ರಾಜ್ಯವ್ಯಾಪಿ ವಕ್ಫ್ (Waqf board) ಕಿಚ್ಚು ಹೆಚ್ಚಾಗಿದೆ. ವಿಜಯಪುರದಿಂದ ಆರಂಭವಾದ ವಕ್ಫ್ ಆಸ್ತಿ ವಿವಾದ ಇದೀಗ ಒಂದೊಂದೇ ಜಿಲ್ಲೆಗಳಲ್ಲಿ ಕಿಡಿ ಹೊತ್ತಿಸುತ್ತಿದೆ. ರೈತರ ಜಮೀನು, ಮಠ ಮಂದಿರದ ಜಾಗಗಳು, ಎಲ್ಲವನ್ನೂ ತನ್ನದೆಂದು ಪ್ರತಿಪಾದಿಸುತ್ತಿರುವ ವಕ್ಫ್ ಬೋರ್ಡ್, ಈಗ ಸರ್ಕಾರಿ ಜಾಗದಲ್ಲಿದ್ದ ಕೆರೆಯನ್ನು ಗುಳುo ಮಾಡಿರುವ ಘಟನೆ ಹಾಸನ ಜಿಲ್ಲೆ (Hassan, arakalgudu) ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.

ಇಲ್ಲಿ ಈ ಹಿಂದಿನ ನೂರಾರು ವರ್ಷಗಳಿಂದ ಅರಕಲಗೂಡು ಪಟ್ಟಣದಲ್ಲಿರುವ ಗೌರಿಕಟ್ಟೆಗೆ (ಗೌರಿಕೆರೆ) ಸೇರಿದ 4 ಎಕರೆ 10 ಗುಂಟೆ ಜಾಗ ಇದೀಗ ವಕ್ಫ್ ಬೋರ್ಡ್ ಹೆಸರಿಗೆ ಸೇರಿದೆ ಎಂದು ಪಹಣಿಯಲ್ಲಿ ಉಲ್ಲೇಖೀಸಲಾಗಿದೆ.
ಸದ್ಯ ವಕ್ಫ್ ಬೋರ್ಡ್ ತನ್ನದೆಂದು ಪ್ರತಿಪಾದಿಸುತ್ತಿರುವ ಈ ಜಾಗ ಅರಕಲಗೂಡು ಪಟ್ಟಣದ ವ್ಯಾಪ್ತಿಯಲ್ಲೇ ಇರುವ ಕೆರೆಯ ಜಾಗವಾಗಿದ್ದು, ಈಗಿನ ಮಾರುಕಟ್ಟೆ ಮೌಲ್ಯಕ್ಕೆ ದುಬಾರಿ ಬೆಲೆ ಬಾಳುತ್ತದೆ. ಹೀಗಾಗಿ ವಕ್ಫ್ ಬೋರ್ಡ್ ಹೆಸರಿಗೆ ಈ ಕೆರೆ ಜಾಗ ಸೇರಿರುವುದು ಕೇಳಿ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.











