ಸಂಸತ್ ಅಧಿವೇಶನದಲ್ಲಿ ಇಂದು ಬಹುನಿರೀಕ್ಷಿತ ಹಾಗು ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಮಾಡಲಾಗ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 4ರಂದು ಸಂಸತ್‌ನ ಬಜೆಟ್ ಅಧಿವೇಶನ ಕೊನೆಯಾಗಲಿದ್ದು, ಈ ಅಧಿವೇಶನದಲ್ಲೇ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿ ರಾಜ್ಯಸಭೆಯಲ್ಲೂ ವಕ್ಫ್ ಮಸೂದೆ ಅಂಗೀಕಾರ ಪಡೆಯಲು ಕೇಂದ್ರದ ಎನ್ಡಿಎ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ವಕ್ಫ್ ಮಸೂದೆ ಬಗ್ಗೆ ಚರ್ಚೆಗೆ 8 ಗಂಟೆಗಳ ಕಾಲಾವಕಾಶ ನೀಡಿದೆ. ವಕ್ಫ್ ಮಸೂದೆ ಮೇಲೆ ಚರ್ಚೆ ಮಾಡಲು ಸ್ಪೀಕರ್ ಓ ಬಿರ್ಲಾ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲೀಮರಿಗೆ ಅನ್ಯಾಯ ಆಗುತ್ತದೆ. ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆದ್ರೆ 180 ಗಂಟೆಗಳ ಕಾಲ ಒಟ್ಟಿಗೆ ಕುಳಿತು ಚರ್ಚೆ ಮಾಡಿದ್ದೀರಿ. ಒಟ್ಟಿಗೆ ಕುಳಿತು ಊಟ ಮಾಡಿದ್ರಿ.. ಎಲ್ಲದಕ್ಕೂ ಓಕೆ ಅಂತಾ ಹೇಳಿದವರು, ಈಗ್ಯಾಕೆ ವಿರೋಧಿಸ್ತಿದ್ದೀರಾ..? ಎಂದು ಜಂಟಿ ಸಂಸಧೀಯ ಸಮಿತಿ ಮುಖ್ಯಸ್ಥ ಜಗದಂಬಿಕಾ ಪಾಲ್ ಪ್ರಶ್ನೆ ಮಾಡಿದ್ದಾರೆ.

ನಮ್ಮ ಪಕ್ಷದ ಪರವಾಗಿ ಚರ್ಚೆಯಲ್ಲಿ ಭಾಗವಹಿಸ್ತೀನಿ. ವಕ್ಫ್ ತಿದ್ದುಪಡಿ ಕಾನೂನುಗಳಿಂದ ಆಗುವ ಸಮಸ್ಯೆಗಳನ್ನ ಚರ್ಚಿಸ್ತೀನಿ. ಈ ಮಸೂದೆ ಹೇಗೆ ಸಂವಿಧಾನಬಾಹಿರವಾಗಿದೆ. ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯ ಹೇಗೆ ಉಲ್ಲಂಘಿಸುತ್ತೆ, ಈ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದು ಓವೈಸಿ ಹೇಳಿದ್ರೆ, ವಕ್ಫ್ ತಿದ್ದುಪಡಿ ಬಗ್ಗೆ ಆರಂಭದಿಂದ್ಲೂ ವಿಪಕ್ಷಗಳು ಸುಳ್ಳು ಹೇಳ್ತಿವೆ. ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಓಕೆ ಅಂತಿದ್ರು ಹೊರಗೆ ವಿರೋಧಿಸ್ತಿದ್ರು. ನಮ್ಮ ಜೊತೆ ಊಟ ಮಾಡ್ತಿದ್ರು, ಮಾತಾಡ್ತಿದ್ರು.. JPC ದೇಶಾದ್ಯಂತ ಪ್ರವಾಸ ಮಾಡಿದೆ. ಎಲ್ಲಾ ವರ್ಗದವರ ಅಭಿಪ್ರಾಯ ಪಡೆದಿದೆ. ಈಗ ವಿಪಕ್ಷದವರು ಮುಸ್ಲೀಮರ ದಾರಿ ತಪ್ಪಿಸ್ತಿದ್ದಾರೆ. ತ್ರಿವಳಿ ತಲಾಖ್‌ನಲ್ಲೂ ಇವರದ್ದು ಇದೇ ನೀತಿ, CAA, NRC, ಆರ್ಟಿಕಲ್ 370 ವಿಷ್ಯದಲ್ಲೂ ವಿಪಕ್ಷದವರದ್ದು ದ್ವಂದ್ವ ನೀತಿ ಎಂದಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್‌ನವರು ಮೊಸಲಿನಿಂದಲೂ ವಿರೋಧ ಮಾಡಿಕೊಂಡೇ ಬಂದಿದ್ದು, ಇಂದು ಮಸೂದೆ ಮಂಡನೆ ವೇಳೆ ಚರ್ಚೆಗೆ ಅವಕಾಶ ಕೊಡ್ತಿದ್ದಂತೆ ವಿರೋಧ ವ್ಯಕ್ತಪಡಿಸಿ, ಚರ್ಚೆಗೆ ಅವಕಾಶ ಸಿಗದಿದ್ರೆ ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಿ ಹೊರ ಹೋಗಲು ನಿರ್ಧರ ಮಾಡಲಾಗಿದೆ ಎನ್ನಲಾಗ್ತಿದೆ. ಒಂದು ವೇಳೆ ವಿಪಕ್ಷಗಳು ಕಲಾಪ ಬಹಿಷ್ಕರಿಸಿದ್ರೆ ಬಿಜೆಪಿ ಪಕ್ಷಕ್ಕೇನು ನಷ್ಟವಿಲ್ಲ. ಇನ್ನು ವಿಪಕ್ಷಗಳೂ ಕೂಡ ವಿರೋಧ ಮಾಡಿಕೊಂಡು ಸದನದಲ್ಲಿ ಇದ್ದರೆ ಪರೋಕ್ಷ ಬೆಂಬಲ ಎನ್ನುವಂತೆ ಆಗಲಿದೆ. ಅದೇ ಕಾರಣಕ್ಕೆ ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಕೆಲವೊಂದು ತತಕ್ಷಣ ತೆಗೆದುಕೊಳ್ಳುವ ನಿರ್ಧಾರ ಹೇಗಿರುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಯೋಜನೆ ರೂಪಿಸಿದೆ ಅನ್ನೋದನ್ನು ಕಾದು ನೋಡಬೇಕು.