ಕೇಂದ್ರದಲ್ಲಿ ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಯನ್ನು (waqf amendment act) ಸಂಸತ್‌ನಲ್ಲಿ ಅಂಗೀಕಾರಗೊಳಿಸುವಲ್ಲಿ ಕೇಂದ್ರ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಲೋಕಸಭೆ (Lok sabha) ಬಳಿಕ ರಾಜ್ಯಸಭೆಯಲ್ಲೂ (Rajya sabha) ಮಹತ್ವದ ಮಸೂದೆ ಅಂಗೀಕಾರಗೊಂಡಿದೆ.

ಹೌದು ಲೋಕಸಭೆಯಲ್ಲಿ ಏಪ್ರಿಲ್ 2ರಂದು ಮಂಡನೆಯಾದ ಮಸೂದೆ ಸುದೀರ್ಘ ಚರ್ಚೆ ಗದ್ದಲ ಗಲಾಟೆಯ ನಂತರ ಅಂಗೀಕೃತಗೊಂಡಿತ್ತು.ಆ ನಂತರ ನಿನ್ನೆ ಮಧ್ಯರಾತ್ರಿಯವರೆಗೆ ರಾಜ್ಯಸಭೆಯಲ್ಲಿ ಚರ್ಚೆಗಳು ಈ ಮೋಸೂದೆಯ ಕುರಿತು ಚರ್ಚೆ ನಡೆದಿದೆ.ಆ ಬಳಿಕ 1.30ರ ಸುಮಾರಿಗೆ ಮತದಾನಕ್ಕೆ ಹಾಕಲಾಯ್ತು.

ಅಂತಿಮವಾಗಿ ರಾತ್ರಿ 2.30ರ ಹೊತ್ತಿಗೆ ಮತದಾನದ ಫಲಿತಾಂಶವನ್ನು ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಕರ್ ಪ್ರಕಟಿಸುವ ಮೂಲಕ ಮಸೂದೆ ಪಾಸ್ ಆಗಿರುವುದಾಗಿ ಘೋಷಣೆ ಮಾಡಿದ್ದಾರೆ.ಮಸೂದೆಯ ಪರವಾಗಿ 128 ಮತಗಳು, ವಿರುದ್ಧವಾಗಿ 95 ಮತಗಳು ಚಲಾವಣೆಯಾಗಿದೆ.