4ನೇ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸ್ಪಷ್ಟನೆ ನೀಡಿದ್ದು, ಕುವೆಂಪು ಪಾಠ ಇರುವ 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಮಾಡಿದ್ದು ನಾವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ಪತ್ರ ಬರೆದಿರುವ ಅವರು, 4ನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕದಲ್ಲಿರುವ ಕುವೆಂಪು ಅವರನ್ನು ಕುರಿತ ಪರಿಚಯವನ್ನು ನನ್ನ ನೇತೃತ್ವದ ಸಮಿತಿಯು ಬರೆದದ್ದೆಂದು ಹೇಳಲಾಗುತ್ತಿದೆ. ಈ ಪರಿಚಯವು ಪಠ್ಯ ಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಬರೆದಿಲ್ಲ. ಇಷ್ಟಕ್ಕೂ ಕುವೆಂಪು ಅವರ ʼಮನುಜ ಮತ ವಿಶ್ವಪಥʼ ಸಂದೇಶದ ಬೆಳಕಿನಲ್ಲಿ ಸಾಗುತ್ತಿರುವ ನಾನು ಮತ್ತು ನನ್ನಂಧವರು ಅವರ ಅರ್ಥಪೂರ್ಣ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ ಎಂದು ಬರೆದಿದ್ದಾರೆ.
ಮುಂದುವರೆದು, ಒಂದು ವಿನಂತಿ : ಪಠ್ಯ ಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆಯೆಳೆಯಲು ಮಾನ್ಯ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕು. ವಿದ್ಯಾಋಥಿಗಳು ಮತ್ತು ಪೋಷಕರಲ್ಲದೇ ಒಟ್ಟು ಜನರಲ್ಲಿ ಸಿಕ್ಷಣ ಕ್ಷೇತ್ರದ ಬಗ್ಗೆ ನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಅಡಕ : ನನ್ನ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಕುವೆಂಪು ಅವರ ಬಗ್ಗೆ ಬರೆದ ಪರಿಚಯವನ್ನು ಮಾಹಿತಿಗಾಗಿ ಲಗತ್ತಿಸಿದ್ದೇನೆ. (10ನೇ ತರಗತಿ ಕನ್ನಡ ಪಠ್ಯ) ಎಂದು ಸ್ಪಷ್ಟಪಡಿಸಿದ್ದರೆ.
