• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಗಂಜಿಗುಂಟೆ – ಬಶೆಟ್ಟಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮುಖಂಡರ ಮತಯಾಚನೆ

Any Mind by Any Mind
April 29, 2023
in ರಾಜಕೀಯ
0
ಗಂಜಿಗುಂಟೆ – ಬಶೆಟ್ಟಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮುಖಂಡರ ಮತಯಾಚನೆ
Share on WhatsAppShare on FacebookShare on Telegram

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ(BJP) ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರವಾಗಿ ಮುಖಂಡರಾದ ಸೀಕಲ್ ಆನಂದ ಗೌಡ ಮತ್ತಿತರ ಮುಖಂಡರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ದೇಶಕ್ಕೆ ನರೇಂದ್ರ ಮೋದಿ ನೀಡಿರುವ ಕೊಡುಗೆ ಅಪಾರವಾದದ್ದು. ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿಯವರ(narendra modi) ಸಮಗ್ರ ಅಭಿವೃದ್ಧಿ ಮತ್ತು ಸಮಾಜ ನಿರ್ಮಾಣಕ್ಕಾಗಿ ಮತದಾರರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಶಿಡ್ಲಘಟ್ಟ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮುಖಂಡ ಆನಂದ ಗೌಡ(ananda gowda) ಮನವಿ ಮಾಡಿಕೊಂಡರು. ದೇಶದ ಅಭಿವೃದ್ಧಿಯ ಬಗ್ಗೆ ಸದಾ ಕನಸು ಕಾಣುತ್ತಿರುವ ನರೇಂದ್ರ ಮೋದಿಯ(narendra modi) ರೀತಿಯಲ್ಲಿ ಸೀಕಲ್ ರಾಮಚಂದ್ರಗೌಡರು ಶಿಡ್ಲಘಟ್ಟಕ್ಕೆ(shidlaghatta) ಕ್ಷೇತ್ರದ ಅಭಿವೃದ್ಧಿಗೆ  ಕನಸು ಕಾಣುತ್ತಿದ್ದಾರೆ ಅವರ ಕೈ ಬಲಪಡಿಸಿ ಕ್ಷೇತ್ರದ ಅಭಿವೃದ್ಧಿಯನ್ನು ಕಾಣಬೇಕೆಂದು ಗ್ರಾಮದ ಬಿಜೆಪಿ(BJP) ಯುವ ಮುಖಂಡರುಗಳು ಅಭಿಪ್ರಾಯಪಟ್ಟರು.

ADVERTISEMENT

ಗಂಜಿಗುಂಟೆ(ganjigunte) ಹಾಗೂ ಬಶೆಟ್ಟಹಳ್ಳಿ (bashettahalli)ಗ್ರಾ.ಪಂ ವ್ಯಾಪ್ತಿಯ ನಾಚಗಾನಹಳ್ಳಿ, ಯೆರ್ರಹಳ್ಳಿ, ಕಡುಪಕುಂಟೆ, ಅಲಗುರ್ಕಿ, ರಾಯಪ್ಪನಹಳ್ಳಿ, ತಿಮ್ಮನಾಯಕನಹಳ್ಳಿ, ನಕ್ಕಲಹಳ್ಳಿ, ನಲ್ಲಜನಹಳ್ಳಿ, ಗೊರ್ಲಗುಮ್ಮನಹಳ್ಳಿ, ಗೋಣಿಮರದಹಳ್ಳಿ, ಜಿ.ಕೆ.ಹೊಸೂರು, ಕುರುಬರಹಳ್ಳಿ, ಚೊಕ್ಕನಹಳ್ಳಿ, ಬ್ರಾಹ್ಮಣರಹಳ್ಳಿ, ಗಂಗಹಳ್ಳಿ, ದೇವಗುಟ್ಟಹಳ್ಳಿ, ಗಂಜಿಗುಂಟೆ, ಹಳೆ ಗಂಜಿಗುಂಟೆ, ದೊಡ್ಡಬಂದರ ಘಟ್ಟ, ಚಿಕ್ಕಬಂದರಘಟ್ಟ, ಪುಲಕುಂಟಹಳ್ಳಿ, ಹಕ್ಕಿಬಿಕ್ಕಿ ಕಾಲೋನಿ, ಕ್ಯಾಸ ಕೆರೆ, ಬಾಳೆ ಗೌಡನ ಹಳ್ಳಿ, ವೇಮಗಲ್, ಕೊಂಡರಾಜನಹಳ್ಳಿ, ಪಲ್ಲಿಗಡ, ಲಕ್ಕೇನಹಳ್ಳಿ ಗ್ರಾಮಗಳಲ್ಲಿ ಮತ ಪ್ರಚಾರ ನಡೆಸಿದರು. ಮುಖಂಡರಾದ ನಾಚಗಾನಹಳ್ಳಿ ಅಕ್ಕಲಪ್ಪ, ಯೆರ್ರಹಳ್ಳಿ  ನಾರಾಯಣಸ್ವಾಮಿ, ಕಡುಪಕುಂಟೆ ಶ್ರೀನಿವಾಸ್, ರಾಯಪ್ಪನ ಹಳ್ಳಿ ಶ್ರೀನಾಥ್, ತಿಮ್ಮನಾಯಕನಹಳ್ಳಿ ವೆಂಕಟ ರೆಡ್ಡಿ, ಅಲಗುರ್ಕಿ ಸುಬ್ಬಾ ರೆಡ್ಡಿ, ನಕ್ಕಲಹಳ್ಳಿ ಲಗುಮಪ್ಪ, ದಡಂ ಘಟ್ಟ ಪೆದ್ದೋಡು, ಗೊರ್ಲ ಗುಮ್ಮನಹಳ್ಳಿ ವೆಂಕಟರೆಡ್ಡಿ, ಲಗನಾಯಕನಹಳ್ಳಿ ಶಿವಣ್ಣ, ತೊಕಲಹಳ್ಳಿ ಶಿವಣ್ಣ, ಎಲ್ ಎನ್ ಹೊಸೂರು ಶಿವಣ್ಣ, ಗೋಣಿಮರದಹಳ್ಳಿ ಪ್ರಕಾಶ, ಜೆ ಕುರುಬರಹಳ್ಳಿ ನಾಗರಾಜು ಅವರು ಅವರವರ ಗ್ರಾಮಗಳಲ್ಲಿ ನೇತೃತ್ವ ವಹಿಸಿ ಮುಖಂಡರ ಸಮ್ಮುಖದಲ್ಲಿ ಪ್ರಚಾರ ನಡೆಸಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ(bjp candidate) ಸೀಕಲ್ ರಾಮಚಂದ್ರಗೌಡರ ಪರವಾಗಿ ಗ್ರಾಮದ ಬಿಜೆಪಿ ಯುವ ಮುಖಂಡರುಗಳು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ದೇಶ ಹಾಗೂ ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ದೇಶದ ಅಭಿವೃದ್ಧಿಗಾಗಿ, ಹಿಂದುತ್ವಕ್ಕಾಗಿ , ಡಿಜಿಟಲ್ ಇಂಡಿಯಾ(digital india) ಹಾಗೂ ಇಡೀ ಪ್ರಪಂಚದ ಉದ್ದಕ್ಕೂ ಭಾರತದ ಹೆಸರನ್ನು ಸಾರಿದಂತಹ ಪ್ರಧಾನಿ ನರೇಂದ್ರ ಮೋದಿಜಿಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ(BJP) ಪಕ್ಷಕ್ಕೆ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು. ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಯಾವುದೆ ಅಭಿವೃದ್ಧಿ ಆಗದೆ ಇದ್ದು, ಈ ಬಾರಿ ಕ್ಷೇತ್ರದ ಅಭಿವೃದ್ಧಿಗೆ ಸೀಕಲ್ ರಾಮಚಂದ್ರಗೌಡರು ಬಂದಿದ್ದು, ಅವರ ಕೈ ಬಲಪಡಿಸುವ ಮೂಲಕ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ(assembly election) ಅವರನ್ನು ಜಯಶೀಲರನ್ನಾಗಿ ಮಾಡಿ ತಾಲೂಕಿನ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಾಗಿದೆ ಎಂದರು.

Tags: #bjp#campaign#congress#election2023#jds#karnataka#karnatakaassemblyelection#pratidhvani#pratidhvanidigital#pratidhvaninews
Previous Post

ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ‌

Next Post

ನಟ ಕಿಚ್ಚ ಸುದೀಪ್‌ ಬಿಜೆಪಿ ಪರ ಪ್ರಚಾರಕ್ಕೆ ಬ್ರೇಕ್..! ‌

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
ರಾಜಕೀಯ

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

by ಪ್ರತಿಧ್ವನಿ
May 27, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದೆ....

Read moreDetails
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post
ನಟ ಕಿಚ್ಚ ಸುದೀಪ್‌ ಬಿಜೆಪಿ ಪರ ಪ್ರಚಾರಕ್ಕೆ ಬ್ರೇಕ್..! ‌

ನಟ ಕಿಚ್ಚ ಸುದೀಪ್‌ ಬಿಜೆಪಿ ಪರ ಪ್ರಚಾರಕ್ಕೆ ಬ್ರೇಕ್..! ‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada