ಕೋಲಾರ: ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರದಲ್ಲಿ ಉತ್ತಮ ವಾತಾವಣ ಇದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ನಾವು ಗೆಲ್ಲಿಸಿ ಕಳಿಸುತ್ತೇವೆ ಎಂದು ಸಂಸದ ಕೆಹಚ್ ಮುನಿಯಪ್ಪ ಹೇಳಿದ್ದಾರೆ.
ಇಂದು ಸುದ್ದಿ ಗೋಷ್ಠಿಯಲ್ಲಿ ೨೦೨೩ ರ ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರ ಕುರಿತು ಮಾತನಾಡಿದ ಕೆ ಹೆಚ್ ಮುನಿಯಪ್ಪ, ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಫೈನಲ್ ಆಗಿಲ್ಲ . ರಾಜ್ಯಾದ್ಯಂತ ಪಕ್ಷದ ಪರ ಕೆಲಸ ಮಾಡಿ ಅಂದ್ರೆ ಮಾಡುವೆ ಅಥವಾ ಹೈಕಾಂಡ್ ಸ್ಪರ್ಧಿಸಿ ಎಂದರೆ ಚುನಾವಣೆಗೆ ನಿಲ್ಲುತ್ತೇನೆ ಎಂದರು.
ಹಿಂದಿನ ನೋವನ್ನು ಮರೆತಿದ್ದೇನೆ:
ಬಯಲುಸೀಮೆಯನ್ನು ಮಲೆನಾಡು ವಾತಾವರಣ ಮಾಡುವ ಕನಸು ನನಸು ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ್ರೆ ನಾವೂ ಸಿಎಂ ಆದಂತೆ . ಸಿದ್ದರಾಮಯ್ಯ ಅವರ ಯೋಜನೆಗಳನ್ನು ಮನೆ ಮನೆಗೂ ಹೇಳುತ್ತೇವೆ ಎಂದರು.
ಹಿಂದಿನ ನನ್ನ ನೋವನ್ನು ನಾನು ಮರೆತಿದ್ದೇನೆ. ರಾಜ್ಯ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಗೆಲ್ಲಬೇಕು. ಭಿನ್ನಾಭಿಪ್ರಾಯ ಮಾತುಗಳನ್ನು ಯಾರು ನಂಬಬೇಡಿ. ನಾನು, ಖರ್ಗೆ, ಮಹದೇವಪ್ಪ ಸೇರಿದಂತೆ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು .

ಘಟಬಂಧನ್ ನಾಯಕರನ್ನು ನಾನು ಸುದ್ದಿಗೋಷ್ಠಿಗೆ ಕರೆದಿಲ್ಲ, ಹಾಗಾಗಿ ಬಂದಿಲ್ಲ . ಈಗ ನಾವು ನಗರಗಳಲ್ಲಿ ಚುನಾವಣಾ ಕಾರ್ಯ ಶುರು ಮಾಡಿದ್ದೇವೆ. ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ ಅವರು ಒಬ್ಬರನ್ನು ನೇಮಿಸುತ್ತಾರೆ. ಅವರೇ ಕೋಲಾರ ಕ್ಷೇತ್ರದ ಜನರ ಕಷ್ಟಸುಖಗಳನ್ನು ನೋಡಿಕೊಳ್ಳುತ್ತಾರೆ. ಯಾರನ್ನು ನೇಮಿಸುತ್ತಾರೆಂದು ಸಿದ್ದರಾಮಯ್ಯ ಅವರನ್ನೇ ಕೇಳಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆ. ಹೆಚ್ ಮುನಿಯಪ್ಪ ರಮೇಶ್ ವಿರುದ್ದ ಮುನಿಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ರಮೇಶ್ ಕುಮಾರ್ ಒಂದೇ ಪಕ್ಷದಲ್ಲಿ ಇದ್ದೇವೆ. ಸಮಯ ಸಂದರ್ಭ ಬಂದಾಗ ನಾವು ಮಾತನಾಡುತ್ತೇವೆ. ಇತ್ತೀಚೆಗೆ ಅವರ ಧರ್ಮಪತ್ನಿ ನಿಧನರಾದಾಗ ನಾನು ಹೋಗಿ ಸಂತೈಸಿದ್ದೇನೆ ಕೆ.ಹೆಚ್.ಮುನಿಯಪ್ಪ ಹೇಳಿದರು.
ಬಿಜೆಪಿಯಿಂದ ಅಭಿವೃದ್ಧಿ ಬದಲು ಭ್ರಷ್ಟಾಚಾರ ಹೆಚ್ಚಾಗಿದೆ:
ಬಿಜೆಪಿ ವಿರುದ್ದ ಮಾಜಿ ಸಂಸದ ಕೆಹೆಚ್ ಮುನಿಯಪ್ಪ ವಾಗ್ದಾಳಿ ನಡೆಸಿ, ಬಿಜೆಪಿ ಸರ್ಕಾರದಿಂದ ದೇಶ ಅಭಿವೃದ್ಧಿಯಾಗಿಲ್ಲ. ಬದಲಿಗೆ ಭ್ರಷ್ಟಾಚಾರ ಹೆಚ್ಚಾಗಿದೆ. ರಾಜ್ಯದ ಜನರಿಗೆ ಇದನ್ನು ಮನವರಿಕೆ ಮಾಡುವಲ್ಲಿ ಸಿದ್ದರಾಮಯ್ಯ, ಡಿಕೆಶಿ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ . ಸರ್ಕಾರ 40% ಕಮೀಷನ್ ವಿಚಾರದಲ್ಲಿ ಪ್ರಧಾನಿಗೆ ಒಬ್ಬರು ಮಾತ್ರ ಅರ್ಜಿ ಕೊಟ್ಟಿದ್ದಾರೆ ಎಂದು ಕೊಂಡಿದ್ದೆವು. ಇದೀಗ ಬಿಜೆಪಿ ಶಾಸಕರ ಪುತ್ರ ಇದನ್ನು ರುಜುವಾತು ಮಾಡಿದ್ದಾರೆ. ಕೈಗಾರಿಕೆಗಳನ್ನು ಮುಚ್ಚಿದ್ದಾರೆ, ಕಾರ್ಖಾನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಮರನ್ನು ಒಡೆದು ಕೋಮು ದ್ವೇಷ ಹೆಚ್ಚಿಸುತ್ತಿದ್ದಾರೆ. ಧರ್ಮಗಳನ್ನು ಒಡೆದು ಎಷ್ಟು ದಿನ ರಾಜ್ಯಭಾರ ಮಾಡುತ್ತಾರೆ? ಎಂದು ಕಿಡಿಕಾರಿದರು.

ಕಾಂಗ್ರೆಸ್ ಗೆ ಉತ್ತಮ ಸ್ಪಂದನೆ:
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ. ಈಗ 200 ಯೂನಿಟ್ ವಿದ್ಯುತ್ ಫ್ರೀಯಾಗಿ ಕೊಡುವುದಾಗಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ಬಯಲುಸೀಮೆಗೆ ಕುಡಿಯುವ ನೀರು ಬೇಕು:
ಬಯಲುಸೀಮೆ ಪ್ರದೇಶಕ್ಕೆ ಕುಡಿಯುವ ನೀರಿನ ತರುವ ಕೆಲಸ ಆಗಬೇಕು. ಸಿದ್ದರಾಮಯ್ಯ ಪೂರ್ತಿ ಪ್ರಮಾಣದಲ್ಲಿ ಇದನ್ನ ಮಾಡುವುದಾಗಿ ಹೇಳಿದ್ದಾರೆ. ಮುಖಂಡರು ಮನೆ ಮನೆಗೂ ತೆರಳಿ ಕಾಂಗ್ರೆಸ್ ಬಗ್ಗೆ ಮನವರಿಕೆ ಮಾಡಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಹಗರಣ ನಡೆದಿಲ್ಲ. ರಾಜ್ಯದ ಯಾವುದೇ ವರ್ಗದ ಜನರಿಗೂ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ,
ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ರೈತರ ಸಾಲವನ್ನೂ ಸಹ ಮನ್ನಾ ಮಾಡಿದ್ದರು. ಆದರೆ ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ಈಗಿನ ಬೊಮ್ಮಾಯಿ ಸರ್ಕಾರದಿಂದಲೂ ಸಹ ದಲಿತರಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ಕೆ.ಹೆಚ್ ಮುನಿಯಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು.