ಚಿಕ್ಕಬಳ್ಳಾಪುರ:ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನ ಸಂಹಾರ ಮಾಡಲು ಮೋದಿ ಸಾಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನ ಸಂಹಾರ ಮಾಡ್ತಾರೆ ಎಂದರು.
ವಕ್ಫ್ ಬೋರ್ಡ್ ಎಂಬುದು ತಿಮಿಂಗಲ, ಪಿಶಾಚಿ, ಕೊಳ್ಳಿ ದೆವ್ವ, ರಾಕ್ಷಸ ಇದ್ದ ಹಾಗೆ. ಈ ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಪ್ರಧಾನಿ ಮೋದಿ ಸಂಹಾರ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ವಕ್ಫ್ ಕೊಳ್ಳಿ ದೆವ್ವ ಇದ್ದ ಹಾಗೆ, ಅವರು ಕಾಲಿಟ್ಟ ಜಾಗವೆಲ್ಲ ಅವರದ್ದೇ ಅಂತಾರೆ. ಇಂತಹ ಬೋರ್ಡ್ ಇರಬೇಕಾ? ಖಂಡಿತಾ ವಜಾ ಆಗಬೇಕು. ಹಿಂದೂ, ಬೌದ್ಧರು, ಕ್ರೈಸ್ತರಿಗಿಲ್ಲದ ವಿಶೇಷ ಸ್ಥಾನಮಾನ ಇವರಿಗೆ ಯಾಕೆ? ಅಂಬೇಡ್ಕರ್ ಸಂವಿಧಾನ ಇವರಿಗೆ ಅನ್ವಯ ಆಗಲ್ವಾ? ಇದು ಕಾಂಗ್ರೆಸ್ ಮನೆಹಾಳು ಬುದ್ದಿ ಹಾಗಾಗಿ ಅಧಿವೇಶನದಲ್ಲಿ ನಾವು ಸಹ ವಕ್ಫ್ ಬೋರ್ಡ್ ವಜಾ ಮಾಡಬೇಕು ಅಂತ ಹೋರಾಟ ಮಾಡ್ತೇವೆ ಎಂದು ಗುಡುಗಿದರು.
ವಕ್ಫ್ ಬೋರ್ಡ್ಗೆ ತಿಮಿಂಗಲ ಬೋರ್ಡ್ ಅಂತ ಹೆಸರಿಡಬೇಕು. ತಿಮಿಂಗಲದ ಕೆಲಸ ಎಲ್ಲವನ್ನೂ ನುಂಗಿ ಹಾಕೋದು. ಅದೇ ರೀತಿ ವಕ್ಫ್ ಬೋರ್ಡ್ ಸಹ ರೈತರ ಎಲ್ಲರ ಜಮೀನು ನುಂಗಿ ಹಾಕುತ್ತಿದೆ. ಹಾಗಾಗಿ ಅಧಿವೇಶನದ ಸಮಯದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಿ, ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ ಎಂದು ನುಡಿದರು.