ಮೇಕ್ ಇನ್ ಇಂಡಿಯಾದ ಷರತ್ತಿನ ಮೇಲೆ ಕೆಲಸ ಮಾಡಲು ಒಪ್ಪಿಕೊಂಡಾಗ ಮಾತ್ರ ಅವ್ರನ್ನ ಭಾರತಕ್ಕೆ ಸ್ವಾಗತಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನವದೆಹಲಿ : ಕಳೆದ ಕೆಲವು ವರ್ಷಗಳಿಂದ ಭಾರತವನ್ನ ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಅನೇಕ ಪ್ರಯತ್ನಗಳನ್ನ ಮಾಡಿದೆ. ರಕ್ಷಣಾ ತಂತ್ರಜ್ಞಾನದಿಂದ ಆಟೋಮೊಬೈಲ್ ವಲಯದವರೆಗೆ ಅನೇಕ ಬದಲಾವಣೆಗಳು ಕಂಡುಬಂದಿವೆ. ಅಂತಹ ಪರಿಸ್ಥಿತಿಯಲ್ಲಿ, ನಿತಿನ್ ಗಡ್ಕರಿ ಅವರು ಎಲೋನ್ ಮಸ್ಕ್ ಮತ್ತು ಆಟೋಮೊಬೈಲ್ ಕಂಪನಿಯ ಬಗ್ಗೆ ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾದ ಷರತ್ತಿನ ಮೇಲೆ ಕೆಲಸ ಮಾಡಲು ಒಪ್ಪಿಕೊಂಡಾಗ ಮಾತ್ರ ಅವ್ರನ್ನ ಭಾರತಕ್ಕೆ ಸ್ವಾಗತಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವಿಶ್ವದ ಅಗ್ರ ಕಾರು ತಯಾರಕ ಟೆಸ್ಲಾ ಮುಖ್ಯಸ್ಥರ ಬಗ್ಗೆ ಮಾತನಾಡಿದ ನಿತಿನ್ ಗಡ್ಕರಿ, ಮೇಕ್ ಇನ್ ಇಂಡಿಯಾವನ್ನ ಬೆಂಬಲಿಸಿ, ಅವರು ತಮ್ಮ ಕಂಪನಿಯ ಕಾರನ್ನು ಭಾರತದ ಯಾವುದೇ ರಾಜ್ಯದಲ್ಲಿ ತಯಾರಿಸಲು ಬಯಸಿದರೆ, ಅವರನ್ನ ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು. ಇದರಲ್ಲಿ ಭಾರತವು ಅವರಿಗೆ ರಿಯಾಯಿತಿಗಳನ್ನು ಸಹ ನೀಡುತ್ತದೆ. ದೇಶದ ಆಟೋಮೊಬೈಲ್ ಉದ್ಯಮವು ಸುಮಾರು 7.5 ಲಕ್ಷ ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ. ಇನ್ನು ಅದನ್ನ ವಿಶ್ವದ ನಂ.1 ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಅವರು ಬಯಸಿದ್ದಾರೆ ಎಂದು ಸಾರಿಗೆ ಸಚಿವರು ಹೇಳಿದರು.