ಚಿತ್ರದುರ್ಗ/ಬೆಂಗಳೂರು.“ಉಪಚುನಾವಣೆಯಲ್ಲೂ ವಿಧಾನಸಭೆ ಚುನಾವಣೆಯಷ್ಟೇ ಆತ್ಮವಿಶ್ವಾಸದಲ್ಲಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಚಿತ್ರದುರ್ಗ ಹಾಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಸೋಮವಾರ ಪ್ರತಿಕ್ರಿಯೆ ನೀಡಿದರು.
ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಈ ಚುನಾವಣೆಯಲ್ಲಿ ನೀವು ಎಷ್ಟು ಆತ್ಮವಿಶ್ವಾಸದಲ್ಲಿದ್ದೀರಿ ಎಂದು ಕೇಳಿದಾಗ ಈ ರೀತಿ ಉತ್ತರಿಸಿದರು. “ಕುಮಾರಸ್ವಾಮಿ ಅವರಿಗೆ ಏನೇನೋ ಮಾಹಿತಿ ಬರುತ್ತಿರುತ್ತವೆ. ನನ್ನ ಜತೆ ಯೋಗೇಶ್ವರ್ ಸಂಪರ್ಕದಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಅವರು ಕನ್ನಡಕ ಹಾಕಿಕೊಂಡು ನೈಟ್ ರೌಂಡ್ಸ್ ಮಾಡಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಕನ್ನಡ ಹಾಕಿಕೊಳ್ಳುವುದು ಹಗಲು ವೇಳೆ ಹಾಗೂ ಓದುವಾಗ ಮಾತ್ರ. ಕನ್ನಡಕ ಹಾಕಿಕೊಂಡು ಯಾರಾದರೂ ನೈಟ್ ರೌಂಡ್ಸ್ ಮಾಡುತ್ತಾರಾ? ಅಶೋಕ್ ಅವರು ನೈಟ್ ರೌಂಡ್ಸ್ ವೇಳೆ ಯಾಕೆ ಕನ್ನಡಕ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ” ಎಂದು ತಿರುಗೇಟು ನೀಡಿದರು.
ಯೋಗೇಶ್ವರ್ ನಡೆ-ನುಡಿ ಕಾದು ನೋಡೋಣ:
ವಿಧಾನ ಪರಿಷತ್ ಸದಸ್ಯತ್ವಕ್ಕೆ ಯೋಗೇಶ್ವರ್ ರಾಜೀನಾಮೆ ಬಗ್ಗೆ ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ.ಮಾಧ್ಯಮ ಪ್ರತಿನಿಧಿಗಳ ಮಾತಿನ ಮೂಲಕ ತಿಳಿದಿದೆ.ಅವರ ಮುಂದಿನ ನಡೆ, ನುಡಿ ಬಗ್ಗೆ ಮುಂದೆ ಕಾದು ನೋಡೋಣ” ಎಂದು ತಿಳಿಸಿದರು.ಯೋಗೇಶ್ವರ್ ಹುಬ್ಬಳ್ಳಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ ಎಂದು ಹೇಳಿದಾಗ, “ಆ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ” ಎಂದರು.
ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಕೇಳಿದಾಗ, “ಅವರ ಪಕ್ಷದ ಸಭೆ ಅವರು ಮಾಡುತ್ತಾರೆ. ಅವರ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರ ಸಭೆ ತಪ್ಪು ಎಂದು ಹೇಳಲು ಸಾಧ್ಯವೇ? ನಾವು ನಿನ್ನೆ ಸಿಎಂ ನಿವಾಸದಲ್ಲಿ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದೇವೆ. ಅವರು ಅದೇರೀತಿ ಸಭೆ ಮಾಡುತ್ತಿದ್ದು,