ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು (Waqf amendment act) ಇಂದು ಲೋಕಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran rijiju) ಮಂಡನೆ ಮಾಡಿದ್ದಾರೆ.ಈ ಮಸೂದೆ ಮಂಡನೆಯಾಗುತ್ತಿದಂತೆ ಕಾಂಗ್ರೆಸ್ (Congress) ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಲೋಕಸಭೆಯಲ್ಲಿ ವಕ್ಫ್ ಬಿಲ್ ಚರ್ಚೆಗೆ 8 ಗಂಟೆಗಳ ಸಮಯಾವಕಾಶ ನೀಡಲಾಗಿದ್ದು, ಈ ಬಗ್ಗೆ ಲೋಕಸಭೆಯಲ್ಲಿ ಗದ್ದಲ ಕೋಲಾಹಲ ಸೃಷಿಯಾಗೋದು ನಿಶ್ಚಿತವಾಗಿದೆ. ಆದ್ರೆ ಈ ಗದ್ದಲದ ನಡುವೆಯೂ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪಾಸ್ ಮಾಡಲು ಬೇಕಾದ ಸಂಖ್ಯಾಬಲ NDA ಬಳಿ ಇದೆ. ಹೀಗಾಗಿ ವಿರೋಧ ಪಕ್ಷಗಳು ಏನೇ ಗದ್ದಲ ಮಾಡಿದ್ರೂ ಎಂದು ಲೋಕಸಭೆಯಲ್ಲಿ ಬಿಲ್ ಪಾಸ್ ಆಗುವುದು ಶತಸಿದ್ಧ.

ಇಂದು ಲೋಕಸಭೆಯಲ್ಲಿ ಬಿಲ್ ಪಾಸ್ ಆದ ನಂತರ ನಾಳೆ ವಕ್ಫ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ. ಲೋಕಸಭೆಯಲ್ಲಿ ಬಹುಮತಕ್ಕೆ 272 ಸಂಸದರ ಅಗತ್ಯವಿದ್ದು, NDA ಬಳಿ 293 ರ ಸಂಖ್ಯಾಬಲವಿದೆ. ಇತ್ತ ರಾಜ್ಯ ಸಭೆಯಲ್ಲಿ 119 ಬಹುಮತವಾದ್ರೆ, NDA ಬಳಿ 125 ಸದಸ್ಯರ ಬಲವಿದೆ. ಹೀಗಾಗಿ ವಕ್ಫ್ ತಿದ್ದುಪಡಿ ಕಾಯ್ದೆ ಎರಡೂ ಮನೆಗಳಲ್ಲಿ ನಿರಾತಂಕವಾಗಿ ಅಂಗೀಕಾರವಾಗಲಿದೆ.