ಬೆಂಗಳೂರ ; ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಕೂಡ ನಡೆದಿವೆ. ಸುಮಾರು 26ಕ್ಕೂ ಹೆಚ್ಚು ವಿಪಕ್ಷಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, 2024ರ ಲೋಕಸಭೆ ಚುನಾವಣೆಯ ವೇಳೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನ ಕಟ್ಟಿ ಹಾಕಲು ಬೇಕಾದ ಎಲ್ಲಾ ರೀತಿಯಾದ ರಣತಂತ್ರವನ್ನ ಹೆಣಿಯಲಾಗಿದೆ ಈ ವೇಳೆ ಹೊಸದೊಂದು ಮೈತ್ರಿ ನವ ಭಾರತಕ್ಕೆ ತೆಳೆದುಕೊಂಡಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯವನ್ನ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಈ ವಿಚಾರದ ಕುರಿತು ಮಲ್ಲಿಕಾರ್ಜುನ ಖರ್ಗೆ ಟ್ವಿಟ್ ಮಾಡಿದ್ದು,
” ನಾವು ಒಂದೇ ಧನಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಒಂದುಗೂಡಿದ್ದೇವೆ, ನಮ್ಮ ಹೊಸ ಮೈತ್ರಿಯ ಹೆಸರು ಇಂಡಿಯಾ ( INDIA ;- Indian National Developmental Inclusive Alliance ) ಎಂದು ತಿಳಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್‌ನಲ್ಲಿ ಇನ್ನಷ್ಟು ಮಾಹಿತಿ ನೀಡಿರುವ ಕಾಂಗ್ರೆಸ್ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʼ11 ಸದಸ್ಯರ ಸಮನ್ವಯ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು, ಮಹಾರಾಷ್ಟ್ರದ ಮುಂಬೈನಲ್ಲಿ ಮತ್ತೊಮ್ಮೆ ಭೇಟಿಯಾಗಲಿದ್ದೇವೆ, ಸಭೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ದೆಹಲಿಯಲ್ಲಿ ಪ್ರಚಾರ ನಿರ್ವಹಣೆಗಾಗಿ ಸಚಿವಾಲಯವನ್ನು ಸ್ಥಾಪಿಸಬೇಕು ಮತ್ತು ನಿರ್ದಿಷ್ಟ ಉದ್ದೇಶಗಳಿಗಾಗಿ ಇತರ ಸಮಿತಿಗಳನ್ನು ಸ್ಥಾಪಿಸಬೇಕು.
ಸಭೆಯ ಜಂಟಿ ಹೇಳಿಕೆಯನ್ನು ಇಂದು ಅಂಗೀಕರಿಸಲಾಗಿದೆ. ಬಿಜೆಪಿ ಸರ್ಕಾರವು ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಿದೆ. ಅವರು ಸಂವಿಧಾನವನ್ನು ಬೀಳಿಸಲು ಹೊರಟಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ಉತ್ತುಂಗದಲ್ಲಿದೆ. ಪ್ರತಿಪಕ್ಷಗಳ ವಿರುದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಗಂಭೀರ ಪರಿಸ್ಥಿತಿ. ನಾವು ಇದನ್ನು ಒಗ್ಗಟ್ಟಿನಿಂದ ಹೋರಾಡುತ್ತೇವೆ ಮತ್ತು ನಾವು ಯಶಸ್ವಿಯಾಗುತ್ತೇವೆ, ಇಂಡಿಯಾ ಗೆಲ್ಲಲಿದೆ” ಎಂದು ಟ್ವಿಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಈ ಟ್ವಿಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಬಿಜೆಪಿ ಪಾಲಿಗೆ ಈ ಮಹಾಘಟಬಂಧನ್ ಸದ್ಯಕ್ಕೆ ಈಗ ನುಂಗಲರಾದ ತುತ್ತಾಗಿ ಪರಿಣಮಿಸಿದ್ದು, ಇದನ್ನ ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ಯಾವ ರೀತಿಯಾಗಿ ಹೆಜ್ಜೆಯನ್ನ ಇಡಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.