ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಬಂದಿರುವುದನ್ನ ವಿರೋಧಿಸಿ ರೈತರು ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಜಯಪುರ ಜಿಲ್ಲೆ ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ..
ರಾತ್ರಿ ಊಟಕ್ಕೆ ಉಪ್ಪಿಟ್ಟು ಸೇವಿಸಿ, ರೈತರು ಹಾಡಿದ ಜನಪದ ಹಾಡುಗಳನ್ನ ಕೇಳುತ್ತ ಕಾಲ ಕಳೆದಿದ್ದಾರೆ.. ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.. ಚುನಾವಣೆ ಭಯದಿಂದಲೇ ರೈತರಿಗೆ ಕೊಟ್ಟಿದ್ದ ವಕ್ಫ್ ನೋಟಿಸ್‌ಗಳನ್ನ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ..
ಉಪ ಚುನಾವಣೆ ಆದ್ಮೇಲೆ ಮತ್ತೆ ವಕ್ಫ್ ನೋಟಿಸ್‌ಗಳನ್ನ ಜಾರಿ ಮಾಡ್ತಾರೆ. ಈ ಹಿಂದೆ ಇದೆ ರೀತಿ ಕಾಂಗ್ರೆಸ್ ಪಕ್ಷ ಮಾಡಿದೆ.. ನಾವು ಇದರ ವಿರುದ್ಧ ಗಂಭೀರವಾಗಿ ಹೋರಾಟಕ್ಕೆ ಇಳಿದಿದ್ದೇವೆ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ..