• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರವೇ ಎದ್ದು ನಿಲ್ಲು ಬೆಂಗಳೂರಿಗರೇ!! ನೀವು ಮಾಡಿದ್ದು ಸರೀನಾ..?

Krishna Mani by Krishna Mani
March 9, 2024
in Top Story, ಕರ್ನಾಟಕ
0
ಬೆಂಗಳೂರಲ್ಲಿ ನೀರಿಲ್ಲ – ವರ್ಕ್ ಫ್ರಮ್ ಹೋಂ ಮಾಡ್ತಿವಿ ಎಂದ ಟೆಕಿಗಳು !
Share on WhatsAppShare on FacebookShare on Telegram

ADVERTISEMENT

-ಕೃಷ್ಣಮಣಿ

ಬೆಂಗಳೂರಿನ ಜನ ಹಣದ ಹಿಂದೆ ಬಿದ್ದು ಎಲ್ಲವನ್ನೂ ಮರೆತುಬಿಡುತ್ತಾರೆ.. ಸಂಬಂಧಗಳಿಗೂ ಬೆಲೆ ಕೊಡದ ಜನ ಕಾಲದ ಜೊತೆಗೆ ಓಡುತ್ತಾರೆ. ಹುಟ್ಟೂರುಗಳಲ್ಲಿ ಹೆತ್ತವರಿದ್ದರೂ ವರ್ಷಕ್ಕೆ ಒಂದೆರಡು ಬಾರಿ ಅಷ್ಟೇ ಭೇಟಿ ನೀಡುವ ಬೆಂಗಳೂರಿನ ಜನರಿಗೆ ಕೇವಲ ಕಾಯಕ ಹಾಗೂ ಬರುವ ಸಂಬಳ ಅಷ್ಟೇ ಮುಖ್ಯ. ಇನ್ನೆಲ್ಲವೂ ಬೆಂಗಳೂರಿಗರಿಗೆ ನಗಣ್ಯ. ಆದರೆ ಯಾವಾಗ ಬುಡಕ್ಕೆ ಬೆಂಕಿ ಬೀಳುತ್ತದೆ ಆಗ ಎದ್ದು ನಿಲ್ಲುವ ಜಾಯಮಾನ ರೂಢಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಜನರ ಬುಡಕ್ಕೆ ಬೆಂಕಿ ಬಿದ್ದಿದೆ. ಈಗ ಬೆಂಗಳೂರಿಗರು ತಮಗೆ ಬಂದಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ವಿರುದ್ಧ ಸೆಟೆದು ನಿಲ್ಲುತ್ತಿದ್ದಾರೆ. ನಮ್ಮ ಕಷ್ಟವನ್ನು ಬಗೆಹರಿಸಿ ಎಂದು ಮನವಿ ಮಾಡುತ್ತಿದ್ದಾರೆ.

ಮಳೆಯಿಲ್ಲದೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿತ್ತು. ಮಂಡ್ಯ ಜಿಲ್ಲೆಯಲ್ಲಿರುವ KRS ಡ್ಯಾಂ ಕಳೆದ ಬಾರಿ ಸಂಪೂರ್ಣವಾಗಿ ತುಂಬಿರಲಿಲ್ಲ. ಆದರೂ ಅನಿವಾರ್ಯವಾಗಿ ಸುಪ್ರೀಂಕೋರ್ಟ್​ ನಿಗದಿ ಮಾಡಿರುವ ನೀರಿನ ಪ್ರಮಾಣವನ್ನು ತಮಿಳುನಾಡಿಗೆ ಬಿಡುಗಡೆ ಮಾಡಲೇಬೇಕಾಯ್ತು. ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ, ಮಂಡ್ಯ, ಮೈಸೂರು, ರಾಮನಗರ ಭಾಗದ ರೈತರು ಪ್ರತಿಭಟನೆ ಆಯೋಜನೆ ಮಾಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ಪ್ರಯತ್ನ ಮಾಡಿದರು, ಕರ್ನಾಟಕ ಬಂದ್​​ಗೂ ಕರೆ ನೀಡಿದ್ದರು. ಆದರೆ ಬೆಂಗಳೂರಿಗರು ಮಾತ್ರ ಕ್ಯಾರೇ ಎನ್ನಲಿಲ್ಲ. ಅನ್ನದಾತರ ಹೋರಾಟಕ್ಕೆ ಸಾಥ್​ ನೀಡುವ ಗೋಜಿಗೆ ಹೋಗಲಿಲ್ಲ. ಕೆಲಸ ಮಾಡಿ ಸಂಬಳ ಎಣಿಸುವುದರಲ್ಲೇ ಬ್ಯುಸಿಯಾಗಿದ್ದರು.

ಕಾವೇರಿ ನದಿಯಲ್ಲಿ ನೀರಿಲ್ಲ, ಕೆಆರ್​ಎಸ್​ ಡ್ಯಾಂ ಖಾಲಿ ಖಾಲಿ. ಹೀಗಿದ್ದರೂ ತಮಿಳುನಾಡಿಗೆ ನೀರು ಬಿಡಬೇಕಾಯ್ತು. ಉತ್ತಮ ಮಳೆಯಾದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಮಳೆಯ ಪ್ರಮಾಣ ಕುಂಠಿತವಾದಾಗ ನೀರು ಬಿಡುವುದು ಸಾಧ್ಯವಿಲ್ಲ. ಸಂಕಷ್ಟ ಸೂತ್ರದ ಅಡಿಯಲ್ಲಿ ಮತ್ತೊಂದು ತೀರ್ಪು ನೀಡಬೇಕು. ಮಳೆ ಬಂದಾಗ ಸಂಪೂರ್ಣ ಪ್ರಮಾಣದ ನೀರನ್ನು ಬಿಡುವುದಕ್ಕೆ ಅಡ್ಡಿಯಿಲ್ಲ. ಮಳೆ ಬಾರದೆ ಬರಗಾಲ ಇದ್ದ ವರ್ಷದಲ್ಲಿ ನೀರನ್ನು ಎಷ್ಟು ಬಿಡಬೇಕು ಎಂದು ಸಂಕಷ್ಟ ಸೂತ್ರ ಮಾಡಬೇಕು ಎಂದು ಕೂಗು ಎದ್ದಿತ್ತು. ಆ ಕೂಗಿದೆ ಬೆಂಗಳೂರು ದನಿಗೂಡಿಸಬೇಕಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಲಶಕ್ತಿ ಸಚಿವರು ಸಭೆ ಮಾಡಿ ಸಂಕಷ್ಟ ಕಾಲದಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನು ನಾಲ್ಕೂ ರಾಜ್ಯಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡಲು ಅವಕಾಶವಿತ್ತು. ಆದರೆ ಬೆಂಗಳೂರಿಗರು ಆಗ ಬ್ಯುಸಿಯಾಗಿದ್ದರು.

ಬೆಂಗಳೂರಿನ ಬಹುತೇಕ ಭಾಗಗಳಿಗೆ ಬೋರ್​ವೆಲ್​ ನೀರು ಬಿಟ್ಟರೂ ಕಾವೇರಿಯಿಂದ ನೀರನ್ನು ಪೂರೈಕೆ ಮಾಡಲಾಗುತ್ತದೆ. ಮಳೆ ನೀರನ್ನು ನಾವು ಅತಿ ಹೆಚ್ಚು ಬಳಕೆ ಮಾಡುತ್ತೇವೆ. ಮಳೆ ಬಾರದೆ ಬರಗಾಲದ ಪರಿಸ್ಥಿತಿ ಎದುರಾದಾಗ ಅಂತರ್ಜಲ ಪ್ರಮಾಣ ಕುಸಿತವಾಗಿ ಬೋರ್​ವೆಲ್​ಗಳು ಬತ್ತಿ ಹೋಗುತ್ತವೆ. ಇದನ್ನು ಅರ್ಥ ಮಾಡಿಕೊಳ್ಳದ ಬೆಂಗಳೂರು ಜನ, ಬಾಯಿಗೆ ಬಂದಂತೆ ಮಾತನಾಡಿದರು. ಕಾಂಗ್ರೆಸ್​ ಪಕ್ಷ ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಿದಾಗ ರಾಜಕೀಯವಾಗಿ ನೋಡಿ ಸುಮ್ಮನಾದರು. ಈಗ ನೀರಿನ ಬವಣೆ ಶುರುವಾಗಿದೆ. ಕೆಆರ್​ಎಸ್​ ಡ್ಯಾಂನಲ್ಲಿ ನೀರಿಲ್ಲ. ಬೋರ್​ವೆಲ್​ಗಳಲ್ಲಿ ಅಂತರ್ಜಲ ಕುಸಿತವಾಗಿ ಬೋರ್​ವೆಲ್​ಗಳಲ್ಲಿ ನೀರು ಬರ್ತಿಲ್ಲ. ಸರ್ಕಾರಕ್ಕೆ ನೀರು ಬೇಕು ನೀರು ಬೇಕು ಎಂದು ಆಗ್ರಹ ಮಾಡಿದರೆ ಎಲ್ಲಿಂದ ತರಲು ಸಾಧ್ಯ..? ಯಾವುದೇ ಒಂದು ಹೋರಾಟ ನಡೆಯುವಾಗ ನಮಗೆ ಸಂಬಂಧಿಸಿಲ್ಲ ಅಂತಾ ಮೌನವಾಗಿ ಇರುವ ಬದಲು ಬೆಂಬಲಿಸಿದ್ದರೆ..! ಸಂಕಷ್ಟ ಸೂತ್ರ ಜಾರಿ ಆಗಿದ್ದರೆ..! ತಮಿಳುನಾಡಿಗೆ ಬಿಡುವ ನೀರಿನಲ್ಲಿ ಕನಿಷ್ಟ 10 TMC ಕಡಿಮೆ ಆಗಿದ್ದರೆ..! ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.. ಅಲ್ಲವೇ..? ಯೋಚಿಸಿ..

​

Previous Post

ತುಮಕೂರು ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ..! ಕ್ಷೇತ್ರವಾರು ಲೆಕ್ಕಾಚಾರ

Next Post

ರಾಮಮಂದಿರ ಬ್ಲಾಸ್ಟ್ ಮಾಡ್ತೀವಿ – ಗರ್ಭಗುಡಿಯಲ್ಲಿ ಸಿಕ್ತು ಬೆದರಿಕೆ ಪತ್ರ

Related Posts

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
0

ನವದೆಹಲಿ:  ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಜನವರಿ 13, 2026 ರಂದು 'ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ ನಿಯಮಾವಳಿಗಳು, 2026' (Promotion of Equity in...

Read moreDetails
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

February 1, 2026
ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

February 1, 2026
Next Post
ರಾಮಮಂದಿರ ಬ್ಲಾಸ್ಟ್ ಮಾಡ್ತೀವಿ – ಗರ್ಭಗುಡಿಯಲ್ಲಿ ಸಿಕ್ತು ಬೆದರಿಕೆ ಪತ್ರ

ರಾಮಮಂದಿರ ಬ್ಲಾಸ್ಟ್ ಮಾಡ್ತೀವಿ - ಗರ್ಭಗುಡಿಯಲ್ಲಿ ಸಿಕ್ತು ಬೆದರಿಕೆ ಪತ್ರ

Please login to join discussion

Recent News

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?
Top Story

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

by ಪ್ರತಿಧ್ವನಿ
February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

February 2, 2026
ನೇಲ್ ಕಟ್ಟರ್ ನಲ್ಲಿ ಈ ಹೋಲ್ ಯಾಕೆ ಇರುತ್ತದೆ ಗೊತ್ತೆ ?

ನೇಲ್ ಕಟ್ಟರ್ ನಲ್ಲಿ ಈ ಹೋಲ್ ಯಾಕೆ ಇರುತ್ತದೆ ಗೊತ್ತೆ ?

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!