ರೈತ ವಿರೋಧಿ ಕಾಯ್ದೆಗಳ ವಿಚಾರವಾಗಿ ನಡೆದ ರೈತ ಹೋರಾಟ ಇಲ್ಲಿಗೆ ನಿಂತಿಲ್ಲ. ಇಷ್ಟರಲೇ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುವುದು ಎಂದು ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇದಾ ಪಾಟ್ಕರ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಜನವರಿ 15 ರಂದು ದೆಹಲಿಯಲ್ಲಿ ಬೈಟಕ್ ನಡೆಯಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಬೈಟಕ್ ನಲ್ಲಿ ಮುಂದಿನ ಹೋರಾಟದ ಚರ್ಚೆ ನಡೆಯಲಿದ್ದು, ಕೇಂದ್ರದ ವಿರುದ್ಧ ಹೋರಾಟ ಹೇಗಿರಬೇಕು ಅನ್ನೋದರ ಬಗ್ಗೆ ರೂಪರೇಷ ಸಿದ್ದವಾಗಲಿದೆ ಎಂದು ವಿವರಿಸಿದ್ದಾರೆ.
ದೆಹಲಿ ಗಡಿಯಲ್ಲಿ ರೈತರ ಹೋರಾಟ ಸದ್ಯಕ್ಕೆ ಸ್ಥಗಿತಗೊಂಡಿದೆ. ಆದರೆ ವಾಪಸ್ ಪಡೆದಿಲ್ಲ. ಸದ್ಯದಲ್ಲೇ ರೈತರ ಹೋರಾಟದ ಬಗ್ಗೆ ನಿರ್ಧಾರವಾಗಲಿದ್ದು, ಕೃಷಿ ಕಾರ್ಮಿಕರು ಸಹ ಹೋರಾಟದಲ್ಲಿದ್ದಾರೆ ಎಂದರು.
ಖಾಸಗೀಕರಣ ವಿರುದ್ಧವು ಹೋರಾಡಬೇಕಿದೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಿಂದ ಖಾಸಗೀರಣಕ್ಕೆ ಕೊಂಚ ತಡೆಬಿದ್ದಿದೆ. ಬಿಲ್ಗೆಟ್ಸ್ ಫೌಂಡೆಶನ್, ಮಾಲ್ಮಾರ್ಟ್ ಬರ್ತಿದೆ. ಮುಂದೆ ಈ ಬಗ್ಗೆ ಹೋರಾಡಬೇಕಿದೆ ಎಂದು ಮೇಧಾ ಪಾಟ್ಕರ್ ತಿಳಿಸಿದರು.