ಮಂಡ್ಯ: ನೀರಿನ ಪೈಪ್ ಲೈನ್ ಒಡೆದು ಭಾರೀ ಎತ್ತರದ ಕಾರಂಜಿ ನಿರ್ಮಾಣವಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.ಮಂಡ್ಯದ ಮಳವಳ್ಳಿ ತಾಲೂಕಿನ ಗುಂಡಾಪುರ ಬಳಿ ನೀರಿನಪೈಪ್ ಒಡೆದು ರಭಸದಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಿದೆ. ಈ ಭಾರೀ ಎತ್ತರದ ನೀರಿನ ಕಾರಂಜಿ ನೋಡಲು ಸುತ್ತಮುತ್ತಲ ಗ್ರಾಮದ ಜನ ಆಗಮಿಸಿದ್ದಾರೆ.
TK ಹಳ್ಳಿಯಿಂದ ಬೆಂಗಳೂರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್ ಲೈನ್ ಇದಾಗಿದ್ದು, ಪೈಪ್ ಲೈನ್ ಒಡೆದು ಭಾರೀ ಪ್ರಮಾಣದ ನೀರು ಪೋಲಾಗಿದೆ. ಪೈಪ್ ಲೈನ್ ಒಡೆದಿರುವ ಕಾರಣ ಬೆಂಗಳೂರಿಗೆ ನೀರು ಸರಬರಾಜು ಸ್ಥಗಿತಗೊಂಡಿರುವ ಸಾಧ್ಯತೆಗಳಿವೆ.
ಭಾರೀ ಎತ್ತರದ ನೀರಿನ ಕಾರಂಜಿ ನೋಡಲು ಆಗಮಿಸಿದ ಸುತ್ತಮುತ್ತಲ ಗ್ರಾಮದ ಜನ.ಸುದ್ದಿ ತಿಳಿದ ಆಗಮಿಸದ ಜಲಮಂಡಳಿ ಅಧಿಕಾರಿಗಳು,ಮತ್ತು ಸಿಬ್ಬಂದಿಗಳಿಂದ ದುರಸ್ತಿ ಕಾರ್ಯ.