ನವದೆಹಲಿ:ಶೋ ಆಫ್‌ಗಾಗಿ ನಾವು ರೀಲ್ಸ್ ಮಾಡೋರಲ್ಲ ದುಡಿಯುವ ಜನ ಎಂದು ಕಾಂಗ್ರೆಸ್ ಆರೋಪಕ್ಕೆ ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘರ್ಜಿಸಿದ್ದಾರೆ.ರೈಲ್ವೇ ಅಪಘಾತಗಳ ಬಗ್ಗೆ ಪ್ರತಿಪಕ್ಷಗಳ ಗದ್ದಲಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 58 ವರ್ಷಗಳ ಅಧಿಕಾರದಲ್ಲಿ ಒಂದೇ ಒಂದು ಕಿಲೋಮೀಟರ್‌ಗೂ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ಏಕೆ ಸ್ಥಾಪಿಸಲು ಸಾಧ್ಯವಾಗಲಿಲ್ಲ ಎಂದು ಇಲ್ಲಿ ಕೂಗುತ್ತಿರುವವರಿಗೆ ಕೇಳಬೇಕು ಎಂದು ಹೇಳಿದರು.
#WATCH | While speaking in Lok Sabha, Union Minister for Railways, Ashwini Vaishnaw says, "We are not the people who make reels, we do hard work unlike you people who make reels for show off…"
— ANI (@ANI) August 1, 2024
The railway minister says, "The average working and rest times of Loco pilots are… pic.twitter.com/gL2sFgWWZt
ಸಂಸತ್ತಿನಲ್ಲಿ ಮಾತನಾಡುವಾಗ ಪ್ರತಿಪಕ್ಷಗಳ ಸಂಸದರು ಗದ್ದಲ ಎಬ್ಬಿಸಿದರು. ಇದರಿಂದ ಸಚಿವರು ಕೋಪಗೊಂಡರು. ಇದಾದ ಬಳಿಕ ಸಭಾಪತಿಯನ್ನುದ್ದೇಶಿಸಿ ಮಾತನಾಡುತ್ತಾ ಇದೇನಿದು, ಮಧ್ಯೆ ಮಧ್ಯೆ ಏನು ಬೇಕಾದರೂ ಹೇಳುತ್ತಾರೆ.
ಇಂದು ಅವರು ಪ್ರಶ್ನೆಗಳನ್ನು ಎತ್ತುವ ಧೈರ್ಯ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದಾಗ ಅಪಘಾತದ ಸಂಖ್ಯೆ 0.24 ರಿಂದ 0.19 ಕ್ಕೆ ಇಳಿದಿತ್ತು. ಆದರೆ ಇಂದು 0.19 ರಿಂದ 0.03 ಕ್ಕೆ ಇಳಿದಿದೆ. ಹೀಗಾಗಿ ಈ ಜನರು ಸದನದಲ್ಲಿ ಚಪ್ಪಾಳೆ ತಟ್ಟಬೇಕು ಎಂದರು.
ಈ ದೇಶ ಹೀಗೆ ಸಾಗುತ್ತದೆಯೇ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದ ಅಶ್ವಿನಿ ವೈಷ್ಣವ್, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ತನ್ನ ʼʼಟ್ರೋಲ್ ಆರ್ಮಿʼʼ ಮೂಲಕ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು.
2005 ರಲ್ಲಿ ರೂಪಿಸಲಾದ ನಿಯಮದಿಂದ ಲೋಕೋ ಪೈಲಟ್‌ಗಳ ಸರಾಸರಿ ಕೆಲಸ ಮತ್ತು ವಿಶ್ರಾಂತಿ ಸಮಯವನ್ನು ನಿರ್ಧರಿಸಲಾಗುತ್ತದೆ. 2016 ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿ ಲೋಕೋ ಪೈಲಟ್‌ಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಯಿತು. ಲೊಕೊ ಕ್ಯಾಬ್‌ಗಳು ಹೆಚ್ಚು ಕಂಪಿಸುತ್ತವೆ, ಆದ್ದರಿಂದ 7,000 ಕ್ಕೂ ಹೆಚ್ಚು ಲೊಕೊ ಕ್ಯಾಬ್‌ಗಳು ಹವಾನಿಯಂತ್ರಿತವಾಗಿವೆ ಎಂದು ಸಂಸತ್ತಿನಲ್ಲಿ ಹೇಳಿದರು.