ನಾಳೆ ಚುನಾವಣೆಗೆ ರಜೆ ಇದೆ ಅಂತ ಟೂರ್ ಪ್ಲಾನ್(Tour plan) ಮಾಡಿದವರಿಗೆ ಖಾಸಗಿ ಸಾರಿಗೆ ಸಂಘಟನೆಗಳು ಶಾಕ್ (Shock) ಕೊಟ್ಟಿವೆ. ಮತ ಚಲಾಯಿಸಲು ಕೆಲ ಕಂಪನಿಗಳಲ್ಲಿ ನೀಡಿದ ರಜೆಯನ್ನೇ ಬಂಡವಾಳ ಮಾಡ್ಕೊಂಡ ಟೆಕ್ಕಿಗಳು (Techie) ಟ್ರಿಪ್‌ಗೆ ಪ್ಲಾನ್ ಮಾಡಿದ್ರು. ಹೀಗಾಗಿ ಮತದಾನದ ದಿನ 200ಕ್ಕೂ ಅಧಿಕ ಟ್ರಿಪ್ ಕ್ಯಾನ್ಸಲ್ ಮಾಡಲಾಗಿದ್ದು, ಇದಕ್ಕೆ 32 ಕ್ಕೂ ಅಧಿಕ ಸಂಘಟನೆಗಳು ಒಪ್ಪಿವೆ.
ಕೈ ಬೆರಳಿಗೆ ಇಂಕ್ (Ink) ಹಚ್ಚಿರೋದು ತೋರಿಸಿದ್ರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ. ಇತ್ತ ಕ್ಯಾಬ್ (cab), ಟ್ಯಾಕ್ಸಿ (taxi) ಓಡಾಟ ಮಾಡದಂತೆ ತೀರ್ಮಾನ ಮಾಡಲಾಗಿದ್ದು, 12 ಗಂಟೆಯವರೆಗೂ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಸಿಗೋದು ಡೌಟ್ ಎನ್ನಲಾಗ್ತಿದೆ. ಸಿಲಿಕಾನ್ ಸಿಟಿ (silion city) ಅತೀ ಕಡಿಮೆ ಮತದಾನದ ಪ್ರಮಾಣಕ್ಕೆ ಕುಖ್ಯಾತಿ ಪಡೆದಿದ್ದು, ಇದ್ರಿಂದ ಹೊರತರಲು ಚುನಾವಣಾ ಆಯೋಗದ ಕಸರತ್ತಿಗೆ ಖಾಸಗಿ ಸಂಘಟನೆಗಳು ಸಪೋರ್ಟ್ ಮಾಡ್ತಿದೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ (voting) ನಡೆಯಲಿದೆ. ಈಗಾಗಲೇ ಮನೆ ಮನೆಗೆ ವೋಟರ್ ಸ್ಲಿಪ್ (voterslip) ವಿತರಣೆ ಮಾಡಲಾಗಿದೆ. ಸದ್ಯ ವೋಟರ್ ಲೀಸ್ಟ್‌ನಲ್ಲಿ ಹೆಸರಿದ್ದು, ಗುರುತಿನ ಚೀಟಿ ಇಲ್ಲದಿದ್ದರೂ ವೋಟ್ ಮಾಡಲು ಕೇಂದ್ರ ಚುನಾವಣ ಆಯೋಗ ಅವಕಾಶ ನೀಡಿದೆ. ಆಧಾರ್ ಕಾರ್ಡ್ (aadhar card), ಬ್ಯಾಂಕ್ (bank) ಅಥವಾ ಅಂಚೆ ಕಚೇರಿಯ ಪಾಸ್ ಬುಕ್ (post office passbook), ಡ್ರೈವಿಂಗ್ ಲೈಸೆನ್ಸ್(Driving license), ಪಾನ್ ಕಾರ್ಡ್ (pan card) ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ಯಾವುದೇ ದಾಖಲೆ ತೋರಿಸಿ ಮತದಾನ ಮಾಡಬಹುದು.