಕಾಶ ಸಿಗಲಿದೆ ಸಿಗಲಿದೆ ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ (Dr.Manjunath) 2-3 ಲಕ್ಷ ಮತಗಳ ಅಂತರದಲ್ಲಿ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶಾಸಕ ಡಾ.ಅಶ್ವಥ್ ನಾರಾಯಣ್, ಬೆಂಗಳೂರು ಗ್ರಾಮಾಂತರ ಇಡೀ ದೇಶದ ಗಮನ ಸೆಳೆಯಲಿದೆ. ಎಲ್ಲರ ಗಮನ ಸೆಳೆಯುವಂತೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಈ ಕ್ಷೇತ್ರದ ಜನತೆಗೆ ಕಾಂಗ್ರೆಸ್ಗೆ (Congress) ಮತ ಹಾಕಲು ಇಷ್ಟ ಇಲ್ಲ. ಬಿಜೆಪಿಗೇ ಜನ ಮತ ಹಾಕ್ತಾರೆ, ಡಾ. ಮಂಜುನಾಥ್ ಗೆಲ್ತಾರೆ ಎಂದಿದ್ದಾರೆ.
ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿ ನಮ್ಮದು ಒಗ್ಗಟ್ಟಿನ ಹೋರಾಟ, ಶಿಸ್ತಿನ ಪಕ್ಷದಲ್ಲಿ ಅದೆಲ್ಲ ಏನು ಇಲ್ಲ. ಪಾರ್ಟಿ ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಆಗಿ ಮಾಡಿದೆ. ನಾವು ಒಗ್ಗಟ್ಟಿನಿಂದ ಹೋಗುತ್ತೇವೆ. ನಾವು ಬೇರೆಯವರ ಒಗ್ಗಟ್ಟಿನ ಬಗ್ಗೆ ಹೇಳುತ್ತೇವೆ. ನಾವೇ ಒಗ್ಗಟ್ಟನಿಂದ ಇಲ್ಲದೆ ಇದ್ರೆ ಹೇಗೆ? ಎಂದು ಮರು ಪ್ರಶ್ನೆ ಮಾಡಿದ್ದಾರೆ.
#Karnataka #bengaluru #loksabhaelection #ashwathnarayan #bjp #jds