ಧಾರವಾಡ : ವಕ್ಪ್ ವಿಚಾರದಲ್ಲಿ ಬಿಜೆಪಿ ಮತ್ತೇ ಹೋರಾಟಕ್ಕೆ ಇಳಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಕಾಲದಲ್ಲೂ ಕೂಡ ವಕ್ಪ್ ವಿಚಾರವಾಗಿ ನೋಟಿಸ್ ಕೊಡಲಾಗಿದೆ ಎಂದಿದ್ದಾರೆ.
ವಕ್ಪ್ ನೋಟಿಸ್ ಕೊಟ್ಟಂತೆಯೇ ಮುಜರಾಯಿ ಇಲಾಖೆಯಿಂದಲೂ ನೋಟಿಸ್ ಕೊಡುತ್ತಾರೆ. ಈಗಾಗಲೇ ಅದರ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಟ್ಟಾಗಿದೆ. 2014 ರ ಬಿಜೆಪಿ ಪ್ರಣಾಳಿಕೆ ಇವರು ಓದಿದ್ದಾರಾ..? ಬಿಜೆಪಿಯವರಿಗೆ ಅದರಲ್ಲಿ ಏನಿದೆ ಎಂದು ಕೇಳಿ ಎಂದು ಸವಾಲು ಹಾಕಿದ್ದಾರೆ.
ವಕ್ಫ್ ಬಿಟ್ರೆ ಅವರಿಗೆ ಬೇರೆ ಏನು ಅವರಿಗೆ ವಿಷಯ ಇಲ್ಲಾ. ಯುಪಿಯಲ್ಲಿ ಐಸಿಯುದಲ್ಲಿ ಇದ್ದ 10 ಮಕ್ಕಳು ಸಾವನ್ನಪ್ಪಿವೆ. ಇದರ ಬಗ್ಗೆ ಮಾತಾಡೋದು ಬೇಡವಾ..? ದೇಶದಲ್ಲಿ ಈಗ ಇರೊದು ಬರ್ನಿಂಗ್ ಇಶ್ಯು ಏನು..? ವಕ್ಪ್ ಬಿಟ್ಟರೆ ಬೇರೆ ಏನು ಬರ್ನಿಂಗ್ ಇಶ್ಯೂ ಇಲ್ಲವಾ..? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರಿಗೆ ಸಮಸ್ಯೆ ಆಗುವ ವಿಷಯವೇ ಅವರಿಗೆ ಬೇಡವಾಗಿದೆ. ದಿನಾ ಬೆಳಗಾದರೆ ಹಿಂದೂ ಮುಸ್ಲಿಂ ಅಂತಾ ಹೇಳುತ್ತ ತಿರುಗಾಡೋದು ಮಾಮೂಲಾಗಿದೆ. ಬಿಜೆಪಿಯವರಿಗೆ ಮಾತನಾಡೊಕೆ ಬೇರೆ ವಿಷಯವೇ ಇಲ್ಲಾ. ಮಹಾರಾಷ್ಟ್ರ ಚುನಾವಣೆ ಮೇಲೆ ವಕ್ಪ್ ವಿಚಾರ ಪ್ರಭಾವ ಬೀರಬಹುದಾ ಅನ್ನೋ ವಿಚಾರಕ್ಕೆ ಎಲೆಕ್ಟ್ರಾಲ್ ಬಾಂಡ್ ಕೂಡಾ ವಿಷಯ ಅಲ್ಲವಾ..? ಎಂದು ತಿರುಗೇಟು ನೀಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚು ರೈತರು ಮಹಾರಾಷ್ಟ್ರದಲ್ಲೇ ಸಾವಾಗಿದ್ದು, ಅಲ್ಲೇ ಆತ್ಮಹತ್ಯೆ ಆಗಿದ್ದು, ಈ ವಿಚಾರ ಚರ್ಚೆ ಆಗಿಲ್ಲಾ. ಸ್ಟಾಕ್ ಎಕ್ಸಚೆಂಜ್ ಬಿದ್ದಿದೆ, ಅದರ ಪರಿಣಾಮ ಚುನಾವಣೆ ಮೇಲೆ ಆಗಲ್ಲಾ. ಮುಂಬೈ ಐಐಟಿಯ ಶೇಕಡ 38ರಷ್ಟು ಯುವಕರಿಗೆ ಕೆಲಸ ಸಿಕ್ಕಿಲ್ಲ, ಮದ್ರಾಸ್ ಐಐಟಿಯವರಿಗೆ ಕೆಲಸ ಸಿಕ್ಕಿಲ್ಲ. ಇದು ಪರಿಣಾಮ ಆಗಲ್ಲ. ಬರೀ ವಕ್ಫ್ ಅಂತದ್ದೇ ಮಾತಾಡೋದು, ಬೇರೆ ವಿಷಯವೇ ಇಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.