ಕರೋನಾ ಇಷ್ಟಕ್ಕೆ ಮುಗಿದಿಲ್ಲ. ಮೂರನೇ ಅಲೆ ಬರುತ್ತೆ ಎನ್ನಲಾಗುತ್ತಿದೆ. ಸರ್ಕಾರವೂ ಇದು ಮೂರನೇ ಅಲೆ ಅಂತ ಒಪ್ಪಿಕೊಂಡಿದೆ. ಸದ್ಯ ಕೋವಿಡ್ ತಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೋವಿಡ್ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿದೆ. ಇತ್ತ ಬಿಬಿಎಂಪಿ ಬಾಗಿಲು ಮುಚ್ಚಿದ್ದ ಸಿಸಿಸಿ (ಕೋವಿಡ್ ಕೇಸ್ ಸೆಂಟರ್) ಗಳನ್ನ ಧೂಳು ಓರೆಸಿ ಮತ್ತೆ ಓಪನ್ ಮಾಡಿದೆ.
ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳುತ್ತಿದ್ದಾರೆ. ಕೊರೋನಾ ಎಲ್ಲಾ ಮುಗಿದ ಅಧ್ಯಾಯ ಅಂತ ಅದೆಷ್ಟೋ ಜನ ಸ್ವಯಂ ವಿಜಯ ಘೋಷಿಸಿಕೊಂಡಿದ್ದರೂ ಸದ್ಯ ರಾಜ್ಯದ ಆರೋಗ್ಯ ಸಚಿವರೇ ಕೊರೋನಾ ಏರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಮೂರನೇ ಅಲೆಯ ಆರಂಭ ಅಂತ ಆರೋಗ್ಯ ಸಚಿವ ಸುಧಾಕರ್ ಘೋಷಿಸಿದ್ದಾರೆ.
ಕೊರೋನಾ ನಿರೀಕ್ಷೆ ಮೀರಿ ಹಬ್ಬುತ್ತಿದೆ. ಒಂದೇ ದಿನಕ್ಕೆ ಏರಿಕೆಯಾದ ಕೇಸ್ ಹಾಗೂ ಪಾಸಿಟಿವಿಟಿ ದರ ಆತಂಕ ಹುಟ್ಟಿಸಿದೆ ಅಂತ ಸಚಿವರು ಹೇಳಿದ್ದಾರೆ. ಇನ್ನೊಂದ್ಕಡೆ ಕೊರೋನಾ ಅಲೆ ಎದುರಿಸಲು ಬಿಬಿಎಂಪಿಯೂ ಸಿದ್ಧತೆ ಆರಂಭಿಸಿದೆ. ನಗರದಲ್ಲಿ ಏಕಾಏಕಿ ಸೋಂಕಿನ ಸಂಖ್ಯೆ ಸಾವಿರ ದಾಟುತ್ತಿದ್ದಂತೆ ಪಾಲಿಕೆ ಮೈಗೊಡವಿದೆ. ಎರಡನೇ ಅಲೆ ಮುಗಿಯುತ್ತಿದ್ದಂತೆ ಬಾಗಿಲು ಮುಚ್ಚಿದ್ದ ಕೋವಿಡ್ ಕೇರ್ ಸೆಂಟರ್ಗಳನ್ನ ಮತ್ತೆ ಪುನರಾರಂಭ ಮಾಡಲು ಬಿಬಿಎಂಪಿ ಮುಂದಾಗಿದೆ.
ಸದ್ಯ ಹಜ್ ಭವನದ ಕೋವಿಡ್ ಕೇರ್ ಸೆಂಟರ್ ಹಾಗೂ ಮಹಾಲಕ್ಷ್ಮೀ ಲೇಔಟ್ನ ಕೋವಿಡ್ ಕೇರ್ ಸೆಂಟರ್ ಕಂಪ್ಲೀಟಾಗಿ ರೆಡಿಯಾಗಿದೆ. ಇನ್ನೊಂದ್ಕಡೆ ನಗರದ ಪ್ರತೀ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಒಂದೊಂದು ಸಿಸಿಸಿ ಆರಂಭಿಸೋದಾಗಿ ಪಾಲಿಕೆ ಘೋಷಿಸಿದೆ.
ಎರಡನೇ ಅಲೆ ತೀವ್ರತೆ ಕಂಡಿರೋ ರಾಜ್ಯ ಸರ್ಕಾರ ಮೂರನೇ ಅಲೆ ವೇಗಕ್ಕೆ ಸುಸ್ತಾದಂತೆ ಕಾಣ್ತಿದೆ. ಇತ್ತ ಜನ ಮತ್ತೆ ಟೈಟ್ ರೂಲ್ಸ್, ಟಫ್ ರೂಲ್ಸ್ ಅನ್ನೋ ನಿರ್ಬಂಧವನ್ನ ಇನ್ನಷ್ಟು ದಿನ ಎದುರಿಸಲೇ ಬೇಕಾದ ಅನಿವಾರ್ಯತೆ ಮತ್ತೆ ಸೃಷ್ಟಿಯಾಗಿದೆ.