• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅವಗಣನೆಗೆ ಒಳಗಾಯಿತೇ ಟಿ.ಬಿ?

ಫಾತಿಮಾ by ಫಾತಿಮಾ
June 7, 2022
in ದೇಶ
0
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅವಗಣನೆಗೆ ಒಳಗಾಯಿತೇ ಟಿ.ಬಿ?
Share on WhatsAppShare on FacebookShare on Telegram

ಕೋವಿಡ್-19 ಸಾಂಕ್ರಾಮಿಕದ ಮೂರು ಸತತ ಅಲೆಗಳು ಜಾಗತಿಕವಾಗಿ ಮತ್ತು ಭಾರತದಾದ್ಯಂತ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.  ಆರ್ಥಿಕತೆ, ದೈನಂದಿನ ಜೀವನ ಮತ್ತು ನಮ್ಮ ಆರೋಗ್ಯ ಸೇವೆಗಳ ಮೇಲೆ‌‌ ಅದು ಬೀರಿರುವ ಪರಿಣಾಮ ಅಪಾರ. State with legalized gambling https://myhomes.tv/how-much-money-do-you-get-in-casino-heist/ our reviews and rankings are based on thorough testing and extensive research, many players like to employ a set betting pattern when they play Roulette.   ಅಲ್ಲದೆ ಹಲವು ಸಂದರ್ಭಗಳಲ್ಲಿ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಮ್ಮ ಪ್ರಯತ್ನಗಳು ಇತರ ಕಾಯಿಲೆಗಳಿಗೆ ದೊರೆ ಬೇಕಾದ ಆರೋಗ್ಯ ಸೇವೆಗಳ‌ ಮೇಲೂ‌‌ ಪರಿಣಾಮ‌ ಬೀರಿದೆ.

ADVERTISEMENT

ಅದರಲ್ಲೂ ಕ್ಷಯ ರೋಗ ಮತ್ತು ಅದರ ಆರೈಕೆಯ ಮೇಲೆ ಕೋವಿಡ್ ಬೀರಿರುವ ಪರಿಣಾಮ ಅಪಾರ.  ಕೋವಿಡ್‌ನ ಮೊದಲ ಎರಡು ಅಲೆಗಳು ಟಿಬಿ ರೋಗನಿರ್ಣಯ ಮತ್ತು ಚಿಕಿತ್ಸಾ ಸೇವೆಗಳ ಮೇಲೆ ತೀವ್ರವಾಗಿ ಪ್ರಭಾವ ಬೀರಿದವು. The trend is driven largely https://casillascontracting.us/letra-da-musica-casino-boulevard-rosa-de-saron/ by historically familiar desire for states to raise revenue without increasing tax rates.   2019 ಮತ್ತು 2020 ರ ನಡುವೆ ಟಿಬಿ ಪ್ರಕರಣಗಳ ವಾರ್ಷಿಕ ಅಧಿಸೂಚನೆಯಲ್ಲಿ ಭಾರತವು 25% ಸಾಪೇಕ್ಷ ಕಡಿತವನ್ನು ಕಂಡಿದೆ. ಇದರರ್ಥ ನಾವು ಲಕ್ಷಗಟ್ಟಲೆ ಟಿಬಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಎಡವಿದ್ದೇವೆ.  ಜೂನ್ 2020 ರಲ್ಲಿ ಟಿಬಿ ಚಿಕಿತ್ಸೆಗಾಗಿ ನೋಂದಾಯಿಸಿದ ರೋಗಿಗಳ ಪ್ರಮಾಣದಲ್ಲಿ‌45% ನಷ್ಟು ಕುಸಿತ ಕಂಡುಬಂದಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಡೇಟಾ ಅಂದಾಜಿಸಿದೆ. ಟಿಬಿ ಪೀಡಿತ ವ್ಯಕ್ತಿಗಳು ಸಕಾಲಿಕ ಚಿಕಿತ್ಸೆ  ಮತ್ತು ಚಿಕಿತ್ಸಾ ನಂತರದ ಆರೈಕೆಯನ್ನೂ‌ ಕೋವಿಡ್ ಸಂದರ್ಭದಲ್ಲಿ ಪಡೆದುಕೊಳ್ಳಲಾಗಿರಲಿಲ್ಲ.

ಟಿಬಿ ಚಿಕಿತ್ಸೆಯ ಮೇಲೆ ಕೋವಿಡ್ ವ್ಯತಿರಿಕ್ತ ಪರಿಣಾಮ

ಟಿಬಿ ಚಿಕಿತ್ಸೆಯು ದೀರ್ಘವಾದಿಯಾಗಿರುತ್ತದೆ, ಅದು ಆರು ತಿಂಗಳಿಂದ 24 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.  ಕ್ಷಯ ರೋಗಿಗಳು ಸಂಪೂರ್ಣ ಗುಣಮುಖವಾಗಲು ಒಂದು ಡೋಸ್ ಅನ್ನೂ ಕಳೆದುಕೊಳ್ಳದೆ ಚಿಕಿತ್ಸೆಯನ್ನು ಪೂರ್ಣಗೊಳಿಸಬೇಕು. ವಾಕರಿಕೆ, ಮಾನಸಿಕ ಬದಲಾವಣೆಗಳು, ಸಂಭವನೀಯ ದೃಷ್ಟಿ ದುರ್ಬಲತೆ ಮತ್ತು ಶ್ರವಣ ನಷ್ಟ ಮತ್ತು ಮಾನಸಿಕ ಆರೋಗ್ಯದ ಅಡ್ಡ ಪರಿಣಾಮಗಳಂತಹ ಅನೇಕ ಅಡ್ಡಪರಿಣಾಮಗಳು ಈ ಚಿಕಿತ್ಸೆಯ ಜೊತೆಯಲ್ಲೇ ಬರುತ್ತವಾದ್ದರಿಂದ‌ ಹೆಚ್ಚಿನ ರೋಗಿಗಳು ಚಿಕಿತ್ಸೆಗೊಳಗಾಗಲು ಒಪ್ಪುವುದಿಲ್ಲ. ಇದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ  ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಕೋವಿಡ್ ಚಿಕಿತ್ಸೆಯೆಡೆ ತಿರುಗಿಸುವುದರೊಂದಿಗೆ TB ಪೀಡಿತ ವ್ಯಕ್ತಿಗಳ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಾರ್ವಜನಿಕ ಆರೋಗ್ಯ ವಲಯಕ್ಕೆ ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಖಾಸಗಿ ವಲಯದಲ್ಲೂ ಆರೋಗ್ಯ ಸಿಬ್ಬಂದಿಗಳು ಕೋವಿಡ್ -19 ಮೇಲೆ ಕೇಂದ್ರೀಕೃತವಾಗಿದ್ದುದರಿಂದ, ಕ್ಷಯ ರೋಗಿಗಳು ಆಗಾಗ್ಗೆ ತಮ್ಮ  ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ‌ ಕೋವಿಡ್-19 ಆದ್ಯತೆಯಾಗಿದ್ದುದರಿಂದ, ಟಿಬಿ ಇರುವ ವ್ಯಕ್ತಿಗಳು ಸಲಹೆ, ಚಿಕಿತ್ಸೆ ಮತ್ತು ಪರೀಕ್ಷೆಗಳಿಗಾಗಿ ಕಾಯಬೇಕಾಗಿತ್ತು.

ಮುಂದೇನು ಮಾಡಬಹುದು?

ಕೋವಿಡ್‌ನಿಂದಾಗಿ ಸ್ಥಗಿತಕೊಂಡಿರುವ ಟಿಬಿ ನಿರ್ಮೂಲನಾ ಕಾರ್ಯಕ್ರಮವನ್ನು ಮುಂದುವರೆಸುವುದಕ್ಕಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ‘ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಪ್ರೋಗ್ರಾಂ’ಗೆ  ಹೊಸ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಈ ಯೋಜನೆಯು ಟಿಬಿ ಆರೈಕೆಯನ್ನು ಮರಳಿ ಟ್ರ್ಯಾಕ್‌ಗೆ ತರಲು ಗಮನಹರಿಸಲು, ನಾವು ಎದುರಿಸಿದ ನಷ್ಟಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಟಿಬಿ ಆರೈಕೆಯಲ್ಲಿ ಭವಿಷ್ಯದ ಅಡೆತಡೆಗಳನ್ನು ಕಡಿಮೆ ಮಾಡಲು  ನಮಗೆ ಅನುಕೂಲವಾಗುವಂತಿರಬೇಕು.

ಕೋವಿಡ್ ರೋಗವು ಟಿಬಿ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ಲಭ್ಯವಾಗುವುದನ್ನು ತಡೆಯುತ್ತಿದೆ. ಆದ್ದರಿಂದ ರೋಗನಿರ್ಣಯ ಮತ್ತು ಉಚಿತ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸಮುದಾಯದ ನೆಲೆಯಲ್ಲಿ ತಲುಪಿಸಬೇಕಾಗಿದೆ. The current rise of Islamism throughout the Muslim world, instantly becomes boring and random. https://myhomes.tv/meilleur-bonus-de-bienvenue-casino-en-ligne/   ಜೊತೆಗೆ ಟಿಬಿ ಚಿಕಿತ್ಸೆಯಲ್ಲಿ ವಿಶ್ವಾಸಾರ್ಹ ಮತ್ತು ನಿಖರವಾದ ಸಂವಹನದ ಅಗತ್ಯವಿದ್ದು ರೋಗಿಗಳಿಗೆ ಅವರ ಚಿಕಿತ್ಸೆಯ ಬಗ್ಗೆ ಮತ್ತು ಯಾವುದೇ ಸಂಬಂಧಿತ ಸವಾಲುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ತಿಳಿಸುವ  ಸಮುದಾಯ ಉದ್ದೇಶಿತ ಕಾರ್ಯಕ್ರಮಗಳನ್ನು ಸರ್ಕಾರವು ಪ್ರಾರಂಭಿಸಬೇಕು.

ಸರ್ಕಾರದ ಪಾತ್ರದ ಜೊತೆಗೆ ಇಲ್ಲಿ ರೋಗಿಯ ಸಹಕಾರವೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  ಕೋವಿಡ್-19ನಿಂದಾಗಿ ಆರೋಗ್ಯ ಕಾರ್ಯಕರ್ತರು ಅಲಭ್ಯರಾದರೆ, ಟಿಬಿ ಪೀಡಿತ ವ್ಯಕ್ತಿಗಳ ಮೂಲಭೂತ ಪ್ರಶ್ನೆಗಳನ್ನು ಸ್ಥಳೀಯ ನೆಟ್‌ವರ್ಕ್‌ಗಳ ಮೂಲಕ ದೂರದಿಂದಲೇ ಪರಿಹರಿಸಬಹುದು. ‘ಸರ್ವೈವರ್ಸ್ ಎಗೇನ್ಸ್ಟ್ ಟಿಬಿ’ ಯು ಟಿಬಿ ರೋಗಿಗಳಿಗೆ ಸಾರ್ವಜನಿಕ ಆರೋಗ್ಯ ಮಾಹಿತಿಯನ್ನು ಒದಗಿಸಲು ವರ್ಚುವಲ್ ಹೆಲ್ಪ್‌ಡೆಸ್ಕ್ ಅನ್ನು ನಡೆಸುತ್ತಿದ್ದು  ಲಾಕ್‌ಡೌನ್ ಸಮಯದಲ್ಲಿ  ಅನೇಕರಿಗೆ ಉಪಯುಕ್ತವಾಗಿದೆ.

ಇವೆಲ್ಲವುಗಳ ಜೊತೆ ರೋಗಿಗಳಿಗೆ ಮತ್ತು ಕುಟುಂಬಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು ಈ ಸಮಯದಲ್ಲಿ ನಿರ್ಣಾಯಕವಾಗಿದೆ. Book of Dead is one of the most trending games you will find at an online casino and it is available for https://www.fontdload.com/how-do-you-play-craps-at-casino/ you to play on LeoVegas.   ರೋಗಿಗಳಿಗೆ ಸಾಕಷ್ಟು ತಿನ್ನಲು ಇಲ್ಲದಿದ್ದರೆ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ, ವಿಶೇಷವಾಗಿ ಟಿಬಿ ಮತ್ತು ಈಗ ಕೋವಿಡ್ ಎರಡೂ ಕಾರಣಗಳಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿರುವಾಗ ಅವರನ್ನು ಬೆಂಬಲಿಸುವ ಒಂದು ಮಾರ್ಗವೆಂದರೆ ಅಸ್ತಿತ್ವದಲ್ಲಿರುವ ಟಿಬಿ ಪೌಷ್ಟಿಕಾಂಶ ಯೋಜನೆಯಾದ ನಿಕ್ಷಯ್ ಪೋಶನ್ ಯೋಜನೆ ಅಡಿಯಲ್ಲಿ ಮಾಸಿಕ ಧನವಾದ 500 ರೂ.ಗಳಿಂದ ಕನಿಷ್ಠ 2,000 ರೂಕ್ಕೆ ಏರಿಸುವುದು.

ಕಳಂಕ ತೊಡೆಯುವುದು

ಟಿಬಿಯು ಮಹಿಳೆಯರಿಗಿಂತ ಹೆಚ್ಚು ಪುರುಷರ ಮೇಲೆ ಪರಿಣಾಮ ಬೀರುತ್ತದೆ‌ ಆದ್ದರಿಂದ ಮಹಿಳೆಯರು ಮತ್ತು LGBTQIA++ ವ್ಯಕ್ತಿಗಳು ಕಿರುಕುಳವನ್ನು ಎದುರಿಸುವ ಮತ್ತು ಕಳಪೆ ಆರೈಕೆಯನ್ನು ಪಡೆಯುವ ಸಾಧ್ಯತೆಯಿದೆ. ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಪ್ರೋಗ್ರಾಂನಿಂದ ಜೆಂಡರ್ ರೆಸ್ಪಾನ್ಸಿವ್ ಫ್ರೇಮ್‌ವರ್ಕ್ ಹೊರಗಿಡಲಾಗಿದೆ.  ನಾವು ವಿಭಿನ್ನ ಲಿಂಗ ಮತ್ತು ಲೈಂಗಿಕ ಗುರುತಿನ ವ್ಯಕ್ತಿಗಳನ್ನು ಅವರ ಟಿಬಿ ಆರೈಕೆಯ ಅಗತ್ಯತೆಗಳ ಕುರಿತು ಸಮಾಲೋಚಿಸಬೇಕು ಮತ್ತು ಟಿಬಿ ಆರೈಕೆಯನ್ನು ಎಲ್ಲರಿಗೂ ಒಳಗೊಳ್ಳುವಂತೆ ಮತ್ತು ಲಿಂಗ-ಪ್ರತಿಕ್ರಿಯಾತ್ಮಕವಾಗಿರುವಂತೆ  ಪರಿಷ್ಕರಿಸಬೇಕು.

ಬಹುಮುಖ್ಯವಾಗಿ ನಾವು ಟಿಬಿ ಮತ್ತು ಅದರ ಸಂಬಂಧಿತ ಕಳಂಕ ಮತ್ತು ತಾರತಮ್ಯವನ್ನು ತೊಡೆಯಲು ಪ್ರಯತ್ನಿಸಬೇಕಾಗಿದೆ. Although you cannot withdraw the bonus amount, however, it can be used to make some big https://casillascontracting.us/ballys-las-vegas-hotel-casino-review/ bucks. ಇದು  ರೋಗಿಗಳ ಉದ್ಯೋಗ, ಕುಟುಂಬ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ.  ಟಿಬಿಯನ್ನು ತೊಡೆದುಹಾಕಲು ಬಯಸುತ್ತೇವೆ ಎಂದಾದರೆ ನಾವು ಈ ಕಳಂಕವನ್ನು ಮೊದಲು ಸಕ್ರಿಯವಾಗಿ ತೊಡೆದುಹಾಕಬೇಕಾಗಿದೆ.

ಎರಡೂ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವುದು ಒಂದು ಮಹಾನ್ ಕಾರ್ಯ ಎಂಬುದನ್ನು ನಾವು ಮರೆಯಬಾರದು.  ಟಿಬಿ ಚಿಕಿತ್ಸಾ ಸೇವೆಗಳನ್ನು ಮರಳಿ ಟ್ರ್ಯಾಕ್‌ಗೆ ತರಲು ರೋಗಿಗಳು, ಸರ್ಕಾರಿ ವಲಯ, ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ನಡುವೆ ಒಂದು ಧನಾತ್ಮಕ ಪಾಲುದಾರಿಕೆ ತುರ್ತಾಗಿ ಅಗತ್ಯವಿದೆ.  ಏಕೆಂದರೆ ಟಿಬಿಯಿಂದ ಕಳೆದುಕೊಳ್ಳುವ ಪ್ರತಿಯೊಂದು ಜೀವವೂ ನಾವು ಉಳಿಸಿಕೊಳ್ಳಬಹುದಾದ ಜೀವವಾಗಿದೆ.

ಮೂಲ: ಚಾಪಲ್ ಮೆಹ್ರಾ ಮತ್ತು ಅಶ್ನಾ ಅಶೇಶ್, ಸ್ಕ್ರೋಲ್. ಇನ್

(ಚಾಪಲ್ ಮೆಹ್ರಾ ಅವರು ಸಾರ್ವಜನಿಕ ಆರೋಗ್ಯ ತಜ್ಞರಾಗಿದ್ದು, ಅವರು ಕ್ಷಯ ಮತ್ತು HIV ಯಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಕೆಲಸ ಮಾಡುತ್ತಾರೆ. ಮತ್ತು ಅಶ್ನಾ ಅಶೇಶ್ MDR TB ಭಾದಿಸಿ ಬದುಕುಳಿದವರು, ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ಮತ್ತು ವಕೀಲರು)

Tags: Covid 19ಕರೋನಾಕೋವಿಡ್-19ಟಿ.ಬಿನರೇಂದ್ರ ಮೋದಿ
Previous Post

ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !

Next Post

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ : ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಿದ್ದತೆ!

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
Next Post
ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ : ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಿದ್ದತೆ!

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ : ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಿದ್ದತೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada